ಬಾಲ್ಯದಲ್ಲಿ ಚಿಕ್ಕಪುಟ್ಟ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೆವು, ಬೆಳೆದು ದೊಡ್ಡವರಾದಂತೆ ಖುಷಿಯ ಪದದ ಅರ್ಥವೇ ಬದಲಾಗಿದೆ.
ಹಣವಿದ್ದರೆ ಮಾತ್ರ ಖುಷಿ, ಇಷ್ಟಪಟ್ಟಿದ್ದನ್ನು ಕೊಂಡುಕೊಂಡರೆ ಮಾತ್ರ ಮೊಗದಲ್ಲಿ ನಗು ಹೀಗೆ ಖುಷಿಯ ಅರ್ಥವೂ ಕೂಡ ವಿಷಯಗಳಿಗೆ ಸೀಮಿತವಾಗುತ್ತಾ ಹೋಯಿತು. ಮೊದಲು ಅಮ್ಮ ಮನೆಯಲ್ಲಿ ಸಹಿ ಮಾಡಿದರೆ ಸಾಕು ಚಪ್ಪರಿಸಿ ತಿಂದು ಖುಷಿಪಡುತ್ತಿದ್ದೆವು ಈಗ ಮೃಷ್ಟಾನ್ನ ಭೋಜನವನ್ನೇ ತಿಂದರೂ ಆ ಖುಷಿ ಇಲ್ಲ, ಹಬ್ಬಕ್ಕೆ ಅಪ್ಪ ಬಟ್ಟೆ ತಂದಾಗ ಆಗುವ ಖುಷಿ ನಿತ್ಯ ಮಾಲ್ಗಳಿಗೆ ಹೋಗಿ ಹತ್ತಾರು ಒಟ್ಟಿಗೆ ಕೊಂಡರೂ ಸಿಗುತ್ತಿಲ್ಲ.
ಸ್ನೇಹಿತರ ಜತೆ ಸೈಕಲ್ ತುಳಿದರೂ ಎಷ್ಟೋ ಖುಷಿ ಈಗ ಸ್ನೇಹಿತರೊಂದಿಗೆ ಮಾತನಾಡಲೂ ಸಮಯವಿಲ್ಲ. ಖುಷಿಯನ್ನು ನೀವೇ ಅರಸುವುದನ್ನು ಬಿಟ್ಟಿದ್ದೀರಿ. ಖುಷಿ ಎಲ್ಲಿಯೂ ಹೋಗಿಲ್ಲ, ಆ ನಗುವನ್ನು ಕಂಡುಕೊಳ್ಳಲು ನೀವು ಪ್ರಯತ್ನಿಸುತ್ತಲೇ ಇಲ್ಲ. ಎಲ್ಲರಿಗೂ ಖುಷಿಯಾಗಿರುವ ಹಕ್ಕಿದೆ.
ನೀವು ಗಳಿಸಿರುವ ಸಂತೋಷಕ್ಕೆ ಕೃತಜ್ಞತೆ ವ್ಯಕ್ತಪಡಿಸಿ
ನೀವು ಈಗಿರುವ ಸ್ಥಿತಿಗೆ ಸಿಕ್ಕಿರುವ ಖುಷಿಗೆ ಸಂತೋಷವನ್ನು ವ್ಯಕ್ತಪಡಿಸಿ. ನಿಮ್ಮಲ್ಲಿರುವ ಎಷ್ಟೋ ವಸ್ತುಗಳು ಬೇರೆಯವರ ಬಳಿ ಇರುವುದಿಲ್ಲ ಅದಕ್ಕಾಗಿ ಖುಷಿ ಪಡಿ.
ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಿ
ನೀವು ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಈಗ ಹೇಗೆ ತಂತೋಷವಾಗಿರಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡುವುದು ಅಗತ್ಯ. ಕೆಲವರು ಅನುಭವಿಸಿರುವ ಕಹಿ ನೆನಪುಗಳನ್ನೇ ಮೆಲುಕು ಹಾಕುತ್ತಾ ಮತ್ತೆ ಮತ್ತೆ ನೋವು ಅನುಭವಿಸುತ್ತಿರುತ್ತಾರೆ, ಆದರೆ ಅದೆಲ್ಲದರಿಂದ ಹೊರಬರಲೇಬೇಕು ಆಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ.
ಇತರರಿಗೆ ಹಿತವೆನಿಸುವಂತಿರಿ
ಯಾರಾದರೂ ನಮಗೆ ಕಟ್ಟದ್ದನ್ನು ಮಾಡಿದರೆ, ನಮಗೆ ಅವರ ಮೇಲೆ ನಕಾರಾತ್ಮಕ ಭಾವನೆಗಳು ಹುಟ್ಟುವುದು ಸಹಜ. ಆದರೆ ಅವರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಯುವುದು ಜಾಣತನ.
ನಿಮ್ಮ ಮನಸ್ಸಿನಲ್ಲಿ ಯಾರಿಗಾದರೂ ನಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡರೆ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕೋಪವನ್ನು ನಿಯಂತ್ರಿಸಿ.
ನಿಮಗೆ ಏನಿಷ್ಟವೋ ಅದನ್ನು ಮಾಡಿ
ನಿಮ್ಮ ನೆಚ್ಚಿನ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದು ಚಿಂತೆಯನ್ನು ದೂರವಿರಸಲು ಸುಲಭ ಮಾರ್ಗವಾಗಿದೆ. ನಿಮ್ಮ ಬಯಕೆಗಳ ಮೇಲೆ ಕೆಲಸ ಮಾಡುವುದು ಒತ್ತಡ ಮತ್ತು ಆತಂಕದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ನಿಮಗೆ ನೀವೇ ಸವಾಲು ಹಾಕಿ
ಇತರರನ್ನು ಸವಾಲಾಗಿ ತೆಗೆದುಕೊಳ್ಳುವ ಬದಲು ನಿಮಗೆ ನೀವು ಸವಾಲು ಹಾಕಿ, ನಿಮ್ಮ ವ್ಯಕ್ತಿತ್ವವನ್ನು ಹೇಗೆ ಸುಧಾರಿಸಿಕೊಳ್ಳುವುದು ಎಂಬುದರ ಕುರಿತು ಗಮನವಹಿಸಿ ಅದರಿಂದ ನೀವು ಚಿಂತೆಯನ್ನು ಮರೆತು ನೆಮ್ಮದಿಯಿಂದ ಇರಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ