AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಬೈಕ್ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕ ಭಗವಂತ್ ಮಾನ್​​ನ ಹಳೇ ಚಿತ್ರ ಎಂದು ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ಏನು?

ಪಂಜಾಬ್ ಪೊಲೀಸರು ಬೈಕ್ ಕಳ್ಳತನಕ್ಕಾಗಿ ಮಾನ್ ಮತ್ತು ಇತರ ಮೂವರನ್ನು ಬಂಧಿಸಿದಾಗ ಕ್ಲಿಕಿಸಿದ ಚಿತ್ರವಾಗಿದೆ ಎಂಬ ತಪ್ಪಾದ ಹೇಳಿಕೆ ಈ ಫೋಟೊದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ ಹೋಳಿ ಹಬ್ಬದ್ದು...

Fact Check ಬೈಕ್ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕ ಭಗವಂತ್ ಮಾನ್​​ನ ಹಳೇ ಚಿತ್ರ ಎಂದು ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ಏನು?
ವೈರಲ್ ಆಗಿರುವ ಫೋಟೊ - ಭಗವಂತ್ ಮಾನ್
TV9 Web
| Edited By: |

Updated on: Apr 01, 2022 | 9:32 PM

Share

ಹೊಸದಾಗಿ ಚುನಾಯಿತ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  (Bhagwant Mann) ಅವರ ಹಳೆಯ ಫೋಟೊ ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಇದು ಪಂಜಾಬ್(Punjab) ಪೊಲೀಸರು ಬೈಕ್ ಕಳ್ಳತನಕ್ಕಾಗಿ ಮಾನ್ ಮತ್ತು ಇತರ ಮೂವರನ್ನು ಬಂಧಿಸಿದಾಗ ಕ್ಲಿಕಿಸಿದ ಚಿತ್ರವಾಗಿದೆ ಎಂಬ ತಪ್ಪಾದ ಹೇಳಿಕೆ ಈ ಫೋಟೊದೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಒಬ್ಬ ಯುವಕ ಇತರ ಮೂವರು ಯುವಕರೊಂದಿಗೆ ನೆಲದ ಮೇಲೆ ಕುಳಿತುಕೊಂಡಿದ್ದು ಗಂಭೀರ ಮುಖದೊಂದಿಗೆ ಕ್ಯಾಮೆರಾವನ್ನು ನೋಡುತ್ತಿರುವುದು ಈ ಫೋಟೊದಲ್ಲಿದೆ, ಅವರ ಬಟ್ಟೆಗಳು ಹೋಳಿ ಬಣ್ಣಗಳಲ್ಲಿ ತೇವಗೊಂಡಂತೆ ಕಾಣುತ್ತವೆ. ಈ ಚಿತ್ರದೊಂದಿಗೆ ಹಿಂದಿಯಲ್ಲಿ ಬರೆಯಲಾದ ಶೀರ್ಷಿಕೆಯ ಅನುವಾದ ಹೀಗಿದೆ. ಇದು ಯಾರು ಅಂತ ಊಹಿಸಬಲ್ಲಿರಾ? ಬೈಕ್ ಕಳ್ಳತನ ಮಾಡಿದ್ದಕ್ಕಾಗಿ ಪಂಜಾಬ್ ಪೊಲೀಸರು ಸೆರೆಹಿಡಿದಿರುವ ನಾಲ್ವರು ವ್ಯಕ್ತಿಗಳ ಫೋಟೊ ಇದು ಎಂದು ಬರೆಯಲಾಗಿದೆ. ಫ್ಯಾಕ್ಟ್ ಚೆಕ್ ವೈರಲ್ ಚಿತ್ರದ ಸತ್ಯಾಸತ್ಯತೆ  ಅರಿಯಲು  ಬೂಮ್ ಲೈವ್ ಈ ವೈರಲ್ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಹೀಗೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಾರ್ಚ್ 18, 2022 ರಂದು ಅಪ್‌ಲೋಡ್ ಮಾಡಲಾದ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಈ ಚಿತ್ರ ಸಿಕ್ಕಿದೆ ಈ ಫೋಟೊದೊಂದಿಗೆ “ಭಗವಂತ್ ಮಾನ್ ಮತ್ತು @manjitsidhu ಅವರೊಂದಿಗೆ ಹೋಳಿ ನೆನಪುಗಳು ಎಂಬ ಶೀರ್ಷಿಕೆ ಇದೆ.

ನಟ ಕರಮ್‌ಜಿತ್ ಅನ್ಮೋಲ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿರುವ ಚಿತ್ರ

ಮಾರ್ಚ್ 13, 2022 ರಂದು ಪ್ರಕಟವಾದ ದಿ ವೈರ್ ವರದಿಯ ಪ್ರಕಾರ, ಕರಮ್‌ಜಿತ್ ಸಿಂಗ್ ಅನ್ಮೋಲ್ ಮಾನ್ ಅವರ ಹಳೆಯ ಸ್ನೇಹಿತ. ಅವರು ಧುರಿ ಕ್ಷೇತ್ರದಲ್ಲಿ ಮಾನ್ ಪರವಾಗಿ ಪ್ರಚಾರ ಮಾಡಿದರು. ಇವರಿಬ್ಬರೂ ತಮ್ಮ ಶಾಲಾ ದಿನಗಳಿಂದಲೂ ಅಂದರೆ 1990 ರಿಂದ ಒಟ್ಟಿಗೆ ಇದ್ದಾರೆ . ಕರಮ್‌ಜಿತ್ ಅವರ ಸಂದರ್ಶನವೊಂದರಲ್ಲಿ  ಆಮ್ ಆದ್ಮಿ ಪಕ್ಷದ ನಾಯಕನ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೊದಲ್ಲಿ ಹೇಳುವಂತೆ ಏನಾದರೂ ಇದೆಯೇ ಎಂದು ಪರಿಶೀಲಿಸಲು ಬೂಮ್ ತಂಡಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಯನ್ನು ಸಂಪರ್ಕಿಸಿದೆ. ಭಗವಂತ್ ಮಾನ್ ಅವರು ಯುವಕರಾಗಿದ್ದಾಗ ಬೈಕ್ ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಬೂಮ್‌ನೊಂದಿಗೆ ಮಾತನಾಡಿದ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಗುರುಪ್ರೀತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಚಂಡೀಗಢವನ್ನು ಕೂಡಲೇ ಪಂಜಾಬ್​ಗೆ ವರ್ಗಾಯಿಸಬೇಕು; ಸದನದಲ್ಲಿ ಸಿಎಂ ಭಗವಂತ್ ಮಾನ್ ನಿರ್ಣಯ ಮಂಡನೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ