ಪದೇ ಪದೇ ಮೂಗಿನಲ್ಲಿ ಬೆರಳು ಹಾಕಿ ಗಣಿಗಾರಿಕೆ ಮಾಡುತ್ತಿದ್ದೀರಾ? ಸಂಶೋಧನೆಯಲ್ಲಿ ಬಯಲಾಗಿದೆ ಭಯಾನಕ ಸಂಗತಿಗಳು..
Nose Picking Habit: ಯಾರಾದರೂ ಇದ ಮಾಡುವುದನ್ನು ನಾವು ನೋಡಿದರೆ, ಆ ವ್ಯಕ್ತಿಯು ನಾಚಿಕೆಪಡುವುದನ್ನು ಸಹ ನಾವು ನೋಡುತ್ತೇವೆ ... ಆದರೆ ಈ ಅಭ್ಯಾಸವು ತುಂಬಾ ಕೆಟ್ಟದ್ದು. ಹೀಗೆ ಮಾಡುವವರು ಅಷ್ಟು ಸುಲಭವಾಗಿ ಈ ಅಭ್ಯಾಸವನ್ನು ಬಿಡಲಾರರು. ಆದರೆ ಇದರಿಂದ ಅವರ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಗೊತ್ತಾ?
ಪದೇ ಪದೇ ನೀವು ಮೂಗಿನಲ್ಲಿ ಬೆರಳು ಹಾಕಿ ಗಣಿಗಾರಿಕೆ ಮಾಡುವುದು ಅಂದರೆ ತಿವಿಯುವಂತೆ ಮೂಗಿನೊಳಕ್ಕೆ ಬೆರಳು ಹಾಕಿ ಮೂಗು ತೆಗೆಯುವುದು (Nose Picking) ಅನೇಕರಿಗೆ ಅಭ್ಯಾಸವಾಗಿರಬಹುದು (Habit). ಆದರೆ ನಿಮ್ಮ ಈ ಅಭ್ಯಾಸವು (Lifestyle) ನಿಮ್ಮನ್ನು ಗಂಭೀರ ಕಾಯಿಲೆಗಳಿಗೆ ಗುರಿಯಾಗಿಸುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? ಹಾಗೆ ನೋಡಿದರೆ ಮೂಗು ತೆಗೆಯುವ ಅಭ್ಯಾಸ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಅನೇಕರಲ್ಲಿ ಕಂಡುಬರುತ್ತದೆ. ಕೆಲವರು ಇದನ್ನು ಬಹಿರಂಗವಾಗಿ ಮಾಡುತ್ತಾರೆ, ಕೆಲವರು ರಹಸ್ಯವಾಗಿ ಮಾಡುತ್ತಾರೆ! ಅಷ್ಟೇ ವ್ಯತ್ಯಾಸ.
ಯಾರಾದರೂ ಇದ ಮಾಡುವುದನ್ನು ನಾವು ನೋಡಿದರೆ, ಆ ವ್ಯಕ್ತಿಯು ನಾಚಿಕೆಪಡುವುದನ್ನು ಸಹ ನಾವು ನೋಡುತ್ತೇವೆ … ಆದರೆ ಈ ಅಭ್ಯಾಸವು ತುಂಬಾ ಕೆಟ್ಟದ್ದು. ಹೀಗೆ ಮಾಡುವವರು ಅಷ್ಟು ಸುಲಭವಾಗಿ ಈ ಅಭ್ಯಾಸವನ್ನು ಬಿಡಲಾರರು. ಆದರೆ ಇದರಿಂದ ಅವರ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಗೊತ್ತಾ? ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ಪದೇ ಪದೇ ಮೂಗು ತೆಗೆಯುವ ಅಭ್ಯಾಸದಿಂದಾಗಿ ಕೆಲವು ಸೂಕ್ಷ್ಮಜೀವಿಗಳು ಮೂಗಿನೊಳಕ್ಕೆ ಪ್ರವೇಶಿಸಬಹುದು, ಇದು ಮುಂದೆ ಆಲ್‌ಝೈಮರ್‌ನ ಕಾಯಿಲೆಗೆ (Alzheimer’s disease) ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಆಗಾಗ್ಗೆ ಮೂಗು ತೆಗೆಯುವ ಜನರು ಆಲ್‌ಝೈಮರ್‌ನ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನವು ತೋರಿಸಿದೆ. ರೋಗಕಾರಕಗಳು ಮೂಗಿನ ಲೋಳೆ ಮೂಲಕ ಮೆದುಳಿನಲ್ಲಿ ಬೀಟಾ ಅಮಿಲಾಯ್ಡ್ ಉತ್ಪಾದನೆಗೆ ಕಾರಣವಾಗುತ್ತವೆ. ಆಲ್‌ಝೈಮರ್ ಹೆಚ್ಚಳಕ್ಕೆ ಬೀಟಾ ಅಮಿಲಾಯ್ಡ್ ಎಂಬ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆಲ್‌ಝೈಮರ್ ಅಂತಹ ನರ-ಉರಿಯೂತದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Breast Cancer: ನಿಮ್ಮ ಚರ್ಮದ ಮೇಲಾಗುವ ಈ ಬದಲಾವಣೆ ಸ್ತನ ಕ್ಯಾನ್ಸರ್ ಲಕ್ಷಣಗಳಾಗಿರಬಹುದು ಎಚ್ಚರ!
ಕ್ಷಣ ಕ್ಷಣಕ್ಕೂ ಮೂಗಿನಲ್ಲಿ ಬೆರಳು ಇಟ್ಟುಕೊಳ್ಳುವುದರಿಂದ ರೋಗವನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳು ಮೂಗಿನ ಮೂಲಕ ಮೆದುಳನ್ನು ಸುಲಭವಾಗಿ ತಲುಪಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ರೋಗಕಾರಕಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಮೂಗಿನ ಕೋಶಗಳಲ್ಲಿ ಹೀರಲ್ಪಡುತ್ತವೆ. ಈ ರೀತಿಯಲ್ಲಿ ಅದು ಅಂತಿಮವಾಗಿ ಮೆದುಳನ್ನು ತಲುಪುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಕೂಡಲೇ ಬಿಟ್ಟುಬಿಡುವುದು ಒಳಿತು. ಇಲ್ಲವಾದರೆ ಅಪಾಯದ ತೀವ್ರತೆಯು ತುಂಬಾ ಹೆಚ್ಚಾಗಿರುತ್ತದೆ. ಅದಕ್ಕೆ ಸಿದ್ಧವಾಗಿರಿ ಅಷ್ಟೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Tue, 13 February 24