Chanakya Niti: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ಈ ತತ್ವಗಳನ್ನು ಅನುಸರಿಸಿ
ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ರಾಜಕೀಯ ಮಾತ್ರವಲ್ಲದೆ ಸಂಪತ್ತು, ಸ್ನೇಹ ಮತ್ತು ಕುಟುಂಬ ಸಂಬಂಧಗಳು ಸೇರಿದಂತೆ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆಯೂ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಜೀವನದಲ್ಲಿ ಎದುರಾಗುವ ಕಷ್ಟವನ್ನು ಎದುರಿಸುವುದೇಗೆ, ಎದುರಿಸಿ ಜಯಿಸುವುದೇಗೆ ಎಂಬುದರ ಬಗ್ಗೆಯೂ ಸಲಹೆ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಜೀವನಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.

ಪ್ರತಿಯೊಬ್ಬರ ಜೀವನದಲ್ಲೂ ಸುಖ-ದುಃಖ, ನೋವು ನಲಿವು ಎಲ್ಲವೂ ಇದ್ದೇ ಇರುತ್ತದೆ. ಈ ಎಲ್ಲಾ ಕಷ್ಟಗಳನ್ನು (difficulties) ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ. ಹೆಚ್ಚಿನವರು ಕಷ್ಟ ಎದುರಾಯಿತೆಂದು ಭಯಪಟ್ಟು, ಬರೀ ಕಷ್ಟವೇ ಎಂದು ತಾಳ್ಮೆಯನ್ನು ಕಳೆದುಕೊಂಡು ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾರೆ. ಆದ್ರೆ ಚಾಣಕ್ಯರು ಹೇಳಿರುವ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಎದುರಾಗವು ಯಾವುದೇ ಕಷ್ಟವನ್ನೂ ಸುಲಭವಾಗಿ ಎದುರಿಸಬಹುದು, ಜೊತೆಗೆ ಇದು ಕಠಿಣ ಸಂದರ್ಭಗಳನ್ನು ಎದುರಿಸಿಕೊಂಡು ಮುಂದಕ್ಕೆ ಸಾಗುವ ಧೈರ್ಯವನ್ನು ನೀಡುತ್ತದೆ. ಆ ಸಲಹೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ಈ ಸಲಹೆ ಪಾಲಿಸಿ:
ಚಿಂತನಶೀಲವಾಗಿ ಕೆಲಸ ಮಾಡಿ: ಒಬ್ಬ ವ್ಯಕ್ತಿಯು ಕಷ್ಟದ ಸಮಯವನ್ನು ಎದುರಿಸುತ್ತಿದ್ದರೆ, ಮೊದಲು ಹಣವನ್ನು ಉಳಿಸಿ ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡುತ್ತಾರೆ. ಏಕೆಂದರೆ ಹಣವು ಕಷ್ಟದ ಸಮಯವನ್ನು ಸಾಧ್ಯವಾದಷ್ಟು ಬೇಗ ಜಯಿಸಲು ನಿಮಗೆ ಸಹಾಯ ಮಾಡುತ್ತದೆ. ಕಷ್ಟದ ಸಮಯದಲ್ಲಿ ಹಣವು ವ್ಯಕ್ತಿಯ ಮೊದಲ ಸ್ನೇಹಿತ, ಆದ್ದರಿಂದ ಅವರು ಎಂದಿಗೂ ಅನಗತ್ಯ ವಸ್ತುಗಳಿಗೆ ಹಣವನ್ನು ಖರ್ಚು ಮಾಡಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಯಾವುದೇ ಕೆಲಸವನ್ನು ಮುಂದೂಡಬೇಡಿ: ಯಾರಾದರೂ ಕೆಟ್ಟ ಸಮಯವನ್ನು ಎದುರಿಸುತ್ತಿದ್ದರೆ, ಅವರು ಯಾವುದೇ ಕೆಲಸವನ್ನು ನಾಳೆಗೆಮುಂದೂಡಬಾರದು, ಏಕೆಂದರೆ ಇದು ಅವರ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಆದ್ದರಿಂದ, ಪರಿಸ್ಥಿತಿ ಹದಗೆಡುವುದನ್ನು ತಪ್ಪಿಸಲು ನೀವು ಬಯಸಿದರೆ, ನಿಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಇದು ಕಷ್ಟದ ಸಮಯವನ್ನು ತ್ವರಿತವಾಗಿ ದಾಟಲು ನಿಮಗೆ ಸಹಾಯ ಮಾಡುತ್ತದೆ.
ಸಕಾರಾತ್ಮಕ ಚಿಂತನೆ: ಕಷ್ಟದ ಸಮಯದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಎದುರಾಗುವ ಯಾವುದೇ ಸುಲಭವಾಗಿ ಎದುರಿಸಲು ಸಹಾಯ ಮಾಡುತ್ತದೆ. ಒಳ್ಳೆಯ ಸಮಯಗಳು ಮರಳುತ್ತವೆ ಎಂದು ನಂಬಲು ವ್ಯಕ್ತಿಗೆ ಧೈರ್ಯವನ್ನು ನೀಡುತ್ತದೆ. ಹಾಗಾಗಿ ಯಾವಾಗಲೂ ಸಕಾರಾತ್ಮಕವಾಗಿರಿ.
ಇದನ್ನೂ ಓದಿ: ಈ ರಹಸ್ಯಗಳನ್ನು ತಿಳಿದರೆ ನೀವು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ
ಸರಿ-ತಪ್ಪುಗಳ ನಡುವಿನ ವ್ಯತ್ಯಾಸ ತಿಳಿಯಿರಿ: ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಈ ತಿಳುವಳಿಕೆಯನ್ನು ಬೆಳೆಸಿಕೊಂಡರೆ, ಭವಿಷ್ಯದಲ್ಲಿ ಬರುವ ಎಲ್ಲಾ ಸಮಸ್ಯೆಗಳು ಉದ್ಭವಿಸುವ ಮೊದಲೇ ಅವುಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ.
ತಾಳ್ಮೆ ಅತ್ಯಗತ್ಯ: ತಾಳ್ಮೆಯು ಒಬ್ಬ ವ್ಯಕ್ತಿಯನ್ನು ಅತ್ಯಂತ ಕೆಟ್ಟ ಸಮಯದಿಂದ ಕೂಡ ಹೊರಗೆ ಕರೆದೊಯ್ಯುವ ಅದ್ಭುತ ಗುಣ. ಹಾಗಾಗಿ ತಾಳ್ಮೆಯನ್ನು ಬೆಳೆಸಿಕೊಳ್ಳಿ. ಇದು ಜೀವನದ ಪ್ರತಿ ಹೆಜ್ಜೆಯನ್ನೂ ಚಿಂತನಶೀಲವಾಗಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಿ ಜಯಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




