ಆಪ್ಟಿಕಲ್ ಐಕ್ಯೂ
ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಕೂಡ ಅವರವರ ವ್ಯಕ್ತಿತ್ವ (personality) ತಿಳಿದುಕೊಳ್ಳಬೇಕೆಂದು ಇರುತ್ತದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಣ್ಣು, ಕಿವಿ, ಮೂಗು, ಕೂದಲು, ತುಟಿ ಇವುಗಳ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಹಾಗೆಯೇ ಒಂದು ಚಿತ್ರ (photo) ದಲ್ಲಿ ಮೊದಲು ಏನು ಕಾಣಿಸಿತು ಎನ್ನುವುದು ಕೂಡ ನಿಗೂಢ ವ್ಯಕ್ತಿತ್ವ ಬಹಿರಂಗಪಡಿಸುತ್ತದೆ. ಆದರೆ ಕೆಲವು ಸೆಕೆಂಡುಗಳ ಕಾಲ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಈ ಚಿತ್ರದಲ್ಲಿ ಮಹಿಳೆಯ ಮುಖ (women face) ಹಾಗೂ ಸೇಬು (apple) ಎತ್ತಕೊಳ್ಳುವ ಮಹಿಳೆಯನ್ನು ನೋಡಬಹುದು. ಆದರೆ ಈ ಚಿತ್ರ ಒಂದು ಕ್ಷಣ ಭ್ರಮೆಯನ್ನು ಉಂಟು ಮಾಡಿದರೂ ನೀವು ಮೊದಲು ಏನನ್ನೂ ಗುರುತಿಸುತ್ತೀರಿ ಎನ್ನುವುದೇ ವ್ಯಕ್ತಿತ್ವ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
- ಮೊದಲು ಮಹಿಳೆ ಮುಖ ಗುರುತಿಸಿದರೆ ಈ ಜನರು ಶ್ರಮಜೀವಿಗಳಾಗಿದ್ದು, ಕೆಲಸ ಕಾರ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಸಂದರ್ಭ ಸನ್ನಿವೇಶಗಳು ಹೇಗೆ ಇದ್ದರೂ ಸಾಧಿಸಬೇಕೆನ್ನುವ ಛಲ ಇವರಲ್ಲಿ ಹೆಚ್ಚಿರುತ್ತದೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾಗುವ ವ್ಯಕ್ತಿತ್ವ ಇವರದ್ದು. ದೃಢ ನಿಶ್ಚಯ ಹೊಂದಿದ್ದು, ಗುರಿ ಸಾಧಿಸಲು ಕಷ್ಟ ಪಡುತ್ತಾರೆ. ಅದಲ್ಲದೆ, ತನ್ನ ಸುತ್ತಮುತ್ತಲು ಸದಾ ಪ್ರೋತ್ಸಾಹದಾಯಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಇಷ್ಟ ಪಡುತ್ತಾರೆ.
- ಕೈಯಲ್ಲಿ ಬುಟ್ಟಿ ಹಿಡಿದು ಸೇಬುಗಳನ್ನು ಆರಿಸಿಕೊಳ್ಳುವ ಮಹಿಳೆಯನ್ನು ಮೊದಲು ಗುರುತಿಸಿದರೆ ಈ ವ್ಯಕ್ತಿಗಳು ಮೃದು ಸ್ವಭಾವವನ್ನು ಹೊಂದಿದ್ದು, ಎಲ್ಲರ ಮಾತಿಗೆ ಬೇಗನೇ ಕರಗುತ್ತಾರೆ. ತಮಗೆ ಏನು ಅನಿಸುತ್ತದೆಯೊ ಅದನ್ನು ಮೊದಲು ಮಾಡಿ ಮುಗಿಸುತ್ತಾರೆ. ವಿಶ್ವಾಸರ್ಹ ವ್ಯಕ್ತಿಯಾಗಿದ್ದು ಕಷ್ಟ ಎನ್ನುವವರಿಗೆ ಬೇಗನೇ ಸಹಾಯ ಮಾಡುತ್ತಾರೆ. ತಾವು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಾರೆ. ಈ ಗುಣದಿಂದಲೇ ಅತೀ ಹೆಚ್ಚು ಸ್ನೇಹಿತರನ್ನು ಸಂಪಾದಿಸುತ್ತಾರೆ. ಈ ಜನರು ಬುದ್ಧಿವಂತರಾಗಿದ್ದು, ತನ್ನ ಸುತ್ತಮುತ್ತಲಿನವರಿಗೆ ಸಲಹೆ ನೀಡುವ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಹೆಚ್ಚಿನವರು ಸಲಹೆ ಸೂಚನೆಗಳಿಗಾಗಿ ಈ ವ್ಯಕ್ತಿಗಳನ್ನೆ ಅವಲಂಬಿಸಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ