Varamahalakshmi Vrata 2023: ವರಮಹಾಲಕ್ಷ್ಮೀ ಹಬ್ಬ: ಮನೆಯ ಅಲಂಕಾರ ಹೀಗಿದ್ದರೆ ಚೆಂದ

ವರಮಹಾಲಕ್ಷ್ಮೀ ವ್ರತ ಇನ್ನೇನೂ ಹತ್ತಿರದಲ್ಲಿದೆ. ಈ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯು ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲು ಮನೆಯನ್ನು ಭರ್ಜರಿಯಾಗಿ ಅಲಂಕಾರ ಮಾಡುತ್ತಾರೆ. ಗೃಹಾಲಂಕಾರವು ನಿಮ್ಮ ವ್ಯಕ್ತಿತ್ವವನ್ನು ಗುರುತಿಸುವ ಒಂದು ಮಾರ್ಗವಾಗಿದೆ. ಅದರಲ್ಲೂ ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡುವುದು ತುಂಬಾ ಮುಖ್ಯವಾಗಿದೆ. ನಾವು ಮಾಡುವ ಅಲಂಕಾರವು ಮನೆಗೆ ಹಬ್ಬದ ವಾತಾವರಣವನ್ನು ಒದಗಿಸುತ್ತದೆ.

Varamahalakshmi Vrata 2023: ವರಮಹಾಲಕ್ಷ್ಮೀ ಹಬ್ಬ: ಮನೆಯ ಅಲಂಕಾರ ಹೀಗಿದ್ದರೆ ಚೆಂದ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Aug 24, 2023 | 9:47 AM

ವರಮಹಾಲಕ್ಷ್ಮೀ ವ್ರತವನ್ನು ಸುಮಂಗಲಿಯರು ಬಹಳ ಶ್ರದ್ಧಾ ಪೂರ್ವಕವಾಗಿ ಆಚರಿಸುತ್ತಾರೆ. ಹಾಗೂ ಈ ದಿನ ಲಕ್ಷ್ಮೀ ದೇವಿಯನ್ನು ಮನೆಗೆ ಬರ ಮಾಡಿಕೊಳ್ಳಲು ಮನೆಯನ್ನು ಸುಂದರವಾಗಿ ಅಲಂಕಾರ ಮಾಡುತ್ತಾರೆ. ಯಾವ ಮನೆಯು ಸ್ವಚ್ಛವಾಗಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ ಎಂಬ ಮಾತಿದೆ. ಆ ಮಾತಿಗೆ ಅನುಗುಣವಾಗಿ ಈ ಹಬ್ಬದಂದು ಪೂರ್ತಿ ಮನೆಯನ್ನು ಸ್ವಚ್ಛವಾಗಿಸುವುದರ ಜೊತಗೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಈ ಬಾರಿ ಆಗಸ್ಟ್ 25 ರಂದು ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದ್ದು, ಈ ದಿನ ಮನೆಯನ್ನು ಸುಂದರವಾಗಿ ಅಲಂಕರಿಸಬೇಕೆಂದುಕೊಂಡಿದ್ದೀರಾ, ಹಾಗಿದ್ದರೆ ಈ ಸರಳ ರೀತಿಯಲ್ಲಿ ಮನೆಯನ್ನು ಸುಂದರವಾಗಿ ಅಲಂಕರಿಸಿ.

ವರಮಹಾಲಕ್ಷ್ಮೀ ಹಬ್ಬದಂದು ಮನೆಯ ಅಲಂಕಾರ ಈ ರೀತಿಯಲ್ಲಿ ಮಾಡಿ:

ಪ್ರವೇಶದ್ವಾರ:

ಯಾವುದೇ ಹಬ್ಬವಾಗಿರಲಿ ಮನೆಯ ಪ್ರವೇಶದ್ವಾರಕ್ಕೆ ಹೂವು ಹಾಗೂ ತೋರಣಗಳಿಂದ ಅಲಂಕಾರ ಮಾಡುವುದರಿಂದ ಮನೆಯು ಸುಂದರವಾಗಿ ಕಾಣಿಸುವುದರ ಜೊತೆಗೆ ಮನೆಯಲ್ಲಿ ಹಬ್ಬದ ಕಳೆ ಮೂಡುತ್ತದೆ. ನೀವು ವರಮಹಾಲಕ್ಷ್ಮೀ ವ್ರತಾಚರಣೆಯ ದಿನದಂದು ಮನೆಯ ಪ್ರವೇಶ ದ್ವಾರಕ್ಕೆ ಮಾವಿನ ತೋರಣವನ್ನು ಕಟ್ಟಿ ಮುಂಬಾಗಿಲಿನ ಎರಡು ಬದಿಯಲ್ಲೂ ಚೆಂಡು ಹೂವಿನ ಅಥವಾ ಸೇವಂತಿಗೆ ಹೂವಿನ ಹೂಮಾಲೆಯನ್ನು ತೂಗಿಸಿ ಹಾಕಬಹುದು.

ರಂಗೋಲಿ:

ಹಬ್ಬದ ದಿನ ಮಾತ್ರವಲ್ಲದೇ ಪ್ರತಿನಿತ್ಯ ಮನೆಯ ಪ್ರವೇಶ ದ್ವಾರದ ಬಳಿ ರಂಗೋಲಿ ಬಿಡಿಸುವುದು ಒಳ್ಳೆಯದು. ಏಕೆಂದರೆ ಇದು ಮನೆಗೆ ಧನಾತ್ಮಕ ಕಂಪನವನ್ನು ನೀಡುತ್ತದೆ. ಈ ವರಮಹಾಲಕ್ಷ್ಮೀ ಹಬ್ಬದ ದಿನ ಲಕ್ಷ್ಮೀ ದೇವಿಯನ್ನು ಮನೆಗೆ ಬರ ಮಾಡಿಕೊಳ್ಳಲು, ಮೊದಲಿಗೆ ಮನೆಯ ಮುಂಬಾಗಿಲನ್ನು ಸ್ವಚ್ಛಗೊಳಿಸಿ ಹಬ್ಬದ ವಾತಾವರಣವನ್ನು ಹೆಚ್ಚಿಸುವ ಸುಂದರವಾದ ರಂಗೋಲಿಯನ್ನು ಬಿಡಿಸಿ. ಮಾತ್ರವಲ್ಲದೆ ದೇವರ ಕೋಣೆಯ ಬಳಿಯು ಸುಂದರವಾದ ರಂಗೋಲಿಯ ಚಿತ್ತಾರವನ್ನು ಬಿಡಿಸಿ. ಇದು ಮನೆಗೆ ಹಬ್ಬದ ವಾತಾವರಣವನ್ನು ನೀಡುತ್ತದೆ.

ಇದನ್ನೂ ಓದಿ:ವರಮಹಾಲಕ್ಷ್ಮೀ ಹಬ್ಬ ಯಾವಾಗ? ಪೂಜಾ ಸಮಯ, ವ್ರತ ಮಾಡುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

ಹೂವಿನ ಅಲಂಕಾರ:

ನೀವು ರಂಗೋಲಿ ಮಾತ್ರವಲ್ಲದೆ ಹೂವುಗಳಿಂದಲೂ ಮನೆಯ ಮುಂಭಾಗವನ್ನು ಅಲಂಕರಿಸಬಹುದು. ಮನೆಯ ಪ್ರವೇಶದ್ವಾರಕ್ಕೆ ಹಾಗೂ ದೇವರ ಕೋಣೆಯ ಪ್ರವೇಶ ದ್ವಾರಕ್ಕೆ ಹೂಮಾಲೆಯನ್ನು ಹಾಕಿ ಅಲಂಕರಿಸಬಹುದು. ಮಾತ್ರವಲ್ಲದೆ ಲಿವಿಂಗ್ ರೂಮ್​​​ನಲ್ಲಿ ನೈಜ ಹೂವು ಅಥವಾ ಹಳದಿ ಮತ್ತು ಕೇಸರಿ ಬಣ್ಣದ ಪೇಪರ್ ಹೂವುಗಳ ಜೊತೆಗೆ ಲೈಟಿಂಗ್ಸ್ ಗಳ ಅಲಂಕಾರವನ್ನು ಮಾಡಬಹುದು.

ಲಿವಿಂಗ್ ರೂಮ್:

ಸಾಮಾನ್ಯವಾಗಿ ವರಮಹಾಲಕ್ಷ್ಮೀ ಹಬ್ಬದ ದಿನದಂದು ಮಹಿಳೆಯರು ಸಂಬಂಧಿಕರು ಮತ್ತು ಅಕ್ಕಪಕ್ಕದ ಮನೆಯವರನ್ನು ಪೂಜೆಗೆ ಆಹ್ವಾನಿಸುತ್ತಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಲು ಲಿವಿಂಗ್ ರೂಮ್​​​​ನ್ನು ಅಲಂಕರಿಸುವುದು ಬಹಳ ಮುಖ್ಯ. ಮೊದಲಿಗೆ ಪೂರ್ತಿ ಮನೆಯನ್ನು ಸ್ವಚ್ಛಗೊಳಿಸಿ ನಂತರ ಕಿಟಕಿಗಳಿಗೆ ಹೊಸ ಕರ್ಟನ್ ಗಳನ್ನು ಹಾಕಿ. ಜೊತೆಗೆ ನಿಮ್ಮ ಸೋಫಾ ಕವರ್​​ಗಳು, ಕುಶನ್ ಕವರ್ ಗಳು ಟೇಬಲ್ ಮ್ಯಾಟ್ ಇತ್ಯಾದಿಗಳನ್ನು ಬದಲಾಯಿಸಿ ಹಬ್ಬದ ವಾತಾವರಣಕ್ಕೆ ಹೊಂದಿಕೊಳ್ಳುವ ಗಾಢ ಬಣ್ಣದ ಕವರ್ ಗಳನ್ನು ಹಾಸಬಹುದು. ಅಲ್ಲದೆ ನೀವು ನಿರ್ಧಿಷ್ಟ ಥೀಮ್ ಇಟ್ಟುಕೊಂಡು ಆ ಥೀಮ್​​​ಗೆ ಅನುಗುಣವಾಗಿ ಅಲಂಕಾರ ಮಾಡಬಹುದು. ಹಾಗೂ ಆಂಟಿಕ್ ವಸ್ತುಗಳು ಹಾಗೂ ಹೂದಾನಿಗಳನ್ನು ಟೇಬಲ್ ಹಾಗೂ ಲಿವಿಂಗ್ ರೂಮ್ ಕಾರ್ನರ್ ಗಳಲ್ಲಿ ಜೋಡಿಸುವ ಮೂಲಕ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಮಂದಿರ ಅಲಂಕಾರ:

ಪೂಜೆಯ ಮೊದಲು ಮನೆಯ ಪೂಜಾ ಮಂದಿರದ (ದೇವರ ಕೋಣೆ) ಅಲಂಕಾರವೂ ಅಷ್ಟೇ ಮುಖ್ಯ. ದೇವರ ಕೋಣೆಯ ಪ್ರವೆಶದ್ವಾರಕ್ಕೆ ತಳಿರುತೋರಣ ಹಾಗೂ ಹೂಮಾಲೆಯನ್ನು ಕಟ್ಟಿ ಅಂದವಾಗಿ ಅಲಂಕರಿಸಬೇಕು. ಅಲ್ಲದೆ ದೇವರ ಕೋಣೆಯ ಮುಂದೆ ಕಂಚಿನ ದೀಪಗಳನ್ನಿಟ್ಟು ದೀಪ ಬೆಳಗಿಸಿ. ಆದಷ್ಟು ಸಾಂಪ್ರದಾಯಿಕ ವಿನ್ಯಾಸಗಳಿರುವ ಆಂಟಿಕ್ ವಸ್ತುಗಳನ್ನು ಬಳಸಿ ಮನೆಯನ್ನು ಅಲಂಕರಿಸಿ. ಇದು ಮನೆಯ ನೋಟವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Fri, 18 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ