Zero Shadow Day: ಇಂದು ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು, ಈ ಜಿಲ್ಲೆಗಳಲ್ಲೂ ಸಂಭವಿಸಲಿದೆ

ಇಂದು ಎರಡು ನಿಮಿಷಗಳ ಕಾಲ ನೆರಳಿನ ಚಮತ್ಕಾರವನ್ನು ಬೆಂಗಳೂರಿಗರು ವೀಕ್ಷಿಸಲಿದ್ದಾರೆ. ಹೌದು ಇಂದು ಬಿಸಿಲು ಇದ್ದರೂ ಕೆಲವು ಕ್ಷಣಗಳ ವರೆಗೆ ಜನರು ತಮ್ಮ ನೆರಳುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಂದು ಶೂನ್ಯ ನೆರಳಿನ ದಿನ. ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುವಾಗ ಅಂದರೆ ಸರಿಸುಮಾರು ಮದ್ಯಾಹ್ನದ ವೇಳೆಗೆ (12.24 ರ ಹೊತ್ತಿಗೆ) ಈ ಘಟನೆ ಸಂಭವಿಸಲಿದೆ. ಈ ಸಮಯದಲ್ಲಿ ಝೀರೋ ಶ್ಯಾಡೋ ಡೇ ಬ ಕುತೂಹಲಕಾರಿ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು.

Zero Shadow Day: ಇಂದು ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು, ಈ ಜಿಲ್ಲೆಗಳಲ್ಲೂ ಸಂಭವಿಸಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 18, 2023 | 12:11 PM

ಸೂರ್ಯಗ್ರಹಣ, ಚಂದ್ರಹಣ ಸೇರಿದಂತೆ ಹಲವು ಖಗೋಳ ವಿಸ್ಮಯಗಳು ನಭೋ ಮಂಡಲದಲ್ಲಿ ನಡೆಯುತ್ತಿರುತ್ತದೆ. ನಾವು ಕೂಡಾ ಈ ವಿಸ್ಮಯಗಳನ್ನು ನೋಡಿರುತ್ತೇವೆ. ಇಂದು ಅಂತಹದ್ದೇ ಒಂದು ಖಗೋಳ ವಿಸ್ಮಯಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಹೌದು ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಶೂನ್ಯ ನೆರಳಿನ ದಿನ ಎಂದರೆ ನಮ್ಮ ನೆರಳು ಗೋಚರಿಸದಿರುವುದು. ಇದು ವರ್ಷಕ್ಕೆ ಎರಡು ಬಾರಿ ಸಂಭವಿಸುವ ವಿಶೇಷ ಖಗೋಳ ಘಟನೆಯಗಿದೆ. ಇಂದು ಬೆಂಗಳೂರು ಸೇರಿದಂತೆ ಇನಿತರ ಸ್ಥಳಗಳಲ್ಲಿ ಜನರು ಈ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಅಂದರೆ 12:24 ರ ವೇಳೆಗೆ ಸುಮಾರು ಒಂದುವರೆ ನಿಮಿಷಗಳ ಕಾಲ ಯಾವುದೇ ನೆರಳು ಗೋಚರಿಸುವುದಿಲ್ಲ. ಈ ಹಿಂದೆ ಶೂನ್ಯ ನೆರಳಿನ ದಿನದವು ಇದೇ ವರ್ಷ ಏಪ್ರಿಲ್ 25 ರಂದು ಸಂಭವಿಸಿತ್ತು.

ಈ ವಿಶೇಷ ಸ್ಥಿತಿಗೆ ಕಾರಣವೆಂದರೆ ಭೂಮಿಯ ತಿರುಗುವಿಕೆಯ ಅಕ್ಷದ ಓರೆಯಾಗಿದೆ. ಈ ಓರೆಯ ಕಾರಣದಿಂದ ಉತ್ತರ ಮತ್ತು ದಕ್ಷಿಣದ ನಡುವೆ ಸೂರ್ಯ ಸ್ಥಾನವು ಬದಲಾಗುತ್ತದೆ. ಇದನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯಲಾಗುತ್ತದೆ. ಅಂದರೆ ಸೂರ್ಯನು ದಿನದ ಅತ್ಯುನ್ನತ ಹಂತದಲ್ಲಿ ಸಮಭಾಜಕ 23.5 ಡಿಗ್ರಿ ದಕ್ಷಿಣದಿಂದ ಸಮಭಾಜಕದ ಉತ್ತರಾಯಣಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ. ಮತ್ತು ಒಂದು ವರ್ಷದಲ್ಲಿ ಮತ್ತೆ ದಕ್ಷಿಣಾಯಣಕ್ಕೆ ಹಿಂತಿರುಗುತ್ತಾನೆ. ಈ ಮಧ್ಯೆ ಸೂರ್ಯನು ನಮ್ಮ ತಲೆಯ ಮೇಲೆ ನೇರವಾಗಿ ಬರುವ ದಿನ ಬರುತ್ತದೆ. ಈ ದಿನದಲ್ಲಿ ಯಾವುದೇ ನೇರ ಅಥವಾ ಲಂಬವಾದ ವಸ್ತು ಅಥವಾ ಜೀವಿಗಳ ನೆರಳು ಗೋಚರಿಸುವುದಿಲ್ಲ. ಈ ದಿನವನ್ನು ಶೂನ್ಯ ನೆರಳು ದಿನ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು, ಇಂದು ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ

ಇದನ್ನೂ ಓದಿ:

ಶೂನ್ಯ ನೆರಳು ದಿನವು ವರ್ಷಕ್ಕೆ ಎರಡು ಬಾರಿ ಬರುತ್ತದೆ:

ಶೂನ್ಯ ನೆರಳು ದಿನವು ವರ್ಷಕ್ಕೆ ಎರಡು ಬಾರಿ ಬರುತ್ತದೆ. ಒಂದು ಸೂರ್ಯ ಉತ್ತರದ ಕಡೆಗೆ ಚಲಿಸಿದಾಗ ಬರುತ್ತದೆ ಮತ್ತು ಇನ್ನೊಂದು ಸೂರ್ಯ ದಕ್ಷಿಣಕ್ಕೆ ಚಲಿಸಿದಾಗ ಬರುತ್ತದೆ. ಈ ವರ್ಷ ಒಂದು ಶೂನ್ಯ ನೆರಳು ದಿನದ ಘಟನೆ ಏಪ್ರಿಲ್ 25 ರಂದು ಸಂಭವಿಸಿತ್ತು. ಎರಡನೆಯದು ಇಂದು ಸಂಭವಿಸಲಿದೆ. ವಿಜ್ಞಾನಿಗಳ ಪ್ರಕಾರ ನಮ್ಮ ದೇಶದಲ್ಲಿ ಕರ್ಕಾಟಕ ಮತ್ತು ಮಕರ ಸಂಕ್ರಾತಿಯ ನಡುವೆ ಬರುವ ಸ್ಥಳಗಳಲ್ಲಿ ಅಥವಾ ನಗರಗಳಲ್ಲಿ ಈ ಘಟನೆ ಸಂಭವಿಸುತ್ತದೆ. ಈ ಸಮಯದಲ್ಲಿ ಸೂರ್ಯನು ಆಕ್ಷಾಂಶ ರೇಖೆಯ ಮೇಲಿರುತ್ತಾನೆ.

ಆಸ್ಟ್ರೋನಮಿಕಲ್ ಸೊಸೈಟಿ ಆಫ್ ಇಂಡಿಯಾ (ಎ.ಎಸ್.ಐ) ಪ್ರಕಾರ ಪ್ರಕಾರ ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಆಕ್ಷಾಂಶದ ನಡುವಿನ ಸ್ಥಳದಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ವಿಶೇಷ ಆಕಾಶ ಘಟನೆಯಾಗಿದೆ. ಈ ಘಟನೆಯ ಸಮಯದಲ್ಲಿ ಸೂರ್ಯನು ಆಕಾಶದಲ್ಲಿ ಅತ್ಯುನ್ನತ ಹಂತದಲ್ಲಿರುತ್ತಾನೆ. ಇದರ ಪರಿಣಾಮವಾಗಿ ಯಾವುದೇ ವಸ್ತು ಅಥವಾ ವ್ಯಕ್ತಿಯ ನೆರಳು ಕಾಣಿಸಿಕೊಳ್ಳುವುದಿಲ್ಲ.

ಇತರ ಯಾವ ಸ್ಥಳಗಳಲ್ಲಿ ಈ ಘಟನೆ ಗೋಚರಿಸಲಿದೆ:

ಇಂದು ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಬಂಟ್ವಾಳ, ಸಕಲೇಶಪುರ, ಹಾಸನ, ಬಿಡದಿ, ದಾಸರಹಳ್ಳಿ, ಬಂಗಾರಪೇಟೆ, ಕೋಲಾರ, ವೆಲ್ಲೂರು, ಚೆನ್ನೈ, ಶ್ರೀಪೆರಂಬದೂರು, ತಿರುವಳ್ಳೂರು ಮುಂತಾದೆಡೆ ಈ ವಿಸ್ಮಯ ಗೋಚರಿಸಲಿದೆ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್