AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರವಾದ ಶಾಲಾ ಬ್ಯಾಗ್​​​ಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

ಶಾಲೆಗೆ ಹೋಗುವ ಪುಟಾಣಿ ಮಕ್ಕಳಿಗೆ ಭಾರವಾದ ಶಾಲಾ ಬ್ಯಾಗ್​​ಗಳು ದೊಡ್ಡ ಹೊರೆಯಾಗಿ ಬಿಟ್ಟಿದೆ. ಆ ಮಕ್ಕಳ ತೂಕಕ್ಕಿಂತ ಶಾಲಾ ಬ್ಯಾಗ್​​​ಗಳ ತೂಕವೇ ಹೆಚ್ಚಿರುತ್ತದೆ. ಈ ಹೊರೆಯು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಭಾರವಾದ ಶಾಲಾ ಬ್ಯಾಗ್ ಹೊರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳಾವುವು ಎಂಬುದನ್ನು ನೋಡೋಣ.

ಭಾರವಾದ ಶಾಲಾ ಬ್ಯಾಗ್​​​ಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Aug 18, 2023 | 4:03 PM

Share

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರ ಮಹತ್ವಾಕಾಂಕ್ಷೆ ಮಾತ್ರವಲ್ಲದೆ ಮಕ್ಕಳ ಮೇಲೆ ಭಾರವಾದ ಶಾಲಾ ಬ್ಯಾಗ್​​​ಗಳ ಹೊರೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಸುಸ್ತಾಗಿ ನಿದ್ದೆಗೆ ಜಾರುತ್ತಾರೆ. ಅಲ್ಲದೆ ಭಾರವಾದ ಶಾಲಾ ಬ್ಯಾಗ್​​​ಗಳ ಹೊರೆ, ಮಕ್ಕಳ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ ಭಾರವಾದ ಶಾಲಾ ಚೀಲಗಳನ್ನು ಹೊತ್ತೊಯ್ಯುವುದು ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಮಕ್ಕಳಲ್ಲಿ ಒತ್ತಡದ ಸಮಸ್ಯೆಯನ್ನು ಹೆಚ್ಚಿಸಬಹುದು. ವೈದ್ಯರ ಪ್ರಕಾರ, ದಿನನಿತ್ಯ ಭಾರವಾದ ಶಾಲಾ ಬ್ಯಾಗ್​​​ಗಳನ್ನು ಹೊರುವುದರಿಂದ ಮಕ್ಕಳಲ್ಲಿ ಸ್ಪಾಂಡಿಲೈಟಿಸ್, ಬಾಗಿದ ಬೆನ್ನು ಮತ್ತು ಅನೇಕ ರೀತಿಯ ಬೆನ್ನಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ವೈದ್ಯಕೀಯ ವಿಜ್ಞಾನದ ಪ್ರಕಾರ ಮಗುವಿನ ತೂಕದ ಶೇಕಡಾ 10 ರಷ್ಟು ಮಾತ್ರ ಮಕ್ಕಳು ಬ್ಯಾಗ್​​​ಗಳನ್ನು ಹೊರಬೇಕು. ಇದಕ್ಕಿಂತ ಹೆಚ್ಚಿನ ತೂಕವನ್ನು ಹೊತ್ತುಕೊಂಡರೆ ಅದು ಮಕ್ಕಳ ಎತ್ತರದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ತೋಳು, ಕಾಲು, ಭುಜಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ಯಾವ ವಯಸ್ಸಿನ ಮಗುವಿಗೆ ಶಾಲಾ ಬ್ಯಾಗ್ ತೂಕ ಎಷ್ಟಿರಬೇಕು:

• 5 ವರ್ಷ ವಯಸ್ಸಿನ ಮಗು 1 ಕೆಜಿ

• 6 ವರ್ಷ ವಯಸ್ಸಿನ ಮಗು 2 ಕೆಜೆಗಿಂತ ಕಡಿಮೆ

• 7 ವರ್ಷ ವಯಸ್ಸಿನ ಮಗು 2 ಕೆಜಿ

• 8 ವರ್ಷ ವಯಸ್ಸಿನ ಮಗು 2.5 ಕೆಜಿ

• 9 ವರ್ಷ ವಯಸ್ಸಿನ ಮಗು 2.5 ಕೆಜಿಗಿಂತ ಹೆಚ್ಚು 3 ಕೆಜಿಗಿಂತ ಕಡಿಮೆ

• 10 ವರ್ಷ ವಯಸ್ಸಿನ ಮಗು 3 ಕೆಜಿ

• 11 ರಿಂದ 12 ವರ್ಷ ವಯಸ್ಸಿನ ಮಗು 4 ಕೆಜಿ ಗಿಂತ ಕಡಿಮೆ

ಭಾರವಾದ ಶಾಲಾ ಬ್ಯಾಗ್ ಗಳನ್ನು ಹೊರುವುದರಿಂದ ಆಗುವ ಅನಾನುಕೂಲಗಳು:

ಬೆನ್ನು ನೋವು:

ಭಾರವಾದ ಶಾಲಾ ಬ್ಯಾಗ್​​ಗಳ ಹೊರೆಯಿಂದ ಮಕ್ಕಳ ಬೆನ್ನು ಬಾಗಬಹುದು ಮತ್ತು ವಕ್ರವಾಗುವ ಸಾಧ್ಯತೆ ಇದೆ.  ಇದರಿಂದಾಗಿ ಮಗು ಮುಂದಕ್ಕೆ ವಾಲಲು ಪ್ರಾರಂಭಿಸುತ್ತದೆ. ಮಕ್ಕಳಲ್ಲಿ ಬೆನ್ನು ನೋವಿನ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.

ಒತ್ತಡ:

ಮನಶಾಸ್ತ್ರಜ್ಞರ ಪ್ರಕಾರ ಈ ಬ್ಯಾಗಿನ ಭಾರ ಹೊರುವುದು ಮಕ್ಕಳ ಮಾನಸಿಕ ಆರೋಗ್ಯವು ಕೂಡ ಕುಂಠಿತವಾಗಬಹುದು. ಭಾರವಾದ ಬ್ಯಾಗ್​​ನ ಹೊರೆ ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡಬಹುದು.

ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಸೋಯಾ ಪ್ಯಾನ್ ಕೇಕ್

ಭುಜ ನೋವು:

ಇದರಿಂದ  ಮಗುವಿನ ಭುಜಗಳಲ್ಲಿ ನೋವು ಉಂಟಾಗುತ್ತದೆ. ಅನೇಕ ಬಾರಿ ಈ ನೋವನ್ನು ತಾಳಲಾರದೆ ಮಕ್ಕಳು ಬ್ಯಾಗ್​​ಗಳನ್ನು ಒಂದು ಭುಜದಿಂದ ಇನ್ನೊಂದು ಭುಜಕ್ಕೆ ಪರ್ಯಾಯವಾಗಿ ನೇತು ಹಾಕುತ್ತಾರೆ.

ಸ್ಪಾಂಡಿಲೈಟಿಸ್ ಸಮಸ್ಯೆ:

ಇನ್ನು ಈ ಭಾರ ಹೊರುವುದರಿಂದ ಅವರಲ್ಲಿ ಸ್ಪಾಂಡಿಲೈಟಿಸ್ ಮತ್ತು ಸ್ಕೋಲಿಯೋಸಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ಈ ವಿಷಯಗಳು ನೆನಪಿರಲಿ

• ಮಗು ತನ್ನ ಶಾಲಾ ಬ್ಯಾಗ್ ನಲ್ಲಿ ಆಯಾ ದಿನಕ್ಕೆ ಅಗತ್ಯವಿರುವ ವಸ್ತು ಹಾಗೂ ಪುಸ್ತಕಗಳನ್ನು ಮಾತ್ರ ತೆಗೆದುಕೊಂಡು ಹೋಗುವಂತೆ ನೋಡಿಕೊಳ್ಳಿ.

• ಮಕ್ಕಳಿಗೆ ಬಾಲ್ಯದಿಂದಲೇ ವ್ಯಾಯಾಮ ಮತ್ತು ಯೋಗದ ಅಭ್ಯಾಸವನ್ನು ರೂಢಿಸಿಕೊಳ್ಳಿ.

• ಶಾಲಾಬ್ಯಾಗ್ ಗಳನ್ನು ಖರೀದಿಸುವಾಗ ಯಾವಾಗಲೂ ಭುಜದ ಪಟ್ಟಿಗಳು ಮತ್ತು ಪ್ಯಾಡ್ ಗಳನ್ನು ಹೊಂದಿರುವ ಬ್ಯಾಗ್ ಗಳನ್ನು ಖರೀದಿಸಿ. ಇದು ಕುತ್ತಿಗೆ ಮತ್ತ ಭುಜದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Fri, 18 August 23

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು