
ಹೊಸ ವರ್ಷಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, 2026 ರ ಹೊಸ ಸಂವತ್ಸರವನ್ನು ಸ್ವಾಗತಿಸಲು ಜನ ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಪಂಚದಾದ್ಯಂತ, ಹೊಸ ವರ್ಷದ ಮುನ್ನಾದಿನವನ್ನು ವಿಭಿನ್ನ ಸಂಪ್ರದಾಯಗಳು ಮತ್ತು ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ. ಕೆಲವರು ರಾತ್ರಿ 12 ಗಂಟೆ ಆಗ್ತಿದ್ದಂಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ, ಕಡಲ ತೀರ, ಪಬ್‌ನಲ್ಲಿ ಮೋಜು ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಇನ್ನೊಂದು 12 ಗಂಟೆಗೆ ಸರಿಯಾಗಿ 12 ದ್ರಾಕ್ಷಿಗಳನ್ನು (grapes) ತಿಂದು ಹೊಸ ವರ್ಷವನ್ನು ಸ್ವಾಗತಿಸುವ ವಿಶಿಷ್ಟ ಸಂಪ್ರದಾಯವೂ ಆಚರಣೆಯಲ್ಲಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಈ ಕುರಿತ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. 12 ಗಂಟೆಗೆ ಸರಿಯಾಗಿ ಜನ ದ್ರಾಕ್ಷಿ ತಿನ್ನೋದೇಕೆ? ಏನಿದು ಸಂಪ್ರದಾಯ ಎನ್ನುವುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ರಾತ್ರಿ 12 ಗಂಟೆಗೆ 12 ದ್ರಾಕ್ಷಿಯನ್ನು ತಿಂದು ಹೊಸ ವರ್ಷವನ್ನು ಸ್ವಾಗತಿಸುವ ಸಂಪ್ರದಾಯವನ್ನು ಲಾಸ್ ಡೋಸೆ ಉವಾಸ್ ಡಿ ಲಾ ಸುರ್ಟೆ ಎಂದು ಕರೆಯಲಾಗುತ್ತದೆ. ಅಂದರೆ ಅದೃಷ್ಟದ ಹನ್ನೆರಡು ದ್ರಾಕ್ಷಿಗಳು ಎಂದರ್ಥ. ಈ 12 ದ್ರಾಕ್ಷಿಗಳು ವರ್ಷದ 12 ತಿಂಗಳುಗಳನ್ನು ಸಂಕೇತಿಸುತ್ತವೆ ಎಂದು ನಂಬಲಾಗಿದೆ . ತಮ್ಮ ಬಯಕೆಗಳ ಬಗ್ಗೆ ಮನದಲ್ಲೇ ಕೇಳಿಕೊಳ್ಳುತ್ತಾ ಒಂದು ಸೆಕೆಂಡಿಗೆ ಒಂದರಂತೆ 12 ದ್ರಾಕ್ಷಿಗಳನ್ನು ತಿನ್ನುತ್ತಾ ಜನ ಮುಂಬರುವ ವರ್ಷದಲ್ಲಿ ಶುಭ, ಸಂತೋಷ, ಪ್ರೀತಿ ಮತ್ತು ಸಮೃದ್ಧಿಯನ್ನು ಸಿಗಲಿ ಎಂದು ಕೇಳಿಕೊಳ್ಳುತ್ತಾರೆ. ಈ ದ್ರಾಕ್ಷಿ ತಿನ್ನುವ ಸಂಪ್ರದಾಯವನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗಿವೆ ಎಂದು ಸಾಕಷ್ಟು ಮಂದಿ ಹೇಳುತ್ತಾರೆ.
ಹೊಸ ವರ್ಷದ ಮುನ್ನಾದಿನದಂದು ರಾತ್ರಿ 12 ಗಂಟೆ ಆಗ್ತದ್ದಂಗೆ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯ ಸೋಷಿಯಲ್ ಮೀಡಿಯಾದ ಮುಖಾಂತರ ಇಂದು ಬಹಳ ಟ್ರೆಂಡ್‌ನಲ್ಲಿದೆ. ಈ ಸಂಪ್ರದಾಯವು 1909 ರಲ್ಲಿ ಸ್ಪೇನ್‌ನಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಆಗಿನ ಸಮಯದಲ್ಲಿ, ದ್ರಾಕ್ಷಿ ಉತ್ಪಾದನೆಯು ಎಷ್ಟು ಹೇರಳವಾಗಿತ್ತೆಂದರೆ, ರೈತರು ಅವುಗಳನ್ನು ಮಾರಾಟ ಮಾಡುವುದು ಸಹ ಕಷ್ಟಕರವಾಗಿತ್ತು. ದ್ರಾಕ್ಷಿ ಕೃಷಿಕನೊಬ್ಬ ತಮಾಷೆಯಾಗಿ ಜನರಿಗೆ ಹೊಸ ವರ್ಷದ ದಿನದಂದು 12 ದ್ರಾಕ್ಷಿಗಳನ್ನು, ತಿನ್ನಿ ಇದರಿಂದ ಅದೃಷ್ಟ ಬರುತ್ತದೆ ಎಂದು ಹೇಳಿದನು. ಕ್ರಮೇಣ, ಈ ತಮಾಷೆ ಒಂದು ಸಂಪ್ರದಾಯವಾಯಿತು.
ಇದನ್ನೂ ಓದಿ: ಖುಷಿಯಾಗಿ, ಆರೋಗ್ಯಕರವಾಗಿ ಬದುಕು ನಡೆಸಲು ಹೊಸ ವರ್ಷದ ರೆಸೆಲ್ಯೂಷನ್ ಹೀಗಿರಲಿ
ಮೂಲತಃ ಸ್ಪೇನ್‌ನಲ್ಲಿ ಆಚರಿಸಲಾಗುತ್ತಿದ್ದ ಈ ಸಂಪ್ರದಾಯವು ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವಾದ್ಯಂತ ವೇಗವಾಗಿ ವೈರಲ್ ಆಗುತ್ತಿದೆ . ಡಿಸೆಂಬರ್ 31 ರಂದು ನಡೆಯುವ ಪಾರ್ಟಿಗಳಲ್ಲಿ, ಮನೆಗಳಲ್ಲಿ ಜನರು ಒಂದು ಬೌಲ್‌ನಲ್ಲಿ ದ್ರಾಕ್ಷಿಯನ್ನು ಹಿಡಿದುಕೊಂಡು 12 ಗಂಟೆಯಾದ ತಕ್ಷಣ ಒಂದು ಟೆಬಲ್ ಅಡಿಯಲ್ಲಿ ಕುಳಿತು ಒಂದೊಂದು ಬಯಕೆಗಳನ್ನು ಮನದಲ್ಲಿಯೇ ಹೇಳಿಕೊಂಡು ಪ್ರತಿ ಒಂದು ಸೆಕೆಂಡಿಗೆ ಒಂದೊಂದರಂತೆ 12 ದ್ರಾಕ್ಷಿಗಳನ್ನು ತಿನ್ನುತ್ತಾರೆ. ಈ ಆಸೆ, ಬಯಕೆಗಳು ಮುಂಬರುವ ವರ್ಷದಲ್ಲಿ ಈಡೇರುತ್ತದೆ ಎಂದು ಹಲವರು ನಂಬುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ