
ಅಂಟಾರ್ಟಿಕಾದ ಶೀತಲ ಲೋಕದಲ್ಲಿ ಪೆಂಗ್ವಿನ್‌ಗಳ ಪ್ರೇಮ ಜೀವನ ನಿಜಕ್ಕೂ ಅದ್ಭುತ ಮತ್ತು ಮನುಷ್ಯರಿಗೂ ಮಾದರಿ. ಅವುಗಳ ಪ್ರೇಮದ ಕೆಲವು ಸುಂದರ, ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ನಡೆದ ಈ ಒಂಟಿ ಪೆಂಗ್ವಿನ್ ಸಮುದ್ರದ ಕಡೆಗೆ ಹಿಂಡಿನ ಹಿಂದೆ ಹೋಗದೆ ಒಂಟಿಯಾಗಿ ತೆರಳಿದೆ. ಹಿಂಡಿನಿಂದ ಬೇರ್ಪಟ್ಟ ಸ್ಥಳದಿಂದ 70 ಕಿಮೀದಿಂದ ದೂರದಲ್ಲಿರೋ ಪರ್ವತದ ಬಳಿ ಸಾಗಿದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯ. ವೆನಾ ಹೆಜೋಗ್ ನಿರ್ದೇಶನದ ‘ಎನ್ಕೌಂಟರ್ ಎಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಸಾಕ್ಷ್ಯ ಚಿತ್ರದ ದೃಶ್ಯದ ಭಾಗ ಇದು. ಬರೋಬ್ಬರಿ 19 ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ. ಆದರೆ ಈ ಪೆಂಗ್ವಿನ್‌ಗಳಿಗೆ ಒಂದು ಪ್ರೇಮಕಥೆ ಇದೆ. ಗಂಡು ಪೆಂಗ್ವಿನ್ ತನಗೆ ಇಷ್ಟವಾದ ಹೆಣ್ಣು ಪೆಂಗ್ವಿನ್‌ಗೆ ಪ್ರೀತಿಯನ್ನು ಹೇಳಲು ಅತ್ಯಂತ ಸುಂದರವಾದ, ನಯವಾದ ಕಲ್ಲನ್ನು (Pebble) ಹುಡುಕಿಕೊಂಡು ಬರುತ್ತದೆ. ಆ ಕಲ್ಲನ್ನು ಹೆಣ್ಣು ಪೆಂಗ್ವಿನ್‌ನ ಪಾದದ ಮುಂದೆ ಇಡುತ್ತದೆ. ಒಂದು ವೇಳೆ ಹೆಣ್ಣು ಪೆಂಗ್ವಿನ್ ಆ ಕಲ್ಲನ್ನು ಎತ್ತಿಕೊಂಡರೆ, ಅವಳು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ ಎಂದರ್ಥ! ನಂತರ ಅವರಿಬ್ಬರು ಸೇರಿ ಅದೇ ಕಲ್ಲುಗಳಿಂದ ತಮ್ಮ ಪುಟ್ಟ ಗೂಡನ್ನು ಕಟ್ಟುತ್ತಾರೆ.
ಹೆಚ್ಚಿನ ಪೆಂಗ್ವಿನ್ ಪ್ರಭೇದಗಳು (ವಿಶೇಷವಾಗಿ ಮೆಜೆಲಾನಿಕ್ ಪೆಂಗ್ವಿನ್‌ಗಳು) ಜೀವನಪರ್ಯಂತ ಒಬ್ಬನೇ ಸಂಗಾತಿಯ ಜೊತೆಗಿರುತ್ತವೆ. ಪ್ರತಿ ವರ್ಷ ಸಾವಿರಾರು ಮೈಲಿ ದೂರ ಪ್ರಯಾಣ ಬೆಳೆಸಿದರೂ, ಸಂತಾನೋತ್ಪತ್ತಿಯ ಸಮಯದಲ್ಲಿ ಸರಿಯಾಗಿ ತಮ್ಮ ಹಳೆಯ ಸಂಗಾತಿಯನ್ನೇ ಹುಡುಕಿಕೊಂಡು ಒಂದೇ ಜಾಗಕ್ಕೆ ಬರುತ್ತವೆ. ಸಾವಿರಾರು ಪೆಂಗ್ವಿನ್‌ಗಳ ಗುಂಪಿನಲ್ಲಿ ತನ್ನ ಸಂಗಾತಿಯನ್ನು ಗುರುತಿಸುವುದು ಸುಲಭವಲ್ಲ. ಅದಕ್ಕಾಗಿ ಪ್ರತಿಯೊಂದು ಜೋಡಿಯು ಒಂದು ವಿಶಿಷ್ಟವಾದ ‘ಧ್ವನಿ’ಯನ್ನು ಮಾಡುತ್ತದೆ. ಆ ಪ್ರೀತಿಯ ಕರೆಯನ್ನು ಕೇಳಿದ ತಕ್ಷಣ ಸಂಗಾತಿಗಳು ಒಬ್ಬರನ್ನೊಬ್ಬರು ಗುರುತಿಸಿ ಒಂದಾಗುತ್ತಾರೆ.
ಪೆಂಗ್ವಿನ್‌ಗಳ ಪ್ರೇಮದಲ್ಲಿ ಸಮಾನತೆ ಇದೆ. ಹೆಣ್ಣು ಪೆಂಗ್ವಿನ್ ಮೊಟ್ಟೆ ಇಟ್ಟ ಮೇಲೆ ಆಹಾರಕ್ಕಾಗಿ ಸಮುದ್ರಕ್ಕೆ ಹೋದಾಗ, ಗಂಡು ಪೆಂಗ್ವಿನ್ ಆ ಮೊಟ್ಟೆಯನ್ನು ತನ್ನ ಪಾದಗಳ ಮೇಲೆ ಇಟ್ಟುಕೊಂಡು, ಚಳಿಯಿಂದ ರಕ್ಷಿಸಿ ಕಾಪಾಡುತ್ತದೆ. ಈ ಸಮಯದಲ್ಲಿ ಗಂಡು ಪೆಂಗ್ವಿನ್ ತಿಂಗಳುಗಟ್ಟಲೆ ಏನನ್ನೂ ತಿನ್ನದೆ ತನ್ನ ಮರಿಗಾಗಿ ಕಾಯುತ್ತದೆ.ಪೆಂಗ್ವಿನ್‌ಗಳು ಪರಸ್ಪರ ಪ್ರೀತಿಯನ್ನು ತೋರಿಸಲು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂತೆ ಕಾಣುತ್ತವೆ ಮತ್ತು ಕೊಕ್ಕಿನಿಂದ ಪರಸ್ಪರರ ರೆಕ್ಕೆಗಳನ್ನು ಸ್ವಚ್ಛಗೊಳಿಸುತ್ತವೆ . ಇದು ಅವುಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಪೆಂಗ್ವಿನ್‌ಗಳು ಪಕ್ಷಿಗಳ ಗುಂಪಿಗೆ ಸೇರಿದರೂ ಇವುಗಳಿಗೆ ಆಕಾಶದಲ್ಲಿ ಹಾರಲು ಬರುವುದಿಲ್ಲ. ಆದರೆ, ಇವುಗಳ ರೆಕ್ಕೆಗಳು ಸಮುದ್ರದಲ್ಲಿ ‘ಈಜುರೆಕ್ಕೆ’ (Flippers) ಗಳಂತೆ ಕೆಲಸ ಮಾಡುತ್ತವೆ. ಇವು ನೀರಿನ ಅಡಿಯಲ್ಲಿ ಹಾರುತ್ತಿರುವಂತೆ ವೇಗವಾಗಿ ಈಜಬಲ್ಲವು!
ಇದನ್ನೂ ಓದಿ: ವಿಧವೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: ಈಗಲೇ ಅರ್ಜಿ ಸಲ್ಲಿಸಿ, 3 ಲಕ್ಷ ರೂ. ವರೆಗೆ ಹಣ ಪಡೆಯಿರಿ
ಪೆಂಗ್ವಿನ್‌ಗಳ ಮೈಬಣ್ಣ ಕಪ್ಪು ಮತ್ತು ಬಿಳಿಯಿರುತ್ತದೆ. ಇದು ಕೇವಲ ಸ್ಟೈಲ್ ಒಂದೇ ಅಲ್ಲ, ಇದು ಅವುಗಳ ರಕ್ಷಾಕವಚ, ಮೇಲೆ ಕಪ್ಪು ಇರುವುದರಿಂದ, ಸಮುದ್ರದ ಮೇಲಿನಿಂದ ನೋಡುವ ಶತ್ರುಗಳಿಗೆ ಅವು ನೀರಿನ ಆಳದ ಕತ್ತಲೆಯಂತೆ ಕಾಣುತ್ತವೆ. ಕೆಳಗೆ ಬಿಳಿ ಇರುವುದರಿಂದ, ನೀರಿನ ಒಳಗಿನಿಂದ ನೋಡುವ ಶತ್ರುಗಳಿಗೆ ಅವು ಮೇಲಿನ ಆಕಾಶದ ಬೆಳಕಿನಂತೆ ಕಾಣುತ್ತವೆ.
ಪೆಂಗ್ವಿನ್‌ಗಳು ಸಮುದ್ರದ ಉಪ್ಪುನೀರನ್ನು ಕುಡಿಯುತ್ತವೆ. ಇವುಗಳ ಕಣ್ಣಿನ ಹತ್ತಿರ ಒಂದು ವಿಶೇಷವಾದ ಗ್ರಂಥಿ (Supraorbital gland) ಇರುತ್ತದೆ. ಇದು ರಕ್ತದಲ್ಲಿರುವ ಹೆಚ್ಚುವರಿ ಉಪ್ಪನ್ನು ಸೋಸಿ, ಅದನ್ನು ಮೂಗಿನ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.ಪೆಂಗ್ವಿನ್‌ಗಳಿಗೆ ಹಲ್ಲುಗಳಿರುವುದಿಲ್ಲ. ಆದರೆ ಇವುಗಳ ಬಾಯಿ ಮತ್ತು ನಾಲಿಗೆಯ ಮೇಲೆ ಮುಳ್ಳಿನಂತಹ ರಚನೆಗಳಿರುತ್ತವೆ. ಇವು ಜಾರುವ ಮೀನುಗಳನ್ನು ಗಟ್ಟಿಯಾಗಿ ಹಿಡಿದು ನೇರವಾಗಿ ನುಂಗಲು ಸಹಾಯ ಮಾಡುತ್ತವೆ.
ಪೆಂಗ್ವಿನ್‌ಗಳು ನಡೆಯುವಾಗ ತುಂಬಾ ನಿಧಾನ. ಹಾಗಾಗಿ ಇವುಗಳು ಮಂಜಿನ ಮೇಲೆ ವೇಗವಾಗಿ ಚಲಿಸಲು ತಮ್ಮ ಹೊಟ್ಟೆಯ ಮೇಲೆ ಮಲಗಿ ಜಾರುತ್ತವೆ. ಇದನ್ನು ‘ಟೊಬೊಗ್ಯಾನಿಂಗ್’ ಎಂದು ಕರೆಯಲಾಗುತ್ತದೆ. ಇದು ನೋಡಲು ತುಂಬಾ ಮುದ್ದಾಗಿರುತ್ತದೆ. ಹೆಚ್ಚಿನ ವನ್ಯಜೀವಿಗಳು ಮನುಷ್ಯರನ್ನು ಕಂಡು ಓಡಿಹೋಗುತ್ತವೆ. ಆದರೆ ಪೆಂಗ್ವಿನ್‌ಗಳು ಭೂಮಿಯ ಮೇಲೆ ತಮಗಿಂತ ದೊಡ್ಡ ಶತ್ರುಗಳನ್ನು ನೋಡಿಲ್ಲದ ಕಾರಣ, ಮನುಷ್ಯರನ್ನು ಕಂಡರೆ ಹೆದರುವುದಿಲ್ಲ. ಕೆಲವೊಮ್ಮೆ ತಾವಾಗಿಯೇ ಮನುಷ್ಯರ ಹತ್ತಿರ ಬರುತ್ತವೆ!
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ