AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​​ಸ್ಟಾಗ್ರಾಮ್​ನಲ್ಲಿರೋದು ಆರಾಧ್ಯಾ ಖಾತೆಯಾ? ಐಶ್ವರ್ಯಾ ನೀಡಿದರು ಸ್ಪಷ್ಟನೆ

ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಮಾಧ್ಯಮದ ಸಾಧಕ-ಬಾಧಕಗಳ ಬಗ್ಗೆ ಮಾತನಾಡಿದರು. ಈ ವೇಳೆ, ಮಗಳು ಆರಾಧ್ಯಾ ಬಚ್ಚನ್ ಹೆಸರಿನಲ್ಲಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳು ನಕಲಿ ಎಂದು ಸ್ಪಷ್ಟಪಡಿಸಿದರು. ಆರಾಧ್ಯಾ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಸಕ್ರಿಯಳಾಗಿಲ್ಲ ಎಂದರು. ಹಿತೈಷಿಗಳಿಗೆ ಧನ್ಯವಾದ ಹೇಳಿದ ಅವರು, ಸುಳ್ಳು ಮಾಹಿತಿಗಳಿಂದ ಎಚ್ಚರವಿರಲು ಮನವಿ ಮಾಡಿದರು.

ಇನ್​​ಸ್ಟಾಗ್ರಾಮ್​ನಲ್ಲಿರೋದು ಆರಾಧ್ಯಾ ಖಾತೆಯಾ? ಐಶ್ವರ್ಯಾ ನೀಡಿದರು ಸ್ಪಷ್ಟನೆ
ಆರಾಧ್ಯಾ-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Dec 11, 2025 | 7:50 AM

Share

ಬಾಲಿವುಡ್‌ನ ನಟಿ ಐಶ್ವರ್ಯಾ ರೈ ಬಚ್ಚನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ, ಅವರ ಪ್ರೀತಿಯ ಮಗಳು ಆರಧ್ಯಾ ಬಚ್ಚನ್ ಕೂಡ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು ಸಹ ಐಶ್ವರ್ಯಾ-ಆರಧ್ಯಾ ಅವರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಈ ಇಬ್ಬರು ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿ ಅಥವಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಐಶ್ವರ್ಯಾ ರೈ ಇತ್ತೀಚೆಗೆ ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡರು. ಅಲ್ಲಿ, ಅವರು ಸಾಮಾಜಿಕ ಮಾಧ್ಯಮವನ್ನು ಬಳಸುವುದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೇಳಿದರು. ಅದರ ಬಗ್ಗೆ ವಿವರವಾಗಿ ಮಾತನಾಡಿದರು. ಅದೇ ಸಮಯದಲ್ಲಿ, ಆರಧ್ಯಾ ಅವರ ಸೋಶಿಯಲ್ ಮೀಡಿಯಾ ಖಾತೆಯ ಬಗ್ಗೆಯೂ ದೊಡ್ಡ ಹೇಳಿಕೆ ಕೊಟ್ಟಿದ್ದಾರೆ.

ಆರಾಧ್ಯ ಬಚ್ಚನ್ ಅವರ ನಕಲಿ ಸಾಮಾಜಿಕ ಮಾಧ್ಯಮ ಖಾತೆಯ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ. ಆರಾಧ್ಯಾ ಹೆಸರಿನಲ್ಲಿರುವ ಖಾತೆ ಸಂಪೂರ್ಣವಾಗಿ ನಕಲಿ ಎಂದು ಹೇಳಿದ ಐಶ್ವರ್ಯಾ, ತಮ್ಮ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮಗಳು ಆರಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಳಾಗಿದ್ದಾಳೆ ಎಂಬ ಎಲ್ಲಾ ವದಂತಿಗಳಿಗೆ ಐಶ್ವರ್ಯಾ ಅಂತ್ಯ ಹಾಡಿದ್ದಾರೆ. ಆರಾಧ್ಯ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣ ಖಾತೆಗಳನ್ನು ಅವರ ಕುಟುಂಬ ನಿರ್ವಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ‘ಕೆಲವೊಮ್ಮೆ ಫೇಕ್ ಸೋಶಿಯಲ್ ಮೀಡಿಯಾ ಖಾತೆ ನೋಡಿ ನಮ್ಮದೇ ಎಂದು ಭಾವಿಸುತ್ತಾರೆ. ಆದರೆ ಇಲ್ಲ, ಹಾಗಲ್ಲ. ಬಹುಶಃ ಈ ಖಾತೆಗಳನ್ನು (ಆರಾಧ್ಯಗಾಗಿ) ಯಾರೋ ಹಿತೈಷಿ ರಚಿಸಿರಬಹುದು’ ಎಂದು ನಟಿ ಹೇಳಿದರು. ಖಂಡಿತ, ಇದು ಆರಾಧ್ಯ, ನನ್ನ ಕುಟುಂಬ, ನನ್ನ ಪತಿ ಮತ್ತು ನನ್ನ ಮೇಲೆ ಜನರು ಹೊಂದಿರುವ ಪ್ರೀತಿಯಿಂದ ಬಂದಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು, ಆದರೆ ಅವಳು (ಆರಾಧ್ಯ) ಸಾಮಾಜಿಕ ಜಾಲತಾಣದಲ್ಲಿಲ್ಲ’ ಎಂದು ಐಶ್ವರ್ಯಾ ನೇರವಾಗಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ಐಶ್ವರ್ಯಾ ರೈಗಾಗಿ ಕಾಯಲು ಸಿದ್ಧನಿದ್ಧೆ’: ‘ಪಡೆಯಪ್ಪ 2’ಬಗ್ಗೆ ರಜನಿ ಮಾತು

ಸಾಮಾಜಿಕ ಮಾಧ್ಯಮದ ಬಗ್ಗೆ ಮಾತನಾಡಿದ ಐಶ್ವರ್ಯಾ ರೈ, ‘ನಾನ ಅದರಲ್ಲಿ ತುಂಬಾ ಕಡಿಮೆ ಸಕ್ರಿಯರಾಗಿದ್ದೇವೆ ಮತ್ತು ವೃತ್ತಿಪರ ಕಾರಣಗಳಿಗಾಗಿ ಮಾತ್ರ ಅದನ್ನು ಬಳಸುತ್ತೇವೆ ಎಂದು ಹೇಳಿದರು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಹಲವು ಪ್ರಯೋಜನಗಳಿವೆ, ಆದರೆ ಹಲವು ಸವಾಲುಗಳೂ ಇವೆ. ಸಾಮಾಜಿಕ ಮಾಧ್ಯಮವು ಜೀವನದ ಒಂದು ಭಾಗವಾಗಿದೆ. ಇದನ್ನು ಜನರೊಂದಿಗೆ ಸಂಪರ್ಕದಲ್ಲಿರಲು ಮತ್ತು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಬಳಸಲಾಗುತ್ತದೆ ಎಂದು ಐಶ್ವರ್ಯಾ ಹೇಳಿದರು. ಅದರಿಂದ (ಸಾಮಾಜಿಕ ಜಾಲತಾಣದಿಂದ) ಹೊರಬಂದು ತಮ್ಮನ್ನು ತಾವು ವಿಷಮುಕ್ತಗೊಳಿಸಿಕೊಳ್ಳಬೇಕು’ ಎಂದು ಐಶ್ವರ್ಯಾ ಕರೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Thu, 11 December 25