ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ?

ವಾಕಿಂಗ್‌ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ವಾಕಿಂಗ್‌ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದಕ್ಕಾಗಿ ಇಂದಿನ ದಿನಗಳಲ್ಲಿ ಹಲವರು ಬೆಳಗ್ಗೆ, ಸಂಜೆ ಮತ್ತು ರಾತ್ರಿ ಊಟ ಮಾಡಿದ ನಂತರ ವಾಕಿಂಗ್‌ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಆದರೆ ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಬೆಸ್ಟ್‌ ಅನ್ನೋದು ನಿಮಗೆ ಗೊತ್ತಾ? ಬೆಳಗ್ಗೆ ಅಥವಾ ಸಂಜೆ ಯಾವ ಸಮಯಲ್ಲಿ ವಾಕಿಂಗ್‌ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 11, 2025 | 5:55 PM

ನಮ್ಮ ದೇಹ ಆರೋಗ್ಯಕರವಾಗಿರಬೇಕೆಂದರೆ, ಆರೋಗ್ಯಕರ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯ ಪಾಲನೆ ಎಷ್ಟು ಮುಖ್ಯವೋ,  ದೈಹಿಕ ಚಟುವಟಿಕೆ ಕೂಡಾ ಅಷ್ಟೇ ಮುಖ್ಯ. ಇದಕ್ಕಾಗಿ ಹೆಚ್ಚಿನವರು ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರೆ, ಇನ್ನೂ ಕೆಲವರು ಬೆಳಗ್ಗೆ, ಸಂಜೆ ವಾಕಿಂಗ್‌ (Walking)  ಮಾಡುತ್ತಾರೆ. ಈ ವಾಕಿಂಗ್‌ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮವಾಗಿದೆ. ಪ್ರತಿನಿತ್ಯ ವಾಕಿಂಗ್‌ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ, ಶ್ವಾಸಕೋಶ, ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ, ಅಲ್ಲದೆ ಒತ್ತಡ, ಆತಂಕ ಕಡಿಮೆಯಾಗಿ ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ. ಆದರೆ ಸಮಯದಲ್ಲಿ ವಾಕಿಂಗ್‌ ಮಾಡುವುದು ಹೆಚ್ಚು ಪರಿಣಾಮಕಾರಿ ಅನ್ನೋದು ಗೊತ್ತಾ? ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ ಅನ್ನೋದನ್ನು ತಿಳಿಯಿರಿ.

ಬೆಳಗ್ಗೆ ಅಥವಾ ಸಂಜೆ, ಯಾವ ವಾಕಿಂಗ್‌ ಹೆಚ್ಚು ಪ್ರಯೋಜನಕಾರಿ:

ಆರೋಗ್ಯ ತಜ್ಞರು ಹೇಳುವಂತೆ ಯಾವುದೇ ಸಮಯದಲ್ಲಿ ವಾಕಿಂಗ್‌ ಮಾಡಿದರೂ, ಅದು ಅಪ್ರಯೋಜನಕಾರಿ.  ಅದರಲ್ಲೂ ಬೆಳಗ್ಗಿನ ವಾಕಿಂಗ್‌ ಹೆಚ್ಚು ಪ್ರಯೋಜನಕಾರಿಯಂತೆ. ಹೌದು ಬೆಳಗ್ಗಿನ ವಾಕಿಂಗ್‌ ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸಗೊಳಿಸುವ ಒಂದು ರೀತಿಯ ಉತ್ತೇಜಕವಾಗಿದೆ. ಬೆಳಗಿನ ವಾಕಿಂಗ್‌ ಸಮಯದಲ್ಲಿ ಬೆಳಗಿನ ಸೂರ್ಯನ ಬೆಳಕಿನಿಂದ ವಿಟಮಿನ್-ಡಿ ಸಿಗುತ್ತದೆ, ಸೂರ್ಯನಿಂದ ಲಭಿಸುವ ಈ ನೈಸರ್ಗಿಕ ವಿಟಮಿನ್‌ ಡಿ ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ.
ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ತುಂಬಾನೇ ಒಳ್ಳೆಯದು. ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು, ಕೊಬ್ಬನ್ನು ಪರಿಣಾಮಕಾರಿಯಾಗಿ ಸುಡಲು ಹಾಗೂ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಸಂಜೆ ವಾಕಿಂಗ್‌ ಮಾಡುವುದರ ಪ್ರಯೋಜನ:

ಸಂಜೆಯ ವಾಕಿಂಗ್‌ ಕೂಡ ಪ್ರಯೋಜನಕಾರಿಯಾಗಿದೆ. ಸಂಜೆ ವಾಕಿಂಗ್‌ ಮಾಡುವುದರಿಂದ ದೇಹದಲ್ಲಿನ ಎಂಡಾರ್ಫಿನ್‌ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಕೆಲಸದಿಂದಾಗಿ ಒತ್ತಡಕ್ಕೆ ಒಳಗಾದವರು, ಪ್ರನಿತ್ಯ ಸಂಜೆ ವಾಕಿಂಗ್ ಮಾಡುವುದು ತುಂಬಾನೇ ಒಳ್ಳೆಯದು. ಇನ್ನೂ ಊಟ ಮಾಡಿದ ನಂತರ ವಾಕಿಂಗ್‌ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಕೊಳ್ಳುತ್ತದೆ. ಮತ್ತು ಗ್ಯಾಸ್‌, ಹೊಟ್ಟೆಯುಬ್ಬರ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು.

ಇದನ್ನೂ ಓದಿ
ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಎಂಜಲೇ ಮದ್ದಂತೆ
ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ
ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಕೆಲವು ಆಹಾರಗಳನ್ನು ತಿನ್ನಲೇಬೇಡಿ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?

ಸಂಜೆಯ ವಾಕಿಂಗ್‌  ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ. ಊಟದ ನಂತರ ನಡೆಯುವುದು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಮತ್ತು ಸಂಜೆಯ ವಾಕಿಂಗ್ ಎರಡೂ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿದಿನ ಕನಿಷ್ಠ 10 ಸಾವಿರ ಹೆಜ್ಜೆಗಳು ನಡೆಯಬೇಕು ಎಂದು ಅಧ್ಯಯನವೊಂದು ಹೇಳಿದೆ.

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?

ವಾಕಿಂಗ್‌ನ ಆರೋಗ್ಯ ಪ್ರಯೋಜನ:

ನೀವು ಪ್ರತಿದಿನ 10,000 ಹೆಜ್ಜೆಗಳು ನಡೆಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಲಭಿಸುತ್ತದೆ. ಅನೇಕ ಅಧ್ಯಯನಗಳೂ ಈ ಅಂಶವನ್ನು ದೃಢಪಡಿಸಿವೆ. ತಜ್ಞರ ಪ್ರಕಾರ ವಾಕಿಂಗ್ ವ್ಯಾಯಾಮದ ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ವಾಕಿಂಗ್ ಹೃದಯದ ಆರೋಗ್ಯ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಇದು ಮಾತ್ರವಲ್ಲದೆ, ಒತ್ತಡ-ಆತಂಕವನ್ನು ಕಡಿಮೆ ಮಾಡಲು, ಮನಸ್ಥಿತಿ ಮತ್ತು ಅರಿವಿನ ಕಾರ್ಯಗಳನ್ನು ಸುಧಾರಿಸಲು ಸಹ ಇದು ಸಹಾಯಕವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ