Zero Shadow Day: ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು, ಇಂದು ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ

ನಗರವಾಸಿಗಳು ಇಂದು (ಏ.25) ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ. ಇಂದು ಏಪ್ರಿಲ್ 25 ಮಂಗಳವಾರ ಶೂನ್ಯ ನೆರಳು ದಿನವಾಗಿದೆ. ಮಧ್ಯಾಹ್ನ 12.17 ಕ್ಕೆ, ಸೂರ್ಯನು ಬೆಳಕು ನಿಮ್ಮ ಮೇಲೆ ಬಿದ್ದರೂ ನಿಮ್ಮ ನೆರಳು ಮಾತ್ರ ಕಾಣುವುದಿಲ್ಲ.

Zero Shadow Day: ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು, ಇಂದು ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ
ಶೂನ್ಯ ನೆರಳಿನ ದಿನದ ಅನುಭವ
Follow us
ವಿವೇಕ ಬಿರಾದಾರ
|

Updated on:Apr 25, 2023 | 8:51 AM

ಬೆಂಗಳೂರು: ನಗರವಾಸಿಗಳು ಇಂದು (ಏ.25) ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ. ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ಇದು ಸುಳ್ಳಾಗಲಿದೆ. ನೆರಳು ನಿಮ್ಮನ್ನು ಹಿಂಬಾಲಿಸೋದು ಇರಲಿ ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ. ಏಕೆಂದರೆ, ಮಂಗಳವಾರ ಸಿಲಿಕಾನ್​ ಸಿಟಿ ಬೆಂಗಳೂರು ಜನರು ಶೂನ್ಯ ನೆರಳಿನ ದಿನಕ್ಕೆ (Zero Shadow Day) ಸಾಕ್ಷಿಯಾಗಲಿದ್ದಾರೆ..! ದಿನದ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಯಾವುದೇ ನೆರಳು ಇರುವುದಿಲ್ಲ. ಇಂದು ಏಪ್ರಿಲ್ 25 ಮಂಗಳವಾರ ಶೂನ್ಯ ನೆರಳು ದಿನವಾಗಿದೆ. ಮಧ್ಯಾಹ್ನ 12.17 ಕ್ಕೆ, ಸೂರ್ಯನ ಬೆಳಕು ನಿಮ್ಮ ಮೇಲೆ ಬಿದ್ದರೂ ನಿಮ್ಮ ನೆರಳು ಮಾತ್ರ ಕಾಣುವುದಿಲ್ಲ.

ಈ ಒಂದು ಅಪರೂಪದ ಖಗೋಳ ವಿದ್ಯಮಾನದ ಬಗ್ಗೆ ಜನರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯು ಬೆಂಗಳೂರಿನ ಕೋರಮಂಗಲದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಸಂಸ್ಥೆಯ ಆವರಣದಲ್ಲಿ ಶೂನ್ಯ ನೆರಳಿನ ದಿನದ ಅನುಭವವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ಏನಿದು ಶೂನ್ಯ ನೆರಳಿನ ದಿನ?

ಶೂನ್ಯ ನೆರಳಿನ ದಿನವು ವರ್ಷದಲ್ಲಿ 2 ಬಾರಿ ಬರುತ್ತದೆ. ಈ ಅವಧಿಯಲ್ಲಿ ಸೂರ್ಯನ ಬಿಸಿಲು ನೇರವಾಗಿ ನಿಮ್ಮ ನೆತ್ತಿ ಮೇಲೆ ಬೀಳುತ್ತದೆ. ಆದರೆ ನಿಮ್ಮ ನೆರಳು ಭೂಮಿಗೆ ಬೀಳೋದಿಲ್ಲ. ಈ ಅಪರೂಪದ ಕ್ಷಣಕ್ಕೆ ನೀವು ಇಂದು ಸಾಕ್ಷಿಯಾಗಲಿದ್ದೀರಿ. ಈ ಸಮಯದಲ್ಲಿ ಉದ್ದವಾಗಿ ನಿಂತ ಯಾವುದೇ ವಸ್ತು, ವ್ಯಕ್ತಿಯ ನೆರಳು ಭೂಮಿಯ ಮೇಲೆ ಬೀಳೋದಿಲ್ಲ.

ಈ ಅಪರೂಪದ ಖಗೋಳ ವಿದ್ಯಮಾನವು ವರ್ಷಕ್ಕೆ 2 ಬಾರಿ ನಡೆಯುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಜನರು ಶೂನ್ಯ ನೆರಳಿನ ಅನುಭವವನ್ನು ಪಡೆಯುತ್ತಾರೆ. (ಅಂದರೇ ವರ್ಷಕ್ಕೆ ಎರಡು ಬಾರಿ) ಉತ್ತರಾಯಣದಲ್ಲಿ ಒಮ್ಮೆ ಹಾಗೂ ದಕ್ಷಿಣಾಯನ ಕಾಲದಲ್ಲಿ ಒಮ್ಮೆ ಈ ರೀತಿಯ ಶೂನ್ಯ ನೆರಳಿನ ದಿನ ಬಂದು ಹೋಗುತ್ತದೆ. ಈ ವರ್ಷ ಏಪ್ರಿಲ್ 25 ಹಾಗೂ ಆಗಸ್ಟ್ 18 ರಂದು ಶೂನ್ಯ ನೆರಳಿನ ದಿನ ಆಗಲಿದೆ.

ಈ ಸಂದರ್ಭದಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೇ ಇರುತ್ತಾನೆ. ಹೀಗಾಗಿ, ನಮ್ಮ ನೆರಳಿನ ಉದ್ದ ಅತ್ಯಂತ ಕಡಿಮೆ ಆಗುತ್ತದೆ. ಇದರಿಂದ ನಾವು ಬಿಸಿಲಿನಲ್ಲಿ ನಿಂತರೂ ನಮ್ಮ ನೆರಳು ಕಾಣೆಯಾಗಿರುತ್ತದೆ. ಇದನ್ನೇ ಶೂನ್ಯ ನೆರಳಿನ ದಿನ ಎನ್ನಲಾಗುತ್ತದೆ. ವಿಶ್ವಾದ್ಯಂತ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ಒಳಗೆ ಬರುವ ಯಾವುದೇ ವ್ಯಕ್ತಿ ಹಾಗೂ ವಸ್ತವಿನ ನೆರಳು ಕಾಣುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 am, Tue, 25 April 23