ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ನಿಂಬೆ ಹಣ್ಣು ಕಾಣಸಿಗುತ್ತದೆ. ಅಡುಗೆಯಿಂದ ಹಿಡಿದು ಅನೇಕ ಮನೆಮದ್ದುಗಳಲ್ಲಿ ಕೂಡಾ ಈ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ನಿಂಬೆ ಹಣ್ಣು ಅತ್ಯಂತ ಪ್ರಯೋಜನಕಾರಿ ಹಣ್ಣು ಎಂದು ಹೇಳಲಾಗುತ್ತದೆ. ಇದರ ಔಷಧೀಯ ಗುಣಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಂಬೆ ರಸ ಮಾತ್ರವಲ್ಲದೆ ಅದರ ಎಲೆಗಳೂ ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಂಬೆ ಎಲೆಗಳು ಕಾರ್ಬೋಹೈಡ್ರೇಟ್, ಪ್ರೋಟೀನ್, ಉತ್ಕರ್ಷಣ ನಿರೋಧಕ, ಆ್ಯಂಟಿ ವೈರಲ್, ಆ್ಯಂಟಿಮೈಕ್ರೋಬಿಯಲ್, ಉರಿಯೂತ ವಿರೋಧಿ ಮುಂತಾದ ಗುಣಲಕ್ಷಣಗಳನ್ನು ಹೊಂದಿದೆ. ನಿಂಬೆ ಎಲೆಯ ಈ ಗುಣಲಕ್ಷಣಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಜೊತೆಗೆ ನಿಂಬೆ ಎಲೆಗಳನ್ನು ಗಿಡಮೂಲಿಕೆ ಔಷಧಿಗಳಲ್ಲಿ ಮತ್ತು ವಿವಿಧ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
• ನಿಂಬೆ ಎಲೆಗಳು ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಇದು ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಎಸ್ಜಿಮಾ ಅಥವಾ ಸೋರಿಯಾಸಿಸ್ ನಂತಹ ಚರ್ಮ ಸಂಬಂಧಿ ಸಮಸ್ಯೆಗಳಿಂದ ಉಂಟಾಗುವ ಮೊಡವೆ ಅಥವಾ ಮೊಡವೆಗಳ ಕಲೆ ವಿರುದ್ಧ ಹೋರಾಡುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಇದು ಸಹಾಯ ಮಾಡುತ್ತದೆ. ಅಲ್ಲದೆ ನಿಂಬೆ ಎಲೆಗಳಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಇದು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಸಹಕಾರಿ.
• ನಿಂಬೆ ಎಲೆಗಳ ಸುಗಂಧವು ಮೈಗ್ರೇನ್ ಎಂಬ ತಲೆನೋವಿನಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ ಈ ಎಲೆಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ನಿಂಬೆ ಎಲೆಗಳು ಹೆಚ್ಚಿನ ಉರಿಯೂತ ವಿರೋಧಿ ಗುಣಲಕ್ಷಗಳನ್ನು ಹೊಂದಿದ್ದು, ಅದು ಸಂಧಿವಾತಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ಎಲೆಗಳಲ್ಲಿ ಕಂಡುಬರುವ ತೈಲಾಂಶವು ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಸಂಧಿವಾತದಿಂದ ಉಂಟಾಗುವ ನೋವನ್ನು ನಿವಾರಿಸುತ್ತದೆ.
• ನಿಂಬೆ ಎಲೆಗಳನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ. ಇದರಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರದಲ್ಲಿನ ಕಲ್ಲುಗಳನ್ನು ಬೆಳೆಯಲು ಬಿಡುವುದಿಲ್ಲ.
• ಆಂಥೆಲ್ಮಿಂಟಿಕ್ ಗುಣಲಕ್ಷಣಗಳು ನಿಂಬೆ ಎಲೆಗಳಲ್ಲಿ ಕಂಡುಬರುತ್ತವೆ. ಇದು ಹೊಟ್ಟೆಯಲ್ಲಿನ ಜಂತುಹುಳದ ಸಮಸ್ಯೆಯನ್ನು ತೊಡೆದಹಾಕಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನಿಂಬೆ ಎಲೆಗಳ ರಸಕ್ಕೆ ಜೇನು ತುಪ್ಪ ಬೆರೆಸಿ ಸೇವನೆ ಮಾಡಿ.
ಇದನ್ನೂ ಓದಿ: ತ್ವಚೆಗೆ ನಿಂಬೆ ಮತ್ತು ಜೇನುತುಪ್ಪವನ್ನು ಹಚ್ಚುವುದರಿಂದ ದೊರಕುವ ಅದ್ಭುತ ಪ್ರಯೋಜನಗಳು
• ನಿಂಬೆ ಎಲೆಗಳಿಂದ ತಯಾರಿಸಿದ ಎಣ್ಣೆಯು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ. ಇದನ್ನು ತಲೆಗೆ ಹಚ್ಚಿಕೊಂಡು ಮಲಗಿದರೆ ಒಳ್ಳೆಯ ನಿದ್ದೆ ಬರುತ್ತದೆ.
• ನಿಂಬೆ ಎಲೆಗಳು ತೂಕವನ್ನು ಕಡಿಮೆ ಮಾಡಲು ಸಹಾಯಕವೆಂದು ಹೇಳಲಾಗುತ್ತದೆ. ಇದು ಪೆಕ್ವಿನ್ ಎಂಬ ಕರಗುವ ಫೈಬರ್ ಅಂಶವನ್ನು ಹೊಂದಿರುತ್ತದೆ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
• ನಿಂಬೆಯಂತೆ ಅದರ ಎಲೆಯಲ್ಲೂ ವಿಟಮಿನ್ ಸಿ ಅಂಶ ಇದ್ದು, ಅದು ದೇಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ನಿಂಬೆಹಣ್ಣಿನ ಎಲೆಯ ಬಳಕೆಯಿಂದ ಹವಾಮಾನ ಬದಲಾವಣೆಯಿಂದಾಗಿ ಹರಡುವ ಸೋಂಕನ್ನು ನೀವು ತಪ್ಪಿಸಬಹುದು.
• ಒತ್ತಡದಿಂದ ಉಂಟಾಗುವ ತಲೆನೋವಿಗೂ ನಿಂಬೆ ಎಲೆಗಳು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಪ್ರತಿನಿತ್ಯ ನಿಂಬೆ ಎಲೆಗಳನ್ನು ಜಗಿಯುವುದರಿಂದ ತಲೆನೋವಿನಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ