Updated on:Feb 03, 2023 | 11:10 PM
ಏಕತೆ ಪ್ರತಿಮೆ: ಭಾರತದ ಗುಜರಾತ್‌ನ ಕೆವಾಡಿಯಾ ಬಳಿಯಿರುವ ಏಕತೆಯ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ 182 ಮೀಟರ್ ಇದೆ. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿಸಲಾಗಿದೆ.
ಬರ್ತ್ ಆಫ್ ದಿ ನ್ಯೂ ವರ್ಲ್ಡ್: ಕ್ರಿಸ್ಟೋಫರ್ ಕೊಲಂಬಸ್ನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ. ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.
ಸ್ಪ್ರಿಂಗ್ ಟೆಂಪಲ್ ಬುದ್ಧ: ಚೀನಾದ ಹೆನಾನ್‌ನ ಲುಶನ್ ಕೌಂಟಿಯ ಜಾಕುನ್ ಟೌನ್‌ಶಿಪ್‌ನಲ್ಲಿದೆ. ಇದು ವೈರೋಕಾನಾ ಬುದ್ಧನನ್ನು ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದನ್ನು 1997 ರಿಂದ 2008 ರವರೆಗೆ ನಿರ್ಮಿಸಲಾಯಿತು.
ವಿಶ್ವಾಸ್ ಸ್ವರೂಪ್ ಪ್ರತಿಮೆ: ರಾಜಸ್ಥಾನದ ನಾಥದ್ವಾರದಲ್ಲಿರುವ ಹಿಂದೂ ದೇವರು ಶಿವನ ಪ್ರತಿಮೆಯಾಗಿದೆ. ಇದು ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ.
ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್: ಬುದ್ಧನ ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ಮ್ಯಾನ್ಮಾರ್‌ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.
Published On - 11:09 pm, Fri, 3 February 23