ಪೆಂಗ್ವಿನ್ 70 ಕಿಮೀ ನಡೆದು ಹೋಗಿದ್ದೇಕೆ? ಇದರ ಹಿಂದಿನ ಅಸಲಿ ಕಥೆ ಇಲ್ಲಿದೆ
Lonely Penguin: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆದ ಒಂಟಿ ಪೆಂಗ್ವಿನ್ ವಿಡಿಯೋದ ಅಸಲಿ ಕಥೆ ಇಲ್ಲಿದೆ. ಪರ್ವತದತ್ತ ಸಾಗಿದ ಪೆಂಗ್ವಿನ್ ಹಲವರಲ್ಲಿ ಕುತೂಹಲ ಮೂಡಿಸಿದೆ. ಈ ವಿಡಿಯೋ ಖಿನ್ನತೆ ಮತ್ತು ಒಂಟಿತನಕ್ಕೆ ಹೋಲಿಕೆಯಾಗಿ ಮೀಮ್‌ಗಳಾಗಿ ಬಳಕೆಯಾಗುತ್ತಿದೆ. ಈ ವಿಡಿಯೋದ ಬಗ್ಗೆ ಇಲ್ಲಿದೆ ವಿವರ.

ಇನ್ಸ್ಟಾಗ್ರಾಮ್ (Instagram) ರೀಲ್ಸ್ ಓಪನ್ ಮಾಡಿದರೆ ಸಾಕು ಎಲ್ಲ ಕಡೆಗಳಲ್ಲೂ ಒಂಟಿ ಪೆಂಗ್ವಿನ್ದೇ ಕಥೆ. ಒಂದು ಪೆಂಗ್ವಿನ್ ಒಂಟಿಯಾಗಿ ಪರ್ವತದ ಕಡೆ ನಡೆದು ಸಾಗುತ್ತಿದೆ. ವಿಡಿಯೋ ನೋಡಿ ಕೆಲವರು ತುಂಬಾನೇ ಮರುಗಿದ್ದರು. ಇನ್ನೂ ಕೆಲವರು ಮೀಮ್ ಮಾಡಿದ್ದರು. ‘ಈ ಪೆಂಗ್ವಿನ್ಗೆ ಏನಾಗಿದೆ’ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ, ಈ ವಿಡಿಯೋದ ಅಸಲಿ ಕಥೆಯೇ ಬೇರೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಈ ಒಂಟಿ ಪೆಂಗ್ವಿನ್ ಸಮುದ್ರದ ಕಡೆಗೆ ಹಿಂಡಿನ ಹಿಂದೆ ಹೋಗದೆ ಒಂಟಿಯಾಗಿ ತೆರಳಿದೆ. ಹಿಂಡಿನಿಂದ ಬೇರ್ಪಟ್ಟ ಸ್ಥಳದಿಂದ 70 ಕಿಮೀದಿಂದ ದೂರದಲ್ಲಿರೋ ಪರ್ವತದ ಬಳಿ ಸಾಗಿದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯ. ವೆನಾ ಹೆಜೋಗ್ ನಿರ್ದೇಶನದ ‘ಎನ್ಕೌಂಟರ್ ಎಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಸಾಕ್ಷ್ಯ ಚಿತ್ರದ ದೃಶ್ಯದ ಭಾಗ ಇದು. ಬರೋಬ್ಬರಿ 19 ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಯೂಟ್ಯೂಬ್ಗೆ ಅಪ್ಲೋಡ್ ಆಗಿದ್ದು 2010ರಲ್ಲಿ. ‘ಖಿನ್ನತೆಗೆ ಒಳಗಾದ ಪೆಂಗ್ವಿನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇದು ಚರ್ಚೆಗೆ ಕಾರಣ ಆಗಿತ್ತು. 2014ರಲ್ಲಿ ಈ ವಿಡಿಯೋ ಮತ್ತೊಮ್ಮೆ ಹರಿದಾಡಿದೆ.
ಅಡೆಲೀ ಪೆಂಗ್ವಿನ್‌ಗಳು ಸಾಮಾನ್ಯವಾಗಿ ತಮ್ಮ ಸಂತಾನೋತ್ಪತ್ತಿ ಸ್ಥಳ ಮತ್ತು ಆಹಾರ ಸಿಗೋ ಸಮುದ್ರದಂಚಿನಲ್ಲೇ ಇರುತ್ತವೆ. ಆದರೆ, ಏನೂ ಇಲ್ಲದ ಪರ್ವತದ ಕಡೆ ನಡೆದು ಹೋಗೋದು ತುಂಬಾನೇ ಅಪರೂಪ.
View this post on Instagram
ಈ ಬಗ್ಗೆ ಪೆಂಗ್ವಿನ್ ಬಗ್ಗೆ ಅಧ್ಯಯನ ಮಾಡೋರು ಹೇಳೋದೇ ಬೇರೆ. ಪೆಂಗ್ವಿನ್ ಕೆಲವೊಮ್ಮೆ ಬಂಡೆಗೆ ಡಿಕ್ಕಿ ಹೊಡೆದುಕೊಳ್ಳುತ್ತವಂತೆ. ಕೆಲವೊಮ್ಮೆ ದಿಕ್ಕು ತಪ್ಪಿದಾಗ ಗೊಂದಲಕ್ಕೆ ಒಳಗಾಗಿ ಅವು ಈ ರೀತಿ ನಡೆಯುತ್ತವೆಯಂತೆ. ಆಗ ಅವರು ಲೆಕ್ಕವಿಲ್ಲದಷ್ಟು ದೂರ ನಡೆದು ಬಿಡ್ತವೆ. ಅವುಗಳನ್ನು ಮತ್ತೆ ಗುಂಪಿಗೆ ತಂದು ಬಿಟ್ಟರೂ ಅದು ಮತ್ತೆ ಸಾಗೋದು ಆ ಪರ್ವತದ ಕಡೆಗೆ. ನರ ಸಂಬಂಧಿ ಕಾಯಿಲೆ ಇರಬಹುದು ಎಂದು ಕೆಲವರು ಹೇಳುತ್ತಾರೆ. ಯುವ ಪೆಂಗ್ವಿನ್‌ಗಳು ಹೊಸದರ ಹುಡುಕಾಟದಲ್ಲಿ ಈ ರೀತಿ ಮಾಡುತ್ತವೆ ಎಂಬ ಮಾತೂ ಇದೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿರೋದು ಆರಾಧ್ಯಾ ಖಾತೆಯಾ? ಐಶ್ವರ್ಯಾ ನೀಡಿದರು ಸ್ಪಷ್ಟನೆ
ವೈಜ್ಞಾನಿಕ ದೃಷ್ಟಿಕೋನದಿಂದ ಇದು ಅಷ್ಟು ಚಿಂತಿಸೋ ವಿಷಯವಲ್ಲ. ಅನೇಕ ಪ್ರಾಣಿ ಪ್ರಭೇದಗಳಲ್ಲಿ ಈ ರೀತಿಯ ನಡವಳಿಕೆ ಇರುತ್ತದೆ ಎಂಬುದು ವನ್ಯಜೀವಿ ಸಂಶೋಧಕರು ಅಭಿಪ್ರಾಯ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಮೀಮ್ ರೂಪದಲ್ಲಿ ಬಳಸಲಾಗುತ್ತಿದೆ. ಕೆಲವರು ಇದನ್ನು ಇತ್ತೀಚಿಗೆ ಜನರು ಬಳಲುತ್ತಿರುವ ಖಿನ್ನತೆಗೆ ಹಾಗೂ ಒಂಟಿತನಕ್ಕೆ ಹೋಲಿಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:51 am, Sat, 24 January 26




