ಪಾರ್ಲೆ-ಜಿ ಬಿಸ್ಕತ್ತು(Parle-G biscuits) ಎಂದರೆ ಬಾಲ್ಯದ ಅದೆಷ್ಟೋ ನೆನಪುಗಳು ಮತ್ತೆ ಮರುಕಳಿಸುತ್ತದೆ. ಒಂದು ಕಪ್ ಟೀ ಜೊತೆಗೆ ಪಾರ್ಲೆ-ಜಿ ಬಿಸ್ಕತ್ತು ಇದ್ದರಂತೂ ಸಾಕು. ಪಾರ್ಲೆ-ಜಿ ಬಿಸ್ಕತ್ತು ಅಂದ ಕೂಡಲೇ ಹಳದಿ ಬಣ್ಣದ ಪ್ಯಾಕೆಟ್ ಮತ್ತು ಪುಟ್ಟ ಹುಡುಗಿಯ ಪೋಟೋ ನೆನಪಾಗುವುದಂತೂ ಸಾಮಾನ್ಯ. ಆದರೆ ಇದೀಗಾ ವಿಭಿನ್ನ ರುಚಿಗಳಲ್ಲಿ ಲಭ್ಯವಿರುವ ಬಿಸ್ಕತ್ನ ಪ್ಯಾಕೆಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟಿಗೆ ವೈರಲ್ ಆಗ್ತಾ ಇದೆ. ಇದೀಗಾ ಪಾರ್ಲೆ-ಜಿ ಹೊಸ ರುಚಿಯೊಂದಿಗೆ ಹಣ್ಣು ಮತ್ತು ಓಟ್ಸ್ಗಳೊಂದಿಗೆ ತುಂಬಿಕೊಂಡಿದೆ ಎಂದು ಟ್ವಿಟರ್ ಬಳಕೆದಾರರಾದ @hojevlo ಪಾರ್ಲೆ-ಜಿ ಪ್ಯಾಕೆಟ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಇದು ನೀವು ಸಾಮಾನ್ಯವಾಗಿ ತಿನ್ನುತ್ತಿದ್ದ ಪಾರ್ಲೆ-ಜಿ ಅಲ್ಲ. ಬದಲಾಗಿ ಹಣ್ಣುಗಳು ಮತ್ತು ಓಟ್ಸ್ ನಿಂದ ತುಂಬಿದೆ ಎಂದು ಪ್ಯಾಕೆಟ್ನಲ್ಲಿ ಬರೆಯಲಾಗಿದೆ. ಇದು ಈಗಾಗಲೇ ದೇಶಾದ್ಯಂತ ಮಾರುಕಟ್ಟೆಗೆ ತರಲಾಗಿದೆ. ಅವರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.
guys new Parle G just dropped pic.twitter.com/iLaQhI3Blp
— jevliska (@hojevlo) January 2, 2023
ಇದನ್ನೂ ಓದಿ: Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?
ಈ ಪೋಸ್ಟ್ 18.7 ಸಾವಿರ ಜನರು ವೀಕ್ಷಿಸಿದ್ದಾರೆ. ಜೊತೆಗೆ ಅನೇಕರು ತಮ್ಮ ಬಾಲ್ಯದ ನೆನಪುಗಳ ಬಗ್ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಸಾಕಷ್ಟು ಶೇರ್ ಕೂಡ ಆಗಿದೆ. ಪೋಸ್ಟ್ಗೆ ಸಂಬಂಧಿಸಿದ ಕಾಮೆಂಟ್ಗಳು ಭಾರಿ ವೈವಿಧ್ಯಮಯವಾಗಿವೆ. ಕೆಲವರು ಪಾರ್ಲೆ-ಜಿಯ ಮೂಲ ರುಚಿಯನ್ನು ಹೇಗೆ ಆದ್ಯತೆ ನೀಡಿದರು ಎಂಬುದರ ಕುರಿತು ಬರೆದರೆ, ಕೆಲವರು ಹೊಸ ಪರಿಮಳ ಹಾಗೂ ರುಚಿಯನ್ನು ಪ್ರಯತ್ನಿಸಲು ಉತ್ಸುಕರಾಗಿದ್ದಾರೆ. ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪಾರ್ಲೆ-ಜಿ ಬಿಸ್ಕತ್ತುಗಳ ರುಚಿ ಮತ್ತು ಪ್ಯಾಕೇಜಿಂಗ್ ಅವರ ಬಾಲ್ಯದ ಸಂಕೇತವಾಗಿದೆ. ಯಾಕೆಂದರೆ ಪುಟ್ಟ ಹುಡುಗಿಯ ಭಾವ ಚಿತ್ರವಿರುವ ಪ್ಯಾಕೇಟ್ ಸಾಕಷ್ಟು ವರ್ಷಗಳಿಂದ ಬರುತ್ತಿದ್ದು, ಆ ಪ್ಯಾಕೇಟ್ ನೋಡುತ್ತಿದ್ದಂತೆ ಬಾಲ್ಯದ ನೆನಪು ಮರುಕಳಿಸುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಈಗ ಹೊಸ ವಿನ್ಯಾಸ ಹಾಗೂ ರುಚಿಯೊಂದಿಗೆ ಜನರನ್ನು ತಲುಪುತ್ತಿರುವುದು ಖುಷಿಯ ವಿಚಾರ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:50 am, Wed, 4 January 23