Mother’s Day 2025: ನಿಮ್ಮ ಪ್ರೀತಿಯ ಅಮ್ಮನಿಗೆ ಈ ರೀತಿ ಮದರ್ಸ್‌ ಡೇ ಶುಭಾಶಯಗಳನ್ನು ತಿಳಿಸಿ

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 11 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಮುದ್ದಿನ ಅಮ್ಮನಿಗೆ ಹಾಗೂ ನಿಮ್ಮನ್ನು ಅಮ್ಮನ ಸ್ಥಾನದಲ್ಲಿ ನಿಂತು ಸಾಕಿ ಸಲಹಿದ ಚಿಕ್ಕಮ್ಮ, ದೊಡ್ಡಮ್ಮಂದಿರಿಗೆ ಈ ರೀತಿ ಪ್ರೀತಿಯ ಶುಭಾಶಯಗಳನ್ನು ತಿಳಿಸಿ, ಅವರ ದಿನವನ್ನು ವಿಶೇಷವಾಗಿಸಿ.

Mother’s Day 2025: ನಿಮ್ಮ ಪ್ರೀತಿಯ ಅಮ್ಮನಿಗೆ ಈ ರೀತಿ ಮದರ್ಸ್‌ ಡೇ ಶುಭಾಶಯಗಳನ್ನು ತಿಳಿಸಿ
ತಾಯಂದಿರ ದಿನದ ಶುಭಾಶಯಗಳು
Image Credit source: Getty Images

Updated on: May 10, 2025 | 7:05 PM

ಪ್ರೀತಿ, ವಾತ್ಸಲ್ಯ, ಮಮತೆ, ತ್ಯಾಗ ಇವುಗಳ ಪ್ರತಿರೂಪವೇ ತಾಯಿ (Mother). ಮಕ್ಕಳು, ಕುಟುಂಬ, ತನ್ನವರಿಗಾಗಿ ದಣಿವರಿಯದೆ ದುಡಿಯುವ ಅಮ್ಮ ಮನೆಯ ಮೂಲಾಧಾರ ಎಂದರೆ ತಪ್ಪಾಗಲಾರದು. ಆಕೆಯ ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಸೇವೆ, ತ್ಯಾಗವನ್ನು ಗೌರವಿಸಲು ಮತ್ತು ತಾಯಿಯ ಮೌಲ್ಯ ಎಂತಹದ್ದೆಂದು ಜಗತ್ತಿಗೆ ತಿಳಿಸಲು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ((Mother’s Day) ಆಚರಿಸಲಾಗುತ್ತದೆ. ಈ ಬಾರಿ ಮೇ 11 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದಂದು ನಿಮ್ಮ ಪ್ರೀತಿಯ ಅಮ್ಮನಿಗೆ ಈ ರೀತಿ ಶುಭಾಶಯಗಳನ್ನು (wishes) ತಿಳಿಸುವ ಮೂಲಕ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಿ.

ನಿಮ್ಮ ಮುದ್ದಿನ ಅಮ್ಮನಿಗೆ ಮದರ್ಸ್‌ ಡೇ ಶುಭಾಶಯ ತಿಳಿಸಿಲು ಇಲ್ಲಿವೆ ಸಂದೇಶ:

  • ನನ್ನ ಅಸ್ತಿತ್ವಕ್ಕೆ ಕಾರಣ ನೀವು, ನನ್ನ ಕನಸುಗಳಿಗೆ ಪ್ರೇರಣೆ ನೀವು, ನನ್ನ ಶಕ್ತಿ ನೀವು, ತಾಯಂದಿರ ದಿನದ ಶುಭಾಶಯಗಳು ಅಮ್ಮ.
  • ಕಷ್ಟ ನೋವೆಲ್ಲಾ ನನಗಿರಲಿ, ಸಿಹಿ ಸುಖವೆಲ್ಲಾ ನಿಮಗಿರಲಿ ಎಂದು ಹರಸುವ ನನ್ನ ತಾಯಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
  • ಮಾತೃದೇವೋ ಭವ, ನಿಮ್ಮ ಪ್ರೀತಿ ಹಾಗೂ ತ್ಯಾಗಗಳಿಗೆ ಧನ್ಯವಾದ ಹೇಳುವುದು ತುಂಬಾ ಚಿಕ್ಕ ಪದ, ನೀನು ಯಾವಾಗಲೂ ಹೀಗೆ ಖುಷಿಯಾಗಿರಬೇಕಮ್ಮಾ; ಹ್ಯಾಪಿ ಮದರ್ಸ್‌ ಡೇ.
  • ನಿನ್ನಷ್ಟು ಕಾಳಜಿ, ಪ್ರೀತಿ ತೋರುವ ತಾಯಿಯನ್ನು ಪಡೆದ ನಾನೇ ಧನ್ಯ. ಜಗತ್ತಿನ ದಿ ಬೆಸ್ಟ್‌ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು.
  • ನನ್ನ ಬದುಕಿನ ಸೂಪರ್‌ ಸ್ಟಾರ್‌ ನೀನು. ನನ್ನ ಜೀವನವನ್ನು ದೀಪದಂತೆ ಬೆಳಗಿದ ನಿನ್ನನ್ನು ಸದಾ ಕಾಲ ಖುಷಿಯಾಗಿಡುವ ಜವಬ್ದಾರಿ ನನ್ನದು. ಹ್ಯಾಪಿ ಮದರ್ಸ್‌ ಡೇ ಅಮ್ಮ.
  • ಅಮ್ಮ ನೀನೊಂದು ಅದ್ಭುತ ಶಕ್ತಿ. ನಿನ್ನ ಪ್ರೀತಿ, ಕಾಳಜಿಗೆ ಈ ಜಗತ್ತಿನಲ್ಲಿ ಸರಿಸಾಟಿ ಯಾವುದು ಇಲ್ಲ. ನನ್ನ ಪ್ರೀತಿಯ ದೇವರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಇದನ್ನೂ ಓದಿ: ತಾಯಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನದ ಆಸಕ್ತಿದಾಯಕ ಕಥೆಯನ್ನು ತಿಳಿಯಿರಿ

ಇದನ್ನೂ ಓದಿ
ತಾಯಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ?
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿ
ಸ್ಲಿಮ್ ಆ್ಯಂಡ್ ಫಿಟ್ ಆಗಿರಲು ಜಪಾನಿಯರ ಈ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಿ
ತಾಯಂದಿರ ದಿನದಂದು ಅಮ್ಮನಿಗೆ ಈ ಉಡುಗೊರೆಗಳನ್ನು ನೀಡಿ
  • ಅತ್ತಾಗ ಕಣ್ಣೀರು ಒರೆಸಿದ ದೇವತೆ ನೀನು, ಬಿದ್ದಾಗ ಎತ್ತಿ ಮುನ್ನಡೆಸಿದ ಮಮತೆಯ ಕಡಲು ನೀವು… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು.
  • ಅಮ್ಮ… ನೀನಿಲ್ಲದೆ ನನ್ನ ಬದುಕೇ ಶೂನ್ಯ. ನಿಮ್ಮ ಪ್ರೀತಿ, ಕಾಳಜಿ, ತ್ಯಾಗಕ್ಕೆ ನಾನು ಸದಾ ಚಿರಋಣಿ. ಈ ಜಗತ್ತಿನಲ್ಲಿ ನನ್ನ ನೆಚ್ಚಿನ ಜೀವಕ್ಕೆ ಅಮ್ಮಂದಿರ ದಿನದ ಶುಭಾಶಯಗಳು.
  • ಬದುಕಿನ ಪಾಠ ಕಲಿಸಿದ ಗುರು ನೀವು, ಜೀವನಕ್ಕೆ ದಾರಿ ತೋರಿದ ಜ್ಯೋತಿ ನೀವು. ನನ್ನ ಮುದ್ದು ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು.
  • ನನ್ನ ಪಾಲಿನ ದೇವರು ನೀನಮ್ಮ, ನನ್ನ ಬಾಳಿನ ಬೆಳಕು ನೀನಮ್ಮ.  ಅಮ್ಮ… ಐ ಲವ್‌ ಯು ಹ್ಯಾಪಿ ಮದರ್ಸ್‌ ಡೇ.
  • ನಿಷ್ಕಲ್ಮಶ ಪ್ರೀತಿಯ ಅರ್ಥ ನೀವು, ನನ್ನ ಬಾಳನ್ನು ಸುಂದರವಾಗಿ ಬೆಳಗಿದ ಜ್ಯೋತಿ ನೀವು. ನನ್ನ ಬದುಕಿಗೆ ಅರ್ಥ ನೀಡಿದ ಮುಗ್ಧ ಜೀವಕ್ಕೆ ತಾಯಂದಿರ ದಿನದ ಪ್ರೀತಿಪೂರ್ವಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ