
ದಿನನಿತ್ಯ ಸ್ನಾನ (bath) ಮಾಡುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಸ್ನಾನವು ದೇಹವನ್ನು ಹೊರಗಿನಿಂದ ಶುದ್ಧೀಕರಿಸುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿ ಬಹುತೇಕ ಹೆಚ್ಚಿನವರು ಪ್ರತಿನಿತ್ಯ ತಪ್ಪದೆ ಸ್ನಾನ ಮಾಡ್ತಾರೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದ್ರೆ, ಇನ್ನೂ ಒಂದಷ್ಟು ಜನರಿಗೆ ಸಂಜೆ, ರಾತ್ರಿ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ರಾತ್ರಿ ಅಥವಾ ಬೆಳಗ್ಗೆ ಇವೆರಡರಲ್ಲಿ ಸ್ನಾನಕ್ಕೆ ಯಾವ ಟೈಮ್ ಬೆಸ್ಟ್? ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಪ್ರಯೋಜಗಳು ಹೆಚ್ಚು ಎಂಬ ಇಂಟರೆಸ್ಟಿಂಗ್ ಸಂಗತಿಯನ್ನು ತಿಳಿಯಿರಿ.
ಸ್ನಾನ ಮಾಡಲು ಸರಿಯಾದ ಸಮಯವು ನಿಮ್ಮ ವೈಯಕ್ತಿಕ ದಿನಚರಿ, ಕೆಲಸದ ದಿನಚರಿ ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ನಿಮ್ಮ ದಿನವನ್ನು ಶಕ್ತಿಯಿಂದ ಪ್ರಾರಂಭಿಸಲು ಬಯಸಿದರೆ, ಬೆಳಿಗ್ಗೆ ಸ್ನಾನ ಮಾಡುವುದು ಸೂಕ್ತ.ನೀವು ಆಯಾಸವನ್ನು ತೊಡೆದುಹಾಕಲು ಒತ್ತಡ ನಿವಾರಿಸಲು ಮತ್ತು ಉತ್ತಮ ನಿದ್ರೆ ಪಡೆಯಲು ಬಯಸಿದರೆ, ರಾತ್ರಿಯ ಸಮಯವು ಸ್ನಾನ ಮಾಡಲು ಉತ್ತಮವಾಗಿದೆ. ಕೆಲವೊಮ್ಮೆ ಎರಡೂ ಸಮಯಗಳಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಸಮತೋಲನದಲ್ಲಿರುತ್ತವೆ.
ತಾಜಾತನ ಮತ್ತು ಚೈತನ್ಯ :ಬೆಳಿಗ್ಗೆ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸಗೊಳ್ಳುತ್ತವೆ. ಇದು ದಿನವನ್ನು ಪ್ರಾರಂಭಿಸಲು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತದೆ. ತಣ್ಣೀರಿನ ಸ್ನಾನವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ದೇಹವನ್ನು ಹೆಚ್ಚು ಕ್ರಿಯಾಶೀಲವಾಗಿಸುತ್ತದೆ.
ಮನಸ್ಸನ್ನು ಶಾಂತಗೊಳಿಸುತ್ತದೆ: ಬೆಳಿಗ್ಗೆ ಸ್ನಾನ ಮಾಡುವುದರಿಂದ ಮೆದುಳು ಸಕ್ರಿಯಗೊಳ್ಳುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ: ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುತ್ತವೆ. ಇದು ಚರ್ಮದಲ್ಲಿ ಸಂಗ್ರಹವಾದ ಕೊಳಕು ಮತ್ತು ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ರತಿನಿತ್ಯ ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಒತ್ತಡವನ್ನು ನಿವಾರಣೆ: ಸಂಜೆ ಸ್ನಾನ ಮಾಡುವುದರಿಂದ ದಿನದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಬೆಚ್ಚಗಿನ ಸ್ನಾನವು ಸ್ನಾಯುಗಳ ನೋವನ್ನು ಶಮನಗೊಳಿಸುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಸಂಜೆ ಸ್ನಾನ ಮಾಡುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಬೆಚ್ಚಗಿನ ಸ್ನಾನದ ನಂತರ, ನಿಮ್ಮ ದೇಹದ ಉಷ್ಣತೆಯು ಕ್ರಮೇಣ ಕಡಿಮೆಯಾಗುತ್ತದೆ, ಇದು ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ.
ದೇಹ ಶುದ್ಧೀಕರಣ: ದೇಹದಲ್ಲಿ ಅಂಟಿಕೊಂಡ ಧೂಳು, ಬೆವರು ಮತ್ತು ಇತರ ಕಲ್ಮಶಗಳನ್ನು ಪರಿಣಾಮಕಾರಿಯಾಗಿ ತೆಹೆದು ಹಾಕಲು ಸಂಜೆ ಸ್ನಾನ ಮಾಡುವುದು ಉತ್ತಮ.
ಚರ್ಮಕ್ಕೆ ಪ್ರಯೋಜನಕಾರಿ: ಸಂಜೆ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಸಂಗ್ರಹವಾಗಿರುವ ಮೇಕಪ್, ಧೂಳು ಮತ್ತು ಮಾಲಿನ್ಯದ ಕಣಗಳು ನಿವಾರಣೆಯಾಗುತ್ತವೆ, ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ