AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದುಕೊಂಡಿದ್ದಕ್ಕಿಂತ ಡಬಲ್ ಸಂಪಾದಿಸಿದ ಗಿಲ್ಲಿ ನಟ

Bigg Boss Kannada Winner Gilli Nata: ಬಿಗ್ ಬಾಸ್ ಶೋ ಗಿಲ್ಲಿ ಅವರ ಬದುಕನ್ನೇ ಬದಲಾಯಿಸಿತು. ಚಿನ್ನದ ಅಂಗಡಿ ಉದ್ಘಾಟನೆಗೆ ಹೋದಾಗ ಅಭಿಮಾನಿಗಳ ಪ್ರೀತಿಯಿಂದ ಜನಸಾಗರವೇ ಸೇರಿತ್ತು. ಈ ಅಗಾಧ ಜನಪ್ರಿಯತೆ ಅವರಿಗೆ ಅನಿರೀಕ್ಷಿತವಾಗಿದ್ದು, ಬಿಗ್ ಬಾಸ್ ನಂತರ ಅವರ ಯಶಸ್ಸು ದ್ವಿಗುಣಗೊಂಡಿದೆ.

ಅಂದುಕೊಂಡಿದ್ದಕ್ಕಿಂತ ಡಬಲ್ ಸಂಪಾದಿಸಿದ ಗಿಲ್ಲಿ ನಟ
ಗಿಲ್ಲಿ ನಟ
ರಾಜೇಶ್ ದುಗ್ಗುಮನೆ
|

Updated on: Jan 24, 2026 | 10:41 AM

Share

ಒಂದು ಶೋ ಎಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಡಬಹುದು ಎಂಬುದಕ್ಕೆ ಬಿಗ್ ಬಾಸ್ (Bigg Boss) ಶೋ ಉತ್ತಮ ಉದಾಹರಣೆ. ಗಿಲ್ಲಿ ನಟ ಅವರು ಅಪಾರವಾದ ಜನಪ್ರಿಯತೆ ಸಂಪಾದಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಉದ್ಘಾಟನೆಗೆ ಹೋದಾಗ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಇಷ್ಟೆಲ್ಲ ಜನಪ್ರಿಯತೆ ಮಧ್ಯೆ ಗಿಲ್ಲಿ ನಟ ಅವರು ಅಂದುಕೊಂಡಿದ್ದಕ್ಕಿಂತ ದುಪ್ಪಟ್ಟು ಸಂಪಾದನೆ ಮಾಡಿದ್ದಾರೆ.

ಗಿಲ್ಲಿ ಅವರು ಹಲವು ರಿಯಾಲಿಟಿ ಶೋಗಳನ್ನು ಮಾಡಿ ಬಂದವರು. ಅವರು 5-6 ಶೋ ಮಾಡಿದ್ದಾಗಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಯಾವ ಶೋನಲ್ಲೂ ವಿನ್ನರ್ ಆಗೋಕೆ ಅವರಿಂದ ಸಾಧ್ಯವೇ ಆಗಿಲ್ಲ. ಜೊತೆಗೆ ಅಂದುಕೊಂಡ ರೀತಿಯಲ್ಲಿ ಹಿಂಬಾಲಕರನ್ನು ಸಂಪಾದಿಸಲು ಅವರ ಬಳಿ ಸಾಧ್ಯವಾಗಿರಲಿಲ್ಲ. ಆದರೆ, ಬಿಗ್ ಬಾಸ್ ಶೋ ಎಲ್ಲವನ್ನೂ ಬದಲಿಸಿತು.

ಬಿಗ್ ಬಾಸ್​​ಗೆ ಹೋಗುವಾಗ ಗಿಲ್ಲಿ ನಟನಿಗೆ ಇನ್​​​ಸ್ಟಾಗ್ರಾಮ್​​ನಲ್ಲಿ ಇದ್ದಿದ್ದು ಕೇವಲ 1 ಲಕ್ಷ ಹಿಂಬಾಲಕರು. ಬಿಗ್ ಬಾಸ್ ಶೋ ಮುಗಿಯಲು ಇನ್ನೇನು ತಿಂಗಳು ಬಾಕಿ ಇದೆ ಎಂದಾಗ ಗಿಲ್ಲಿ ಒಂದು ಮಾತನ್ನು ಹೇಳಿದ್ದರು. ‘ಕಾವು (ಕಾವ್ಯಾ) ಇನ್​​ಸ್ಟಾದಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆದ್ರೆ ಸಾಕಿತ್ತು’ ಎಂದಿದ್ದರು. ಇದಾದ ಬಳಿಕ ಗಿಲ್ಲಿಯ ಹಿಂಬಾಲಕರ ಸಂಖ್ಯೆ ಮಿತಿಮೀರಿ ಏರಿಕೆ ಆಯಿತು.

ಗಿಲ್ಲಿನ ಇನ್​​ಸ್ಟಾದಲ್ಲಿ ಫಾಲೋ ಮಾಡುವಂತೆ ಫ್ಯಾನ್ಸ್ ಕರೆಕೊಟ್ಟರು. ಇದಾದ ಬಳಿಕ ಅವರ ಇನ್​​ಸ್ಟಾ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಾ ಹೋದವು. ಫಿನಾಲೆ ದಿನ ಎನ್ನುವಾಗ 1.2 ಮಿಲಿಯನ್ ಹಿಂಬಾಲಕರನ್ನು ಅವರು ಸಂಪಾದಿಸಿದ್ದರು. ಈಗ ಆ ಸಂಖ್ಯೆ 2 ಮಿಲಿಯನ್ ತಲುಪಿದೆ. 20 ಲಕ್ಷ ಹಿಂಬಾಲಕರನ್ನು ಸಂಪಾದಿಸಿ ಅವರು ದಾಖಲೆ ಬರೆದಿದ್ದಾರೆ. ಅವರು ಅಂದುಕೊಂಡಿದ್ದು 10 ಲಕ್ಷ, ಸಿಕ್ಕಿದ್ದು ಮಾತ್ರ 20 ಲಕ್ಷ.

ಇದನ್ನೂ ಓದಿ: ಗಿಲ್ಲಿ ಬಳಿಯೇ ಉಳೀತಾ ಚಿನ್ನದ ಚೈನ್, ಉಂಗುರ? ವಿವರಿಸಿದ ನಟ ಕನ್ನಡ ಬಿಗ್ ಬಾಸ್​ಗೆ ಸ್ಪರ್ಧಿಸಿದವರ ಪೈಕಿ ನಿವೇದಿತಾ ಗೌಡ (2.1 ಮಿಲಿಯನ್) ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಅವರನ್ನು ಗಿಲ್ಲಿ ಹಿಂದಿಕ್ಕೋ ಸಾಧ್ಯತೆ ದಟ್ಟವಾಗಿದೆ. ಗಿಲ್ಲಿಗೆ ಇನ್ನೂ ಈ ಜನಪ್ರಿಯತೆಯನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವರು ರಿಯಾಲಿಟಿನ ಒಪ್ಪಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.