
ಪ್ರತಿಯೊಬ್ಬರ ವ್ಯಕ್ತಿತ್ವವೂ (Personality) ಭಿನ್ನ ವಿಭಿನ್ನವಾಗಿರುತ್ತದೆ. ಕೆಲವರು ತುಂಬಾ ಶಾಂತ ಸ್ವಭಾವದವರಾದರೇ ಇನ್ನೂ ಕೆಲವರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುವವರಾಗಿರುತ್ತಾರೆ. ಅದರಲ್ಲೂ ಮಂಗಳವಾರ ಜನಿಸಿದವರೂ ಸಿಕ್ಕಾಪಟ್ಟೆ ಕೋಪಿಷ್ಟರು ಎನ್ನಲಾಗುತ್ತದೆ. ವ್ಯಕ್ತಿಯ ಈ ಎಲ್ಲಾ ಗುಣಸ್ವಭಾವಗಳನ್ನು ಹುಟ್ಟಿದ ದಿನ, ದಿನಾಂಕ, ಘಳಿಗೆಯ ಆಧಾರದ ಮೇಲೆ ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮುಖಾಂತರ ತಿಳಿಯಬಹುದಾಗಿದೆ. ಹುಟ್ಟಿದ ದಿನ ಮಾತ್ರವಲ್ಲದೆ ಹುಟ್ಟಿದ ತಿಂಗಳ ಆಧಾರ ಮೇಲೂ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಫೆಬ್ರವರಿ ತಿಂಗಳು ಇನ್ನೇನೂ ಆರಂಭವಾಗುವ ಈ ಹೊತ್ತಿನಲ್ಲಿ ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದವರ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸೋಣ.
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರು ಸೃಜನಶೀಲತೆ ಮತ್ತು ದೂರದೃಷ್ಟಿಯನ್ನು ಹೊಂದಿದ್ದು, ಇವರು ಕಲೆ, ವಿಜ್ಞಾನ, ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಇವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಇವರಿಗೆ ಉಜ್ವಲ ಭವಿಷ್ಯವಿದೆ. ಈ ತಿಂಗಳಲ್ಲಿ ಜನಿಸಿದವರು ತಮ್ಮ ಕಠಿಣ ಪರಿಶ್ರಮದ ಮೂಲಕ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಾರೆ. ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಶ್ರೀಮಂತರಾಗುತ್ತಾರೆ. ಕೆಲವೊಮ್ಮೆ, ಇವರು ಭಾವನಾತ್ಮಕರಾಗುತ್ತಾರೆ, ಇದು ಇವರ ವೃತ್ತಿಜೀವನದಲ್ಲಿ ಗಮನಾರ್ಹ ಅಡೆತಡೆಗಳನ್ನು ಸೃಷ್ಟಿಸಬಹುದು. ಆದರೆ ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲೆ ಗಮನ ಹರಿಸುವ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ.
ಇದನ್ನೂ ಓದಿ: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಫೆಬ್ರವರಿಯಲ್ಲಿ ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಇವರು ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿಯ ಮುಗ್ಧತೆ ಮತ್ತು ನಿಜವಾದ ಪ್ರೀತಿ, ಹೃದಯವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮವರನ್ನು ಹೆಚ್ಚಾಗಿ ನಂಬುತ್ತಾರೆ. ಇದೇ ಕಾರಣದಿಂದ ಇವರು ನಂಬಿಕೆ ದ್ರೋಹಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ