- Kannada News Photo gallery Sandalwood actress Ragini Dwivedi poses glamorous photoshoot in bathtub mdn
Ragini Dwivedi: ಬಾತ್ ಟಬ್ನಲ್ಲಿ ಗ್ಲಾಮರಸ್ ಆಗಿ ಫೋಟೋಗೆ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಇಲ್ಲಿದೆ ಗ್ಯಾಲರಿ
Ragini Dwivedi Photos: ರಾಗಿಣಿ ದ್ವಿವೇದಿ ಅವರು ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಗ್ಲಾಮರಸ್ ಆಗಿ ಅವರು ಪೋಸ್ ನೀಡಿದ್ದು, ಅಭಿಮಾನಿಗಳಿಗೆ ಈ ಫೋಟೋಗಳು ಇಷ್ಟ ಆಗಿವೆ.
Updated on:Feb 03, 2023 | 5:28 PM

ನಟಿ ರಾಗಿಣಿ ದ್ವಿವೇದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರ ಒಂದಷ್ಟು ಹೊಸ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ.

ಬಾತ್ ಟಬ್ನಲ್ಲಿ ಕುಳಿತು ರಾಗಿಣಿ ದ್ವಿವೇದಿ ಅವರು ಪೋಸ್ ನೀಡಿದ್ದಾರೆ. ಗ್ಲಾಮರಸ್ ಆಗಿ ಮೂಡಿಬಂದಿರುವ ಈ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಬಗೆ ಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಗ್ಲಾಮರ್ ವಿಚಾರದಲ್ಲಿ ರಾಗಿಣಿ ದ್ವಿವೇದಿ ಎಂದಿಗೂ ಹಿಂದೇಟು ಹಾಕಿಲ್ಲ. ಸಿನಿಮಾಗಳಲ್ಲಿ ಅವರು ಗ್ಲಾಮರಸ್ ಆಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಗೆಯೇ, ಫೋಟೋಶೂಟ್ ಸಲುವಾಗಿಯೂ ಅವರು ಹಲವು ಬಾರಿ ಹಾಟ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದುಂಟು.

ಕನ್ನಡ ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಅನೇಕ ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಮನೆಮಾತಾಗಿದ್ದಾರೆ. ಈಗ ಪರಭಾಷೆಯಿಂದಲೂ ಅವರಿಗೆ ಆಫರ್ಗಳು ಬರುತ್ತಿವೆ.

ಹಿಂದಿ ಸಿನಿಮಾವೊಂದರಲ್ಲಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಆ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಲಂಡನ್ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಲಾಗಿದೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾ ಎಂಬುದು ವಿಶೇಷ.
Published On - 5:28 pm, Fri, 3 February 23



















