Fact Check ಹಿಮಾಚಲ ಪ್ರದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ ₹1000 ನೀಡುತ್ತೇವೆ ಎಂಬ ಬ್ಯಾನರ್ ಎಎಪಿ ಹಾಕಿಲ್ಲ; ವೈರಲ್ ಆಗಿದ್ದು ತಿರುಚಿದ ಫೋಟೊ

"ಕೇಂದ್ರ ಸರ್ಕಾರ ನಮಗೆ ಹಣ ನೀಡಿದರೆ" ಎಂಬ ವಾಕ್ಯವನ್ನು ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿದೆ ಮತ್ತು ಉಳಿದ ವಾಕ್ಯವನ್ನು ದಪ್ಪದಲ್ಲಿ ಬರೆಯಲಾಗಿದೆ. ಏಪ್ರಿಲ್ 8, 2022 ರಂದು ದೆಹಲಿ ಬಿಜೆಪಿ ವಕ್ತಾರ ನಿಘತ್ ಅಬ್ಬಾಸ್...

Fact Check ಹಿಮಾಚಲ ಪ್ರದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ ₹1000 ನೀಡುತ್ತೇವೆ ಎಂಬ ಬ್ಯಾನರ್ ಎಎಪಿ ಹಾಕಿಲ್ಲ; ವೈರಲ್ ಆಗಿದ್ದು ತಿರುಚಿದ ಫೋಟೊ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬ್ಯಾನರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 13, 2022 | 6:53 PM

ಕೇಂದ್ರ ಸರ್ಕಾರ ನಮಗೆ ಹಣ ನೀಡಿದರೆ ಹಿಮಾಚಲ ಪ್ರದೇಶದ (Himachal Pradesh) ತಾಯಂದಿರು-ಸಹೋದರಿಯರು ತಿಂಗಳಿಗೆ 1000 ರೂ.ಪಡೆಯುತ್ತಾರೆ ಎಂಬ ಬರಹ, ಪಕ್ಕದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಫೋಟೊ ಇರುವ ಬ್ಯಾನರ್​​ನ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇದರಲ್ಲಿ “ಕೇಂದ್ರ ಸರ್ಕಾರ ನಮಗೆ ಹಣ ನೀಡಿದರೆ” ಎಂಬ ವಾಕ್ಯವನ್ನು ಚಿಕ್ಕ ಅಕ್ಷರಗಳಲ್ಲಿ ಬರೆಯಲಾಗಿದೆ ಮತ್ತು ಉಳಿದ ವಾಕ್ಯವನ್ನು ದಪ್ಪ ಅಕ್ಷರಗಳಲ್ಲಿ  ಬರೆಯಲಾಗಿದೆ. ಏಪ್ರಿಲ್ 8, 2022 ರಂದು ದೆಹಲಿ ಬಿಜೆಪಿ ವಕ್ತಾರ ನಿಘತ್ ಅಬ್ಬಾಸ್ ಅವರು ಎಎಪಿಯನ್ನು (AAP) ಲೇವಡಿ ಮಾಡಿ ಈ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ಟ್ವೀಟ್‌ಗೆ 2,000 ಕ್ಕೂ ಹೆಚ್ಚು ರೀಟ್ವೀಟ್‌ಗಳು ಬಂದಿವೆ. ಬಲಪಂಥೀಯ ಹ್ಯಾಂಡಲ್ @spoof_Junkey ಹಿಮಾಚಲ ಪ್ರದೇಶಕ್ಕಾಗಿ ಕೇಜ್ರಿವಾಲ್ ಅವರ “ಪ್ರಣಾಳಿಕೆ” ಎಂಬ ಶೀರ್ಷಿಕೆಯೊಂದಿಗೆ ಅದೇ ಚಿತ್ರವನ್ನು ಪೋಸ್ಟ್ ಮಾಡಿದೆ. ಅದೇ ರೀತಿ @doctorrichabjp ಎಂಬ ಬಳಕೆದಾರರು ದೆಹಲಿ ಮತ್ತು ಪಂಜಾಬ್‌ನಲ್ಲಿರುವ ಜನರಿಗೆ ಹಣ ಸಿಕ್ಕಿದೆಯೇ ಎಂಬ ಪ್ರಶ್ನೆಯೊಂದಿಗೆ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಹಲವಾರು ಫೇಸ್‌ಬುಕ್ ಬಳಕೆದಾರರು ಕೂಡ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯಭರಿತ ಟೀಕೆಗಳೊಂದಿಗೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕೇಜ್ರಿವಾಲ್ ಅವರು ಹಿಮಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಅಲ್ಲಿ ಅವರು ಆಮ್ ಆದ್ಮಿ ಪಕ್ಷವು ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸೂಚಿಸಿದ್ದಾರೆ.

ಫ್ಯಾಕ್ಟ್ ಚೆಕ್ ಈ ವೈರಲ್ ಬ್ಯಾನರ್ ಚಿತ್ರದ ಬಗ್ಗೆ ಆಲ್ಟ್ ನ್ಯೂಸ್, ಗೂಗಲ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಫೋಟೊದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದು ಇದು2014 ರ ಹಿಂದಿನದು ಎಂದು ಕಂಡುಹಿಡಿದಿದೆ. ಆದಾಗ್ಯೂ, ಬ್ಯಾನರ್‌ನಲ್ಲಿನ ಹೇಳಿಕೆಯು ಸಂಪೂರ್ಣವಾಗಿ ವಿಭಿನ್ನವಾಗಿದೆ. ಮೂಲ ಬ್ಯಾನರ್‌ನಲ್ಲಿ “ಧನ್ಯವಾದಗಳು, ದೆಹಲಿ” ಎಂದು ಬರೆಯಲಾಗಿದೆ. 2014 ರಲ್ಲಿ ಎಎಪಿ ಸರ್ಕಾರ ರಚನೆ ನಂತರ ಇದನ್ನು ದೆಹಲಿಯಾದ್ಯಂತ ಸ್ಥಾಪಿಸಲಾಯಿತು.  2014 ರಿಂದ ಪೋಸ್ಟರ್‌ನ ಚಿತ್ರವನ್ನು ಹೊಂದಿರುವ ಹಲವು ಸುದ್ದಿಗಳು ಪ್ರಕಟವಾಗಿದೆ.

thank you delhi

ದೆಹಲಿಗೆ ಧನ್ಯವಾದಗಳು

ಹಿಮಾಚಲ ಪ್ರದೇಶದಲ್ಲಿ ಪಕ್ಷವು ಮತದಾರರಿಗೆ ದಾರಿತಪ್ಪಿಸುವ ಭರವಸೆಗಳನ್ನು ನೀಡುತ್ತಿದೆ ಎಂದು ತಪ್ಪಾಗಿ ಬಿಂಬಿಸಲು ಎಎಪಿ ಪೋಸ್ಟರ್‌ನ ಮಾರ್ಫ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಹಣ ನೀಡುವುದಾಗಿ ದೆಹಲಿ ಸಿಎಂ ಕೇಜ್ರಿವಾಲ್ ಭರವಸೆ ನೀಡುತ್ತಿದ್ದಾರೆ ಎಂದು ಮಾರ್ಫ್ ಮಾಡಿದ ಪೋಸ್ಟರ್‌ನಲ್ಲಿ ಚಿತ್ರಿಸಿದ್ದರೆ, “ಕೇಂದ್ರ ಸರ್ಕಾರ ನಮಗೆ ಹಣ ನೀಡಿದರೆ” ಎಂಬ ವಾಕ್ಯವನ್ನು ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿದೆ. ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಕೇಜ್ರಿವಾಲ್ ಅವರನ್ನು ಲೇವಡಿ ಮಾಡಲು ಇದನ್ನು ಬಳಸಿಕೊಂಡರು.

ಇದನ್ನೂ ಓದಿ: Fact Check ಬೈಕ್ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕ ಭಗವಂತ್ ಮಾನ್​​ನ ಹಳೇ ಚಿತ್ರ ಎಂದು ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ಏನು?

Published On - 3:41 pm, Wed, 13 April 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್