Mirror Cleaning Tips : ನಿಮ್ಮ ಮನೆಯ ಕನ್ನಡಿ ಫಳಫಳ ಹೊಳೆಯುವಂತೆ ಮಾಡುವುದೇಗೆ? ಈ ಟಿಪ್ಸ್ ಫಾಲೋ ಮಾಡಿ
ಯಾರೂ ತಾನೇ ಕನ್ನಡಿಯ ಮುಂದೆ ನಿಂತು ಮುಖವನ್ನು ನೋಡಲ್ಲ ಹೇಳಿ. ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳಂತೂ ಮುರೊತ್ತು ಕನ್ನಡಿಯ ಮುಂದೆಯೇ ಇರುತ್ತಾರೆ. ಮನೆಯ ಕನ್ನಡಿಯು ಸ್ವಚ್ಛವಾಗಿದ್ದರೆ ನಿಮ್ಮ ಮುಖವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಆದರೆ ಹೆಚ್ಚಿನವರ ಮನೆಯಲ್ಲಿ ಕನ್ನಡಿಯು ಧೂಳು ಹಾಗೂ ಕಪ್ಪು ಕಲೆಗಳಿಂದ ಕಳೆಗುಂದಿರುತ್ತದೆ. ಹೀಗಾಗಿದ್ರೆ ಕನ್ನಡಿಯನ್ನು ಮನೆಯಲ್ಲೇ ಸುಲಭವಾಗಿ ಸ್ವಚ್ಛ ಗೊಳಿಸಬಹುದು.
ಹೆಣ್ಣು ಮಕ್ಕಳಿಗೆ ಕನ್ನಡಿಯೆಂದರೆ ಬಲು ಪ್ರಿಯ. ಹೆಂಗಳೆಯರ ಆಪ್ತ ಸಂಗಾತಿ ಅಂದ್ರೆ ಅದು ಕನ್ನಡಿಯೇ ಆಗಿರುತ್ತದೆ. ಇದನ್ನು ಸೌಂದರ್ಯ ಸಾಧನವಾಗಿ ಬಳಕೆ ಮಾಡಲಾಗಿದ್ದು, ಮೇಕಪ್ ಮಾಡುವಾಗ ಮೊದಲು ನೆನಪಾಗುವುದೇ ಕನ್ನಡಿ. ಆದರೆ ಹೆಚ್ಚಿನವರು ಕನ್ನಡಿಯ ಸ್ವಚ್ಛತೆಯ ಕಡೆಗೆ ಗಮನ ಕೊಡುವುದಿಲ್ಲ. ಹೀಗಾಗಿ ಕನ್ನಡಿ ತುಂಬೆಲ್ಲಾ ಧೂಳು, ಕೊಳೆ ತುಂಬಿಕೊಂಡು ಮಸುಕಾಗಿರುತ್ತದೆ. ಮನೆಯಲ್ಲಿರುವ ಈ ವಸ್ತುಗಳಿಂದ ಕನ್ನಡಿಯನ್ನು ಫಳಫಳನೇ ಹೊಳೆಯುವಂತೆ ಮಾಡಬಹುದು.
* ಕನ್ನಡಿಯನ್ನು ಸ್ವಚ್ಛಗೊಳಿಸಲು ದಿನ ಪತ್ರಿಕೆಯನ್ನು ಬಳಸಬಹುದು. ದಿನಪತ್ರಿಕೆಯನ್ನು ನೀರಿನಲ್ಲಿ ಅದ್ದಿ, ಗ್ಲಾಸ್‌ನ ಮೇಲೆ ನಿಧಾನವಾಗಿ ಒರೆಸಿದರೆ ಗ್ಲಾಸ್ ನ ಮೇಲಿರುವ ಧೂಳು ಹಾಗೂ ಕಲೆಗಳು ಹೋಗುತ್ತದೆ.
* ಟೂತ್ ಪೇಸ್ಟ್ ನಿಂದ ಕನ್ನಡಿಯನ್ನು ಸ್ವಚ್ಛಗೊಳಿಸಿ ಫಳಫಳನೆ ಹೊಳೆಯುವಂತೆ ಮಾಡಬಹುದು. ಬಿಳಿ ಬಣ್ಣದ ಟೂತ್ ಪೇಸ್ಟ್ ಅನ್ನು ನೀರಿನಲ್ಲಿ ಬೆರೆಸಿ ಅದನ್ನು ಕನ್ನಡಿಗೆ ಹಚ್ಚಿ ಒಣ ಬಟ್ಟೆಯಿಂದ ಒರೆಸಿದರೆ ಕಲೆಗಳು ಮಾಯವಾಗಿ ಹೊಳಪು ಹೆಚ್ಚಾಗುತ್ತದೆ.
* ಕನ್ನಡಿಯ ಮೇಲಿನ ಕಲೆಯನ್ನು ನಿವಾರಿಸಲು ಆಲ್ಕೋಹಾಲ್ ಬಳಸುವುದು ಉತ್ತಮ. ಆಲ್ಕೋಹಾಲ್ ಬಾಟಲಿಯಲ್ಲಿ ತುಂಬಿಸಿ ಕನ್ನಡಿಯ ಮೇಲೆ ಸ್ಟ್ರೇ ಮಾಡಿ ಶುದ್ಧ ಬಟ್ಟೆಯಿಂದ ಒರೆಸುವುದು ಪರಿಣಾಮಕಾರಿ.
ಇದನ್ನೂ ಓದಿ: ಕೆಲಸ ಮಾಡಿ ಸುಸ್ತಾಗಿದ್ದರೆ ದೇಹಕ್ಕೆ ಎನರ್ಜಿ ಕೊಡುತ್ತೆ ಈ ಆಹಾರ! ಒಮ್ಮೆ ಸೇವಿಸಿ ನೋಡಿ
* ಬಿಳಿ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಬೆರೆಸಿ ಈ ಮಿಶ್ರಣವನ್ನು ಕನ್ನಡಿ ಮೇಲೆ ಹಾಕಿ ಹತ್ತು ನಿಮಿಷ ಹಾಗೇ ಬಿಟ್ಟು ನಂತರ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ ಕಪ್ಪಾದ ಕನ್ನಡಿಯು ಬಿಳಿಯಾಗುತ್ತದೆ.
* ಮೂರು ಚಮಚ ನಿಂಬೆ ರಸ ಹಾಗೂ ಬಿಳಿ ವಿನೆಗರ್ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು, ಕನ್ನಡಿಯ ಮೇಲೆ ಸಿಂಪಡಿಸಿ ಚೆನ್ನಾಗಿ ಒರೆಸಿದರೆ ಕನ್ನಡಿಯು ಫಳಫಳನೇ ಹೊಳೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: