AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಶ್ವರ್ಯಾ ರೈಗಾಗಿ ಕಾಯಲು ಸಿದ್ಧನಿದ್ಧೆ’: ‘ಪಡೆಯಪ್ಪ 2’ಬಗ್ಗೆ ರಜನಿ ಮಾತು

Padeyappa movie: ರಜನೀಕಾಂತ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪಡೆಯಪ್ಪ’ 1999 ರಲ್ಲಿ ಬಿಡುಗಡೆ ಆಗಿತ್ತು. ಸೌಂದರ್ಯ, ರಮ್ಯಾಕೃಷ್ಣ ನಾಯಕಿಯರಾಗಿ ನಟಿಸಿದ್ದ ಈ ಸಿನಿಮಾ ಇದೀಗ 25 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ. ಸಿನಿಮಾ ಬಗ್ಗೆ ರಜನೀಕಾಂತ್ ಮಾತನಾಡಿದ್ದಾರೆ. ಅಲ್ಲದೆ ಈ ಸಿನಿಮಾದ ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೆಯುತ್ತಿರುವುದಾಗಿ ರಜನೀಕಾಂತ್ ಹೇಳಿದ್ದಾರೆ.

‘ಐಶ್ವರ್ಯಾ ರೈಗಾಗಿ ಕಾಯಲು ಸಿದ್ಧನಿದ್ಧೆ’: ‘ಪಡೆಯಪ್ಪ 2’ಬಗ್ಗೆ ರಜನಿ ಮಾತು
Aishwarya Rai Padeyappa
ಮಂಜುನಾಥ ಸಿ.
|

Updated on: Dec 10, 2025 | 5:32 PM

Share

ರಜನೀಕಾಂತ್ (Rajinikanth), ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಕೆಲವು ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದೆ, ಅಂಥಹಾ ಸಿನಿಮಾಗಳಲ್ಲಿ ಒಂದು ‘ಪಡೆಯಪ್ಪ’. ರಜನೀಕಾಂತ್ ಅವರು ತಮ್ಮ ಸ್ವಾಗ್, ಸ್ಟೈಲ್​​ನಿಂದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದ ಸಿನಿಮಾ ಇದು. ಮಾತ್ರವಲ್ಲದೆ, ಸಿನಿಮಾದ ವಿಲನ್ ರಮ್ಯಾಕೃಷ್ಣ ಪಾತ್ರಕ್ಕೂ ಸಹ ದೊಡ್ಡ ಅಭಿಮಾನಿ ವರ್ಗವೇ ಈ ಸಿನಿಮಾದಿಂದ ಸೃಷ್ಟಿಯಾಗಿತ್ತು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾದ ಸೀಕ್ವೆಲ್​​ ಬಗ್ಗೆಯೂ ರಜನೀಕಾಂತ್ ಮಾತನಾಡಿದ್ದಾರೆ.

‘ಪಡೆಯಪ್ಪ’ ಸಿನಿಮಾ ಡಿಸೆಂಬರ್ 12ರಂದು ಮರು ಬಿಡುಗಡೆ ಆಗುತ್ತಿದೆ. 1999 ರಲ್ಲಿ ಮೊದಲಿಗೆ ಬಿಡುಗಡೆ ಆಗಿದ್ದ ‘ಪಡೆಯಪ್ಪ’ ಇದೀಗ 25 ವರ್ಷಗಳ ಬಳಿಕ ಮತ್ತೆ ಬಿಡುಗಡೆ ಆಗುತ್ತಿದೆ. ಸಿನಿಮಾದ ಮರು ಬಿಡುಗಡೆ ಕುರಿತಾಗಿ ರಜನೀಕಾಂತ್ ಅವರ ವಿಡಿಯೋ ಒಂದು ಬಿಡುಗಡೆ ಆಗಿದ್ದು, ವಿಡಿಯೋನಲ್ಲಿ ‘ಪಡೆಯಪ್ಪ’ ಸಿನಿಮಾ ಕುರಿತಾಗಿ ಅವರು ಮಾತನಾಡಿದ್ದಾರೆ. ‘ಪಡೆಯಪ್ಪ’ ಸಿನಿಮಾವನ್ನು ಬೇರೆಯವರ ಹೆಸರಲ್ಲಿ ತಾವೇ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡಿರುವ ರಜನೀಕಾಂತ್, ಅದರ ಹಕ್ಕು ಸನ್ ಬಳಿ ಮಾತ್ರವೇ ಇದೆ, ಅವರ ಬಳಿಯೇ ಇರಲಿ, ಜನ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಲಿ ಎಂಬುದು ನನ್ನ ಆಸೆಯಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?

ಇನ್ನು ‘ಪಡೆಯಪ್ಪ’ ಸಿನಿಮಾದ ಚಿತ್ರೀಕರಣದ ಬಗ್ಗೆ ಮಾತನಾಡಿರುವ ರಜನೀಕಾಂತ್, ಆ ಸಿನಿಮಾನಲ್ಲಿ ವಿಲನ್ ಪಾತ್ರಕ್ಕೆ ಮಹಿಳೆಯನ್ನು ಇಡುವ ಆಲೋಚನೆ ಹೊಸದಾಗಿತ್ತು. ಆ ವಿಲನ್ ‘ನೀಲಾಂಬರಿ’ ಪಾತ್ರಕ್ಕೆ ನಾವು ಐಶ್ವರ್ಯಾ ರೈ ಅವರನ್ನು ಕೇಳಿದ್ದೆವು. ಆಗ ಐಶ್ವರ್ಯಾ ರೈ ಅವರನ್ನು ಸಂಪರ್ಕಿಸಲು ಬಹಳ ಕಷ್ಟಪಟ್ಟಿದ್ದೆವು, ಆದರೆ ಐಶ್ವರ್ಯಾ ರೈ ಆಸಕ್ತಿ ತೋರಿಸಲಿಲ್ಲ. ಐಶ್ವರ್ಯಾ ರೈ ಆಸಕ್ತಿ ತೋರಿಸಿದ್ದಿದ್ದರೆ ಅವರಿಗಾಗಿ ಎರಡು ಮೂರು ವರ್ಷ ಕಾಯಲು ಸಹ ನಾನು ರೆಡಿ ಇದ್ದೆ. ಐಶ್ವರ್ಯಾ ರೈ ಬಳಿಕ ನಾವು ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್ ಅವರನ್ನು ಸಹ ಕಾಸ್ಟ್ ಮಾಡಲು ಯೋಚಿಸಿದ್ದೆವು, ಆದರೆ ಅವರು ಸೂಕ್ತವಲ್ಲ ಎನಿಸಿತು, ಬಳಿಕ ರವಿಕುಮಾರ್ ಸಲಹೆ ನೀಡಿದಂತೆ ರಮ್ಯಾಕೃಷ್ಣ ಅವರನ್ನು ‘ನೀಲಾಂಬರಿ’ ಪಾತ್ರಕ್ಕೆ ಫೈನಲ್ ಮಾಡಿದೆವು’ ಎಂದು ನೆನಪು ಮಾಡಿಕೊಂಡಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿಯೇ, ಮಹಿಳೆಯರು ಗೇಟುಗಳನ್ನು ತಳ್ಳಿಕೊಂಡು ಸಿನಿಮಾ ನೋಡಲು ಬಂದಿದ್ದು ‘ಪಡೆಯಪ್ಪ’ ಸಿನಿಮಾಕ್ಕೆ ಮಾತ್ರ. ನೀಲಾಂಬರಿ ಪಾತ್ರ ಅವರಿಗೆಲ್ಲ ಸಖತ್ ಇಷ್ಟವಾಗಿತ್ತು. ರಮ್ಯಾಕೃಷ್ಣ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಈಗ ‘ರೊಬೊ 2’, ‘ಜೈಲರ್ 2’ ಎಂದೆಲ್ಲ ಮಾಡುತ್ತಿರುವಾಗ ನಾವೇಕೆ ‘ಪಡೆಯಪ್ಪ 2’ ಮಾಡಬಾರದು ಎಂಬ ಆಲೋಚನೆ ಬರುತ್ತಿದೆ. ಆದರೆ ಈ ಬಾರಿ ನೀಲಾಂಬರಿ ಪಾತ್ರವನ್ನೇ ಪ್ರಧಾನ ಇಟ್ಟುಕೊಂಡು, ‘ನೀಲಾಂಬರಿ: ಪಡೆಯಪ್ಪ’ ಎಂಬ ಸಿನಿಮಾ ಮಾಡುವ ಆಲೋಚನೆ ಇದೆ. ಕತೆ ನಾನೇ ಬರೆಯುತ್ತಿದ್ದೇನೆ’ ಎಂದಿದ್ದಾರೆ ರಜನೀಕಾಂತ್. 1999 ರಲ್ಲಿ ಬಿಡುಗಡೆ ಆಗಿದ್ದ ‘ಪಡೆಯಪ್ಪ’ ಸಿನಿಮಾಕ್ಕೂ ರಜನೀಕಾಂತ್ ಅವರೇ ಕತೆ ಬರೆದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ