ಮಕ್ಕಳ ಸ್ಕ್ರೀನ್ ಟೈಮ್ ಕಮ್ಮಿ ಮಾಡ್ಬೇಕಾ? ಹಾಗಿದ್ರೆ ನಿಮ್ಹಾನ್ಸ್‌ನ ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ನಲ್ಲಿ ಭಾಗವಹಿಸಿ
ಈಗಿನ ಕಾಲದ ಮಕ್ಕಳಂತೂ ಹೊರಗಡೆ ಆಟ ಆಡೋಕ್ಕಿಂತ ಹೆಚ್ಚಾಗಿ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ, ಯುಟ್ಯೂಬ್, ಇನ್‌ಸ್ಟಾಗ್ರಾಮ್ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ಶಾರ್ಟ್ಸ್, ವಿಡಿಯೋಗಳನ್ನು ನೋಡುತ್ತಾ ಸಮಯ ಕಳೆಯುವುದೇ ಹೆಚ್ಚಾಗಿದೆ. ಮಕ್ಕಳ ಈ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಪೋಷಕರಿಗೆ ದೊಡ್ಡ ಸವಾಲಾಗಿದೆ. ನಿಮ್ಮ ಮಕ್ಕಳು ಕೂಡಾ ಇದೇ ರೀತಿ ಹೆಚ್ಚು ಮೊಬೈಲ್ ನೋಡ್ತಾರಾ? ಆ ಚಟವನ್ನು ಹೇಗೆ ಬಿಡಿಸೋದು ಎಂದು ಯೋಚಿಸುತ್ತಿದ್ದರೆ, ನೀವು ನಿಮ್ಹಾನ್ಸ್‌ನ ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ನಲ್ಲಿ ಭಾಗವಹಿಸಿ. ಈ ಆನ್‌ಲೈನ್ ಕಾರ್ಯಗಾರದಲ್ಲಿ ಭಾಗವಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ದೊಡ್ಡವರಿಗಿಂತ ಮಕ್ಕಳೇ ಹೆಚ್ಚು ಮೊಬೈಲ್ ಚಟಕ್ಕೆ (children mobile addiction) ಬಿದ್ದಿದ್ದಾರೆ. ಮೊದಲೆಲ್ಲಾ ಮಕ್ಕಳು ಮನೆಯ ಹೊರಗಡೆ ಆಟ ಆಡೋಕೆ ಹೋಗ್ತಿದ್ರು, ಆದ್ರೆ ಈಗಿನ ಮಕ್ಕಳು ಆಟ, ಊಟ ಎಲ್ಲವನ್ನೂ ಪಕ್ಕಕ್ಕಿಟ್ಟು ಮೊಬೈಲ್‌ನಲ್ಲಿ ಗೇಮ್ಸ್ ಆಡುತ್ತಾ, ವಿಡಿಯೋ ನೋಡುತ್ತಾ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನೂ ಮಕ್ಕಳ ಮೊಬೈಲ್ ಚಟವನ್ನು ಬಿಡಿಸಬೇಕು ಎಂದು ಹೇಳುವ ಪಾಲಕಸ ಸಂಖ್ಯೆಯೂ ಹೆಚ್ಚುತ್ತಿದೆ. ಇದೇ ರೀತಿ ನಿಮ್ಮ ಮಕ್ಕಳು ಕೂಡಾ ಹೆಚ್ಚು ಹೊತ್ತು ಮೊಬೈಲ್ ನೋಡ್ತಾರಾ? ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಹೇಗಪ್ಪಾ ಎಂಬ ಚಿಂತೆ ನಿಮ್ಮಲ್ಲೂ ಕಾಡ್ತಿದ್ಯಾ? ಹಾಗಿದ್ರೆ ನಿಮ್ಹಾನ್ಸ್‌ನ (NIMHANS) ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ನಲ್ಲಿ (FREE Parent Group Sessions) ಭಾಗವಹಿಸಿ. ಈ ಆನ್‌ಲೈನ್ ಕಾರ್ಯಾಗಾರ ಯಾವಾಗ, ನೋಂದಣಿ ಮತ್ತು ಭಾಗವಹಿಸುವುದು ಹೇಗೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಕ್ಕಳ ಫೋನ್ ಚಟ ಬಿಡಿಸಲು ಪಾಲಕರಿಗೆ ನಿಮ್ಹಾನ್ಸ್ ವತಿಯಿಂದ ಉಚಿತ ಕಾರ್ಯಾಗಾರ:
ಮಕ್ಕಳ ಮೊಬೈಲ್ ಚಟ ಬಿಡಿಸುವುದು ಹೇಗೆ ಎಂದು ಮಕ್ಕಳ ಸ್ಕ್ರೀನ್ ಟೈಮ್ ನಿಭಾಯಿಸಲು ಹೆಣಗಾಡುತ್ತಿರುವ ಪೋಷಕರಿಗೆ ಮಾರ್ಗದರ್ಶನ ನೀಡಲು ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಉಚಿತ ಪೇರೆಂಟ್ಸ್ ಗ್ರೂಪ್ ಸೆಷನ್ ಆಯೋಜಿಸಿದೆ.
ಮಕ್ಕಳ ಮೊಬೈಲ್ ಗೇಮಿಂಗ್, ಯೂಟ್ಯೂಬ್, ಸಾಮಾಜಿಕ ಮಾಧ್ಯಮ ಇದನ್ನು ನಿಭಾಯಿಸುವುದು ಹೇಗೆ, ಸ್ಕ್ರೀನ್ ಟೈಮ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ, ಮಕ್ಕಳ ಯೋಗಕ್ಷೇಮವನ್ನು ಹೆಚ್ಚಿಸಲು ಮನೆಯಲ್ಲಿ ಯಾವ ರೀತಿ ಪರಿಣಾಮಕಾರಿ ತಂತ್ರಗಳನ್ನು ತರಬಹುದು ಎಂದು ಈ ಆನ್‌ಲೈನ್ ಕಾರ್ಯಾಗಾರದಲ್ಲಿ ನುರಿತ ತಜ್ಞರು ತಿಳಿಸಿಕೊಡಲಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ನಿಮ್ಹಾನ್‌ನ (NIMHANS_BLR) ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಪೋಸ್ಟ್ ಇಲ್ಲಿದೆ ನೋಡಿ:
Here is the link for registration https://t.co/Oojq9mokVr https://t.co/lRvmQD8zde
— NIMHANS, Bengaluru (@NIMHANS_BLR) May 27, 2025
ಯಾರೆಲ್ಲಾ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು?
- ಸೋಷಿಯಲ್ ಮೀಡಿಯಾ, ಗೇಮಿಂಗ್ ಅಂತೆಲ್ಲಾ ಮೊಬೈಲ್‌ಗೆ ಅಡಿಕ್ಟ್ ಆಗಿರುವ ಹಾಗೂ ಹೆಚ್ಚು ಹೊತ್ತು ಸ್ಕ್ರೀನ್ ಟೈಮ್‌ನಲ್ಲೇ ಕಳೆಯುವ ಯಾವುದೇ ವಯಸ್ಸಿನ ಮಕ್ಕಳ ಪೋಷಕರು ಈ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
- ಮಕ್ಕಳನ್ನು ನಿಭಾಯಿಸುವುದು ಹೇಗೆ, ಮಕ್ಕಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ತಮ್ಮ ಪೇರೆಂಟಿಗ್ ಸ್ಕಿಲ್ಸ್‌ಗಳನ್ನು ಹೆಚ್ಚಿಸಲು ಬಯಸುವ ಪೋಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ: ಯೋಗಾಭ್ಯಾಸ ವೇಳೆ ಆಗುವ ತಪ್ಪುಗಳು; ಅಡ್ಡಪರಿಣಾಮಗಳಾಗಬಹುದು ಜೋಕೆ
ಕಾರ್ಯಾಗಾರದ ಯಾವಾಗ ನಡೆಯಲಿದೆ?
ಈ ಕಾರ್ಯಾಗಾರ ಮೇ 31, 2025, ಜೂನ್ 26, 2025, ಮತ್ತು ಜುಲೈ 5, 2025 ರಂದು ನಡೆಯಲಿದೆ.
ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜೂಮ್ ಮೀಟಿಂಗ್‌ನಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಫ್ರೀ ಪೇರೆಂಟ್ಸ್ ಗ್ರೂಪ್ ಸೆಷನ್‌ನಲ್ಲಿ ಭಾಗವಹಿಸಲು ಈ ಕೆಳಗೆ ನೀಡಿದ ಲಿಂಕ್ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








