Kannada News Lifestyle Parenting Tips : Is your child getting angry? Follow these tips to manage anger Kannada News
Parenting Tips : ಇದೊಂದು ಟಿಪ್ಸ್ ಗೊತ್ತಿದ್ರೆ, ಮಕ್ಕಳ ಕೋಪವನ್ನು ನಿಭಾಯಿಸುವುದು ಸುಲಭ
ಕೆಲವು ಮಕ್ಕಳು ಹಠಮಾರಿಗಳಷ್ಟೇ ಅಲ್ಲ, ಸಣ್ಣ ಪುಟ್ಟ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಸಿಟ್ಟಿನಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯುವುದು ಇದೆ. ಈ ವೇಳೆಯಲ್ಲಿ ಪೋಷಕರ ತಾಳ್ಮೆಗೆಟ್ಟು ವರ್ತಿಸುತ್ತಾರೆ. ಮಗುವಿಗೆ ಹೊಡೆಯುವುದು ಇಲ್ಲವಾದರೆ ತಮ್ಮ ಕೋಪವನ್ನು ಹೊರಹಾಕುತ್ತಾರೆ. ಮಕ್ಕಳ ಅತಿಯಾದ ಕೋಪವನ್ನು ನಿಭಾಯಿಸುವುದು ಹೇಗೆ ಎನ್ನುವುದು ಪೋಷಕರು ಅರಿತಿರುವುದು ಬಹಳ ಮುಖ್ಯ. ಹಾಗಾದ್ರೆ ಮಕ್ಕಳ ಕೋಪವನ್ನು ನಿಭಾಯಿಸುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಕೋಪ ಯಾರಿಗೆ ಬರಲ್ಲ ಹೇಳಿ, ತಮಗೆ ಇಷ್ಟವಾಗದ ಕೆಲಸವನ್ನು ಆತ್ಮೀಯರು ಮಾಡಿದರೆ ಸಹಜವಾಗಿ ಸಿಟ್ಟಾಗುತ್ತೇವೆ. ಆದರೆ ಮಕ್ಕಳು ಆಗಲ್ಲ, ತನಗೆ ಇಷ್ಟವಾಗಿರುವ ವಸ್ತುವನ್ನು ತೆಗೆದುಕೊಡದೇ ಇದ್ದಾಗ, ಇಷ್ಟವಾಗುವ ಕೆಲಸವನ್ನು ಮಾಡದೇ ಬಿಡದಿದ್ದಾಗ ಸಹಜವಾಗಿ ಸಿಟ್ಟನ್ನು ತೋರ್ಪಡಿಸುತ್ತಾರೆ. ಈ ವೇಳೆಯಲ್ಲಿ ಹೆತ್ತವರು ಕೂಡ ಹೊಡೆಯುವ ಮೂಲಕ ತಮ್ಮ ಕೋಪವನ್ನು ಹೊರಹಾಕುವುದೇ ಹೆಚ್ಚು. ಆದರೆ ಈ ತಪ್ಪನ್ನು ಹೆತ್ತವರು ಮಾತ್ರ ಮಾಡಲೇಬಾರದು. ಇಂತಹ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿಗೆ ಬಹಳ ತಾಳ್ಮೆ ಬೇಕು. ಹೀಗಾಗಿ ನೀವು ನಿಮ್ಮ ಸಿಟ್ಟಿನ ಭಾವನೆಯನ್ನು ಹೊರಹಾಕದೇ ಮಕ್ಕಳ ಕೋಪವನ್ನು ನಿಭಾಯಿಸಲು ಹೀಗೆ ಮಾಡಿ.
ಮಕ್ಕಳ ಕೋಪವನ್ನು ನಿಭಾಯಿಸಲು ಇಲ್ಲಿದೆ ಸಲಹೆಗಳು
ಶಾಂತವಾಗಿ ಸನ್ನಿವೇಶವನ್ನು ನಿಭಾಯಿಸಿ : ಮಕ್ಕಳು ಕೋಪಗೊಂಡ ಸಂದರ್ಭದಲ್ಲಿ ಪೋಷಕರು ಮಾಡಬೇಕಾದ ಕೆಲಸವೇ ಶಾಂತವಾಗಿರಿಸಿಕೊಳ್ಳುವುದು. ಮಗು ಕೋಪ ಮಾಡಿಕೊಳ್ಳುತ್ತದೆ ಎಂದಾದರೆ ನೀವು ಕೂಡ ಕೋಪದಿಂದ ಪ್ರತಿಕ್ರಿಯಿಸುವುದು ಆ ಸನ್ನಿವೇಶವನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಶಾಂತವಾಗಿರುವುದನ್ನು ಕಲಿಯಬೇಕು.
ಮಕ್ಕಳ ಮಾತನ್ನು ಆಲಿಸಲು ಪ್ರಯತ್ನಿಸಿ: ಮಕ್ಕಳು ಕೋಪಗೊಳ್ಳಲು ಕಾರಣಗಳು ಹಲವು ಇರಬಹುದು. ಹೀಗಾಗಿ ನಿಮ್ಮ ಮಗುವಿನ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಬಹಳ ಮುಖ್ಯ.
ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಳ್ಳಿ : ಮಕ್ಕಳ ಕೋಪಿಸಿಕೊಂಡಾಗ ಹೆಚ್ಚಿನ ಪೋಷಕರು ಮಕ್ಕಳ ಜೊತೆಗೆ ವಾದ ಮಾಡುತ್ತಾರೆ. ಆದರೆ ಮಕ್ಕಳ ಕೋಪ ಮಾಡಿಕೊಳ್ಳುವುದರ ಹಿಂದಿನ ಕಾರಣವೇನು ಎನ್ನುವುದು ಅರ್ಥೈಸಿಕೊಳ್ಳುವುದು ಮುಖ್ಯ. ಹೀಗಾದಾಗ ಅವರು ಯಾವ ಕಾರಣಕ್ಕಾಗಿ ಸಿಟ್ಟಾಗಿದ್ದಾರೆ ಎನ್ನುವುದರ ಖಚಿತತೆ ನಿಮಗೆ ಸಿಗುತ್ತದೆ. ಇಲ್ಲದಿದ್ದರೆ ಅವರ ಬಳಿ ಪ್ರಶ್ನೆಗಳನ್ನು ಕೇಳಿ ಅವರ ಸಮಸ್ಯೆಯನ್ನು ಅರಿತುಕೊಳ್ಳಿ.
ಮಕ್ಕಳಿಗೂ ಸ್ಪೇಸ್ ನೀಡಿ : ಮಕ್ಕಳು ಸಿಟ್ಟು ಮಾಡಿಕೊಳ್ಳಬಾರದು ಎಂದು ಎಷ್ಟೋ ಪೋಷಕರು ಹೇಳುತ್ತಾರೆ. ಸಿಟ್ಟು ಕೂಡ ಒಂದು ಭಾವನೆಯಾಗಿದ್ದು, ಮಕ್ಕಳಿಗೂ ಅದನ್ನು ಹೊರಹಾಕುವ ಸ್ವಾತಂತ್ರ್ಯವಿದೆ. ಮಗುವಿಗೆ ಸಿಟ್ಟು ಮಾಡಿಕೊಂಡಾಗ ಹೊಡೆಯುವುದು ಹಾಗೂ ದೈಹಿಕವಾಗಿ ನೋವು ಮಾಡುವುದು ಸರಿಯಲ್ಲ. ಮಗುವಿಗೆ ತನ್ನ ಕೋಪ ಹೊರಹಾಕಲು ಅವಕಾಶ ಮಾಡಿಕೊಡಬೇಕು.
ಮಕ್ಕಳಿಗೆ ಆಜ್ಞೆ ಮಾಡಲೇ ಬೇಡಿ : ಹೆಚ್ಚಿನ ಪೋಷಕರು ಮಕ್ಕಳಿಗೆ ಕೋಪ ಮಾಡಿಕೊಳ್ಳಬಾರದು ಎಂದು ಆಜ್ಞೆ ಮಾಡುತ್ತಾರೆ. ಸಿಟ್ಟು ಹಾಗೂ ಹಠಮಾಡಿದರೆ ಸರಿಯಿರಲ್ಲ ಎಂದು ಭಯ ಪಡಿಸುತ್ತಾರೆ. ಆದರೆ ಫೋಷಕರು ಯಾವತ್ತಿಗೂ ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಲು ಪ್ರಯತ್ನಿಸಬಾರದು. ಇಂತಹ ಸನ್ನಿವೇಶಗಳಲ್ಲಿ ಮಕ್ಕಳೊಂದಿಗೆ ಕುಳಿತು ಪರಿಹಾರಗಳನ್ನು ಕಂಡುಕೊಳ್ಳುವುದು ಹಾಗೂ ಸನ್ನಿವೇಶವನ್ನು ವಿವರಿಸಿ.