ಬಹುತೇಕರ ನೆಚ್ಚಿನ ಹಣ್ಣುಗಳಲ್ಲಿ ಮಾವು ಕೂಡ ಒಂದು. ಅತ್ಯಂತ ರುಚಿಕರ ಹಣ್ಣಾಗಿರುವ ಮಾವು ಮಾವನ್ನು ಹಣ್ಣುಗಳ ರಾಜ ಕೂಡ ಹೌದು. ಸಿಹಿ, ಹುಳಿ ಮಿಶ್ರಿತ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಡಿ ಸಮೃದ್ಧವಾಗಿರುವ ಆರೋಗ್ಯಕ್ಕೂ ಹಿತಕರ. ಭಾರತದಲ್ಲಿ ವಿವಿಧ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಈ ಮಾವಿನ ಹಣ್ಣು ತಿನ್ನಲು ಮಾತ್ರವಲ್ಲದೇ, ಮಾವಿನ ಹಣ್ಣಿನ ರಸಾಯನ, ಉಪ್ಪಿನಕಾಯಿ, ಮ್ಯಾಂಗೋ ಐಸ್ ಕ್ರೀಮ್ ಸೇರಿದಂತೆ ವಿವಿಧ ರೀತಿಯಲ್ಲಿ ಸವಿಯಬಹುದು. ಮಾವಿಗೂ ಮನ್ನಣೆ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ
ಭಾರತ ದೇಶದಲ್ಲಿ ಸರಿಸುಮಾರು 5,000 ವರ್ಷಗಳಿಂದಲೂ ಮಾವಿನಹಣ್ಣು ಬಳಕೆಯಲ್ಲಿದೆ. ಪೋರ್ಚುಗಿಸರು ಕ್ರಿಶ 1498ರಲ್ಲಿ ಕೇರಳಕ್ಕೆ ಬಂದ ನಂತರ ‘ಮಂಗ’ ಎಂದು ಮಾವಿನಹಣ್ಣನ್ನು ಗುರುತಿಸಲು ಆರಂಭಿಸಿದರು. ಆದರೆ ಬೀಜಗಳ ಸಾಗಣೆಯ ಸಮಸ್ಯೆಯಿದ್ದ ಕಾರಣ ದಕ್ಷಿಣಾರ್ಧಗೋಳದಲ್ಲಿ ಕ್ರಿಶ 1700ನೇ ಇಸವಿಯವರೆಗೂ ಮಾವಿನಹಣ್ಣಿನ ಗಿಡಗಳನ್ನು ನೆಡಲು ಸಾಧ್ಯವಾಗಿರಲಿಲ್ಲ. ಮಾವು ಬೆಳೆಯಲು ಯೋಗ್ಯವಾದ ವಾತಾವರಣವು ಇರಲಿಲ್ಲ. ಆದರೆ 18ನೇ ಶತಮಾನದಲ್ಲಿ ಮೊದಲ ಬಾರಿಗೆ ಬ್ರೆಜಿಲ್ನಲ್ಲಿ ಮಾವಿನಗಿಡವನ್ನು ನೆಡಲಾಯಿತು. ಆದಾದ ಬಳಿಕ ರೈತರು ಕೂಡ ಮಾವು ಬೆಳೆಯಲು ಮುಂದಾದರು. ಇಂದು ದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣು ಲಭ್ಯವಿದೆ.
ಇದನ್ನೂ ಓದಿ: ನಿಮ್ಮ ಪ್ರೇಮಿಯೊಂದಿಗೆ ಅಪ್ಪಿ ತಪ್ಪಿಯೂ ಈ ರೀತಿ ನಡೆದುಕೊಳ್ಳಬೇಡಿ; ಬ್ರೇಕ್ಅಪ್ಗೆ ಕಾರಣವಾಗಬಹುದು
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ