ನಾಯಿಗಳು ಬಹುಶಃ ವಿಶ್ವದ ಅತ್ಯಂತ ಪ್ರೀತಿಯ ಪ್ರಾಣಿ ಜಾತಿಗಳಾಗಿವೆ. ಇವುಗಳು ಮಾನವನ ಉತ್ತಮ ಸ್ನೇಹಿತರು ಎಂಬ ಸತ್ಯವನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಅವುಗಳು ಪ್ರೀತಿ ಮತ್ತು ನಿಯತ್ತಿಗೆ ಹೆಸರುವಾಸಿಯಾಗಿದ್ದು, ಇದೇ ಕಾರಣಕ್ಕೆ ಯುವಜನರು ತಮ್ಮ ಮನೆಯಲ್ಲಿ ಒಂದಾದರು ಶ್ವಾನವನ್ನು ಸಾಕುತ್ತಾರೆ. ಇನ್ನೂ ಕೆಲವರು ನಾಯಿಗಳ ಅಂದಕ್ಕೆ ಮಾರುಹೋಗಿ ಸಾಕುವವರೂ ಇದ್ದಾರೆ. ಬೀದಿ ನಾಯಿಯಾಗಿರಲಿ, ಸಾಕು ನಾಯಿಯಾಗಿರಲಿ, ಒಂದೊಮ್ಮೆ ನೀವು ಆಹಾರ ಹಾಕಿದರೆ ಅದು ಕೊನೆ ತನಕ ನಿಮ್ಮನ್ನು ಮರೆಯುವುದಿಲ್ಲ. ಇಂತಹ ವಾತ್ಸಲ್ಯ, ಪ್ರೀತಿ, ನೀಯತ್ತು ಹೊಂದಿರುವ ನಾಯಿಯನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಗಸ್ಟ್ 26ರಂದು ರಾಷ್ಟ್ರೀಯ ಶ್ವಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ಸಾಧ್ಯವಾದಷ್ಟು ಹೆಚ್ಚು ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಶ್ವಾನ ದಿನದ ಇತಿಹಾಸ
ಪೆಟ್ ಮತ್ತು ಫ್ಯಾಮಿಲಿ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಮತ್ತು ಅನಿಮಲ್ ಅಡ್ವೊಕೇಟ್ ಕೊಲೀನ್ ಪೈಜ್ ಅವರು 2004ರಲ್ಲಿ ಈ ದಿನ (ಆ.26)ವನ್ನು ರಚಿಸಿದ್ದಾರೆ. ಆಶ್ರಯದಲ್ಲಿರುವ ನಾಯಿಗಳ ಸಂಖ್ಯೆಗೆ ಗಮನ ಸೆಳೆಯಲು ಮತ್ತು ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸಲು ಈ ದಿನವನ್ನು ರಚಿಸಿದರು. ಪೈಜ್ ಅವರು ಶೆಲ್ಟಿ ಎಂಬ ಶ್ವಾನವನ್ನು ದತ್ತು ಪಡೆದಿದ್ದರು. ಆ ದತ್ತು ಸ್ವೀಕಾರವನ್ನು ಆಗಸ್ಟ್ 26ರಂದು ಮಾಡಿದ್ದರು. ಹೀಗಾಗಿ ಆಗಸ್ಟ್ 26ರಂದು ಅವರು ಪಾಲಿಗೆ ಮಹತ್ವದ ದಿನವಾಗಿದ್ದು, ಶ್ವಾನ ದಿನವನ್ನಾಗಿ ಆಚರಣೆಗೆ ತಂದರು.
ರಾಷ್ಟ್ರೀಯ ಶ್ವಾನ ದಿನವನ್ನು ನಾಯಿಗಳಿಗೆ, ಅವುಗಳ ಮಾಲೀಕರಿಗೆ ಉಪಹಾರ ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಆಚರಿಸಲಾಗುತ್ತದೆ. ನಾಯಿಗಳ ಗೌರವಾರ್ಥವಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತವೆ. ಈ ಘಟನೆಗಳಲ್ಲಿ ಕೆಲವು ಶ್ವಾನ ಪ್ರದರ್ಶನಗಳು, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ಶ್ವಾನ ದಿನದ ಮಹತ್ವ
ರಾಷ್ಟ್ರೀಯ ಶ್ವಾನ ದಿನಾಚರಣೆಯ ರಚನೆಯು ಬಹಳ ಮಹತ್ವದ್ದಾಗಿದೆ. ಏಕೆಂದರೆ ಪ್ರೀತಿ ಮತ್ತು ಕಾಳಜಿಯನ್ನು ನೀಡಲು ಯಾರೂ ಇಲ್ಲದ ನಿರಾಶ್ರಿತ ಮತ್ತು ಬೀದಿ ನಾಯಿಗಳು ಎದುರಿಸುತ್ತಿರುವ ದುಃಸ್ಥಿತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಮಾರ್ಗವಾಗಿ ಮತ್ತು ವಿವಿಧ ಪ್ರಾಣಿಗಳ ಆಶ್ರಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ನಾಯಿಗಳು ತಮ್ಮ ಮನೆಗಾಗಿ ಕಾಯುತ್ತಿವೆ ಎಂಬುದನ್ನು ನೆನಪಿಸಲು ಈ ದಿನವನ್ನು ರಚಿಸಲಾಗಿದೆ.
ಇಂದು ಯುನೈಟೆಡ್ ಸ್ಟೇಟ್ಸ್ನಲ್ಲಿ ಸುಮಾರು 80 ಮಿಲಿಯನ್ ಸಾಕು ನಾಯಿಗಳಿವೆ. ವರದಿಗಳ ಪ್ರಕಾರ ಪ್ರತಿ ವರ್ಷ ಸುಮಾರು 3.3 ಮಿಲಿಯನ್ ನಾಯಿಗಳು ಯುಎಸ್ ಪ್ರಾಣಿಗಳು ಜನಿಸುತ್ತವೆ. ಆದರೆ ಅವುಗಳಲ್ಲಿ 1.6 ಮಿಲಿಯನ್ನಷ್ಟು ನಾಯಿಗಳನ್ನು ಪ್ರತಿ ವರ್ಷ ದತ್ತು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಇನ್ನೂ ಬಹಳಷ್ಟು ನಾಯಿಗಳು ನಿರಾಶ್ರಿತವಾಗಿವೆ. ರಾಷ್ಟ್ರೀಯ ಶ್ವಾನ ದಿನವನ್ನು ಪರಿಚಯಿಸಿದಾಗಿನಿಂದ ಇಂತಹ ನಾಯಿಗಳನ್ನು ದತ್ತು ತೆಗೆದುಕೊಳ್ಳುವಲ್ಲಿ ಪ್ರೋತ್ಸಾಹಿಸಲಾಗುತ್ತಿದೆ.
ಈಗಿನಂತೆ ಯುಎಸ್ನ ಸುಮಾರು ಶೇ.44ರಷ್ಟು ಕುಟುಂಬಗಳು ನಾಯಿಗಳನ್ನು ಹೊಂದಿದ್ದಾರೆ. ಅದಾಗ್ಯೂ ನಾಯಿಗಳನ್ನು ದತ್ತು ತೆಗೆದುಕೊಳ್ಳುವಲ್ಲಿ ಸಾಕಷ್ಟು ಅವಕಾಶಗಳಿವೆ. ಆಶ್ರಯ ಮನೆಗಳು ಅಥವಾ ಬೀದಿಗಳಿಂದ ದತ್ತು ಪಡೆದರೆ ಒಳ್ಳೆಯದು. ಬೀದಿನಾಯಿಗಳಿಂದಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ದಿನದ ಮತ್ತೊಂದು ಉದ್ದೇಶವಾಗಿದೆ. ಈ ಸುಂದರ ಪ್ರಾಣಿಗಳಿಗೆ ಆಶ್ರಯ ಮನೆಗಳನ್ನು ರಚಿಸಲು ಸಂಸ್ಥೆಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಆದರೆ ಈ ನಾಯಿಗಳಿಗೂ ಒಂದು ಮನೆಯನ್ನು ನೀಡಲು ಜನರ ಕೊಡುಗೆಯೂ ಅಗತ್ಯವಾಗಿರುತ್ತದೆ.
ಮತ್ತಷ್ಟು ಲೈಪ್ಸ್ಟೈಲ್ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ