
ಪತಂಜಲಿ ವೆಲ್ನೆಸ್ ಕೇಂದ್ರ (Patanjali Wellness) ಜನರಿಗೆ ಹೊಸ ಜೀವನವನ್ನು ನೀಡುತ್ತಿದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹೆಚ್ಚಿನ ಸಂಖ್ಯೆಯ ರೋಗಿಗಳು ಹೊಸ ಜೀವನ ಕಂಡುಕೊಂಡಿದ್ದಾರೆ. ಬಹಳ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪತಂಜಲಿ ವೆಲ್ನೆಸ್‌ನಲ್ಲಿ ನೀಡಲಾಗುವ ಚಿಕಿತ್ಸೆಗಳು ಮತ್ತು ಔಷಧಿಗಳು ಪರಿಹಾರವನ್ನು ತಂದಿವೆ ಎಂದು ಇವರು ಹೇಳುತ್ತಾರೆ. ಪತಂಜಲಿ ವೆಲ್ನೆಸ್‌ನಲ್ಲಿ ಚೇತರಿಸಿಕೊಂಡ ಜನರು ತಮ್ಮ ಕೃತಜ್ಞತೆಗಳನ್ನು ತೋರ್ಪಡಿಸಿಕೊಂಡಿದ್ದಾರೆ. ವೆಲ್ನೆಸ್ ಸೆಂಟರ್ನಲ್ಲಿ ಇರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅವರು ಪ್ರವೇಶ ಮಾಡಿದ ಮತ್ತು ಡಿಸ್ಚಾರ್ಜ್ ಆದ ದಿನಾಂಕಗಳನ್ನು ಮಾತ್ರವಲ್ಲದೆ, ವಿಡಿಯೋ ಫೀಡ್ಬ್ಯಾಕ್ ಕೂಡ ನೋಡಬಹುದು. ಪತಂಜಲಿ ವೆಲ್ನೆಸ್‌ನಿಂದ ಜೀವನದಲ್ಲಿ ಹೊಸ ಆರಂಭಗೊಂಡ ಕೆಲವರ ಕಥೆಗಳು ಉಲ್ಲೇಖಾರ್ಹ ಎನಿಸಿವೆ. ಅಂಥ ಕೆಲವು ಇಲ್ಲಿವೆ:
ಉತ್ತರ ಪ್ರದೇಶದ ದೇವರಿಯಾ ಪಟ್ಟಣದ ನಿವಾಸಿ ಸುರೇಶ್ವರ್ ಮಿಶ್ರಾ ಹೀಗೆ ಹೇಳಿದ್ದಾರೆ: “ಕಳೆದ 15 ವರ್ಷಗಳಿಂದ ನನಗೆ ಬೆನ್ನು ನೋವು ಇದೆ. ಕಳೆದ ಆರು ತಿಂಗಳಿನಿಂದ ನನ್ನ ಎಡಗಾಲಿನಲ್ಲಿಯೂ ನೋವು ಕಾಣಿಸಿದೆ. ನಾನು ಹಲವಾರು ಚಿಕಿತ್ಸೆಗಳನ್ನು ಪ್ರಯತ್ನಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಪರಿಚಯಸ್ಥರಿಂದ ಪತಂಜಲಿ ವೆಲ್ನೆಸ್ ಬಗ್ಗೆ ಕೇಳಲ್ಪಟ್ಟೆ. ಅದಾದ ಬಳಿಕ ಚಿಕಿತ್ಸೆಗಾಗಿ ಹರಿದ್ವಾರಕ್ಕೆ ಬಂದೆ. ಒಂದು ವಾರದೊಳಗೆ, ನನಗೆ ಶೇಕಡಾ 70 ರಿಂದ 80 ರಷ್ಟು ಪರಿಹಾರ ಸಿಕ್ಕಿತು.”
ಇದನ್ನೂ ಓದಿ: ಬೆನ್ನು ನೋವು ಶಮನಕ್ಕೆ ಪರಿಣಾಮಕಾರಿ ಈ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ
ಮಹಾರಾಷ್ಟ್ರದ ಅಹ್ಮದ್‌ನಗರದ ನಿವಾಸಿ ಸುನಿಲ್ ಶಿವಾಜಿರಾವ್ ಪಾಟೀಲ್ ಕೂಡ ಇದೇ ರೀತಿಯ ಕಥೆಯನ್ನು ಹೊಂದಿದ್ದಾರೆ. “ಒಂದು ವರ್ಷದ ಹಿಂದೆ, ನನ್ನ ಥೈರಾಯ್ಡ್ 64 ಆಗಿತ್ತು, ನನ್ನ ರಕ್ತದೊತ್ತಡ 200 ಆಗಿತ್ತು, ಮತ್ತು ನನ್ನ ತೂಕ 98 ಕಿಲೋಗಳಷ್ಟಿತ್ತು. ನಾನು ವಿವಿಧೆಡೆ ಚಿಕಿತ್ಸೆ ಪಡೆದರೂ ಸಮಸ್ಯೆ ಬಗೆಹರಿಯಲಿಲ್ಲ. ನಂತರ ನಾನು ಪತಂಜಲಿ ವೆಲ್ನೆಸ್ ಮತ್ತು ಮಹಾರಾಜ್ ಜಿ (ಬಾಬಾ ರಾಮದೇವ್) ಬಗ್ಗೆ ತಿಳಿದುಕೊಂಡೆ. ನಾನು ಪ್ರತಿದಿನ ಅವರ ಕಾರ್ಯಕ್ರಮ ವೀಕ್ಷಿಸಲು ಪ್ರಾರಂಭಿಸಿದೆ.”
“ನಾನು ಬೆಳಿಗ್ಗೆ 4 ಗಂಟೆಗೆ ಯೋಗ ಮಾಡಲು ಪ್ರಾರಂಭಿಸಿದೆ. ಇದರಿಂದ ರಿಲ್ಯಾಕ್ಸ್ ಎನಿಸಿತು. ನಾನು ಈಗ ಹರಿದ್ವಾರದಲ್ಲಿರುವ ಪತಂಜಲಿ ವೆಲ್ನೆಸ್ ಸೆಂಟರ್ಗೆ ಬಂದಿದ್ದೇನೆ. ನನ್ನ ಥೈರಾಯ್ಡ್ ಈಗ ನಾರ್ಮಲ್ ಆಗಿದೆ. 64 ರಿಂದ 5ಕ್ಕೆ ಇಳಿದಿದೆ. 200 ರಷ್ಟಿದ್ದ ನನ್ನ ರಕ್ತದೊತ್ತಡ 140 ಬೈ 80 ಕ್ಕೆ ಇಳಿದಿದೆ. 98 ಕಿಲೋಗ್ರಾಂಗಳಷ್ಟು ಇದ್ದ ನನ್ನ ತೂಕ ಈಗ 78 ಕಿಲೋಗ್ರಾಂಗಳಿಗೆ ತಗ್ಗಿದೆ. ಇದಕ್ಕಾಗಿ ನಾನು ಮಹಾರಾಜ್ ಜಿ ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ಸುನಿಲ್ ಶಿವಾಜಿರಾವ್ ಪಾಟೀಲ್.
ಇದನ್ನೂ ಓದಿ: ಊಟ ವಿಚಾರದಲ್ಲಿ ಎಚ್ಚರ… ಸರಿಯಾದ ಆಹಾರ, ಸರಿಯಾದ ಸಮಯ, ಸರಿಯಾದ ಕ್ರಮ ಮುಖ್ಯ: ಬಾಬಾ ರಾಮದೇವ್ ಸಲಹೆಗಳಿವು
ಪತಂಜಲಿ ವೆಲ್ನೆಸ್ ದೆಸೆಯಿಂದ ದೆಹಲಿ ನಿವಾಸಿ ಪಂಕಜ್ ಗುಪ್ತಾ ಅವರ ಜೀವನ ಸಹ ಬದಲಾವಣೆ ಕಂಡಿದೆ. ಪಂಕಜ್ ಹೇಳುತ್ತಾರೆ, “ನಾನು 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದೆ. ನನಗೆ ನಡೆಯಲು ತುಂಬಾ ಕಷ್ಟಕರವಾಗುತ್ತಿತ್ತು. ನಾನು ಅನೇಕ ಚಿಕಿತ್ಸೆಗಳನ್ನು ಪ್ರಯತ್ನಿಸಿದೆ, ಆದರೆ ಏನೂ ಕೆಲಸ ಮಾಡಲಿಲ್ಲ. ನಂತರ ನಾನು ಚಿಕಿತ್ಸೆಗಾಗಿ ಪತಂಜಲಿ ವೆಲ್ನೆಸ್‌ಗೆ ಬಂದೆ. ಈಗ ಎರಡು ದಿನಗಳ ಹಿಂದೆ ನನಗೆ ಶ್ರುಂಗಿಯನ್ನು ಕೊಡಲಾಗಿದೆ.”
“ಶೃಂಗಿ ಪಡೆದ ತಕ್ಷಣ, ನನ್ನ ಮೊಣಕಾಲು ನೋವು ಸಂಪೂರ್ಣವಾಗಿ ಮಾಯವಾಯಿತು. ಇದು ನನಗೆ ಒಂದು ಪವಾಡ. ಇಲ್ಲಿನ ಚಿಕಿತ್ಸೆಯಿಂದ ನಾನು ಸಂಪೂರ್ಣವಾಗಿ ತೃಪ್ತನಾಗಿದ್ದೇನೆ” ಎಂದು ಪಂಕಜ್ ಗುಪ್ತಾ ಹೇಳಿದರು. ಹಿಮಾಚಲ ಪ್ರದೇಶದ ಇಂದ್ರಜಿತ್ ಸಿಂಗ್, ಒಡಿಶಾದ ಸೋನ್‌ಪುರದ ನರೇಂದ್ರ ಕುಮಾರ್ ಮಿಶ್ರಾ, ಮಧ್ಯಪ್ರದೇಶದ ಧಾರ್‌ನ ದೀಪಕ್ ಖಾಂಡೆ ಮತ್ತು ಪಶ್ಚಿಮ ಬಂಗಾಳದ ಹೌರಾದ ಶಿಖಾ ಭುನಿಯಾ ಸೇರಿದಂತೆ ನೂರಾರು ಜನರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ