AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಕವಾಗಿರುವ ಪ್ರಾಣಿ ಯಾವುದು ಎಂದು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ?

ನಮ್ಮ ತಲೆಗೆ ಹುಳ ಬಿಡುವಂತಹ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಯಾವ ಪ್ರಾಣಿ ಅಡಕವಾಗಿದೆ ಎಂದು ಕಂಡು ಹಿಡಿಯಲು ಸವಾಲನ್ನು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

Optical Illusion: ಈ ಚಿತ್ರದಲ್ಲಿ ಅಡಕವಾಗಿರುವ ಪ್ರಾಣಿ ಯಾವುದು ಎಂದು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್‌Image Credit source: Times Of India
ಮಾಲಾಶ್ರೀ ಅಂಚನ್​
|

Updated on: Aug 05, 2025 | 3:44 PM

Share

ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ನಮ್ಮ ಕಣ್ಣುಗಳಿಗೆ ಭ್ರಮೆಯನ್ನು ಉಂಟು ಮಾಡುವುದು ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆಗೆ, ದೃಷ್ಟಿ ತೀಕ್ಷ್ಣತೆಗೆ ಸವಾಲೊಡ್ಡುವಂತಿರುತ್ತವೆ. ಈ ಒಗಟಿನ ಆಟಗಳು ಕೇವಲ ಮೋಜಿನ ಆಟಗಳು ಮಾತ್ರವಲ್ಲದೆ, ಇವು ನಮ್ಮ ಮೆದುಳಿಗೆ ವ್ಯಾಯಾಮವನ್ನು ಸಹ ನೀಡುತ್ತವೆ. ತರಹೇವಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ನೀವು ಕೂಡ ಇಂತಹ ಮೋಜಿನ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ದೃಷ್ಟಿ ಭ್ರಮೆಯ ಚಿತ್ರ ವೈರಲ್‌ ಆಗಿದ್ದು, ನಿಮಗೆ ಅದರಲ್ಲಿ ಯಾವ ಪ್ರಾಣಿ ಅಡಗಿದೆ ಎಂದು ಹುಡುಕಲು ಸವಾಲನ್ನು ನೀಡಲಾಗಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ 7 ಸೆಕೆಂಡುಗಳ ಒಳಗೆ ಆ ಚಿತ್ರ ನೋಡಿದಾಗ ಯಾವ ಪ್ರಾಣಿ ಕಂಡಿತು ಎಂದು ಸರಿಯಾದ ಉತ್ತರವನ್ನು ನೀಡಬೇಕು.

ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಹೇಳಬಲ್ಲಿರಾ?

Optical Illusion

ಇದನ್ನೂ ಓದಿ
Image
ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?
Image
ಈ ಚಿತ್ರದಲ್ಲಿ ಅಡಗಿರುವ ಮರಕುಟಿಕವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದೊಳಗೆ ಅಡಗಿರುವ ಜೀವಿಯನ್ನು ಗುರುತಿಸಬಲ್ಲಿರಾ
Image
ಈ ಚಿತ್ರದಲ್ಲಿ ತೋಳ ಎಲ್ಲಿದೆ ಎಂದು ಕಂಡು ಹಿಡಿಯುವಿರಾ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು br4inteaserhub ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ನಿಮಗೆ ಕೇವಲ 7 ಸೆಕೆಂಡುಗಳ ಒಳಗೆ ಯಾವ ಪ್ರಾಣಿ ಅಡಗಿದೆ ಎಂದು ಕಂಡು ಹಿಡಿಯಲು ಸವಾಲನ್ನು ನೀಡಲಾಗಿದೆ. ಮರ, ಗಿಡ, ಗುಡಿಸಲಿರುವ ಈ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿದೆ. ಅದು ಯಾವುದೆಂದು ನೀವು ಕಂಡು ಹಿಡಿಯಬೇಕು.

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಗಿಡ-ಮರ, ಹಕ್ಕಿ, ಗುಡಿಸಲನ್ನು ಒಳಗೊಂಡಿರುವ ಹಳ್ಳಿಯ ಈ ಚಿತ್ರಣದಲ್ಲಿ ಒಂದು ಪ್ರಾಣಿ ಅಡಕವಾಗಿದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಏಕಾಗ್ರತೆಯನ್ನು ಉಪಯೋಗಿಸಿ ಕೇವಲ 7 ಸೆಕೆಂಡುಗಳ ಒಳಗೆ ನೀವು ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯಬೇಕು. ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂದು ಪರೀಕ್ಷಿಸುವ ಮೋಜಿನ ಆಟ ಇದಾಗಿದೆ. ಹಾಗಿದ್ದರೆ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಿ ಅಲ್ವಾ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?

ಉತ್ತರ ಇಲ್ಲಿದೆ?

7 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದರೆ ಅಭಿನಂದನೆಗಳು. ನೀವು ಉತ್ತಮ ಮಟ್ಟದ ದೃಷ್ಟಿ ತೀಕ್ಷ್ಣತೆಯನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದವರು ಚಿಂತೆ ಮಾಡಬೇಡಿ, ನಿಮಗಾಗಿ ಇಲ್ಲಿದೆ ಉತ್ತರ. ಚಿತ್ರದಲ್ಲಿ ಅಡಗಿರುವ ಪ್ರಾಣಿ “ಆನೆ”

ಈ ಆಪ್ಟಿಕಲ್‌ ಚಿತ್ರದಲ್ಲಿ ಅಡಗಿರುವ ನಿಜವಾದ ಪ್ರಾಣಿ ಯಾವುದೆಂದು ಗೊತ್ತಾಗಬೇಕಾದರೆ ನೀವು ಶೇಕಡಾ 80 ರಷ್ಟು ಕಣ್ಣನ್ನು ಮುಚ್ಚಿ, ಏಕಾಗ್ರತೆಯಿಂದ ಈ ಚಿತ್ರವನ್ನು ನೋಡಿ, ಆಗ ನಿಮಗೆ ಚಿತ್ರದಲ್ಲಿರುವ ಆನೆ ಕಾಣಿಸುತ್ತದೆ. ಇಂತಹ ಒಗಟಿನ ಆಟಗಳನ್ನು ಆಡುವ ಮೂಲಕ ನಿಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು