
ಸಾಮಾನ್ಯವಾಗಿ ನಾವು ನಮ್ಮ ಭವಿಷ್ಯ, ನಮ್ಮ ಸ್ವಭಾವದ ಬಗ್ಗೆ ತಿಳಿಯಲು ಜೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಶಾಸ್ತ್ರವನ್ನು ಅವಲಂಬಿಸುತ್ತೇವೆ. ಇದಲ್ಲದೆ ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳ ಮೂಲಕ ಸ್ವತಃ ನಾವೇ ನಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ಸೇಬು ಅಥವಾ ದಂಪತಿಗಳ ಮುಖ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ಈ ಮೇಲಿನ ಚಿತ್ರದಲ್ಲಿ ಅರ್ಧ ಸೇಬು ಮತ್ತು ಪುರುಷ, ಮಹಿಳೆಯ ಮುಖವಿದ್ದು, ಅದರಲ್ಲಿ ನೀವು ಮೊದಲು ಏನು ನೋಡುತ್ತೀರಿ ಎಂಬುದರ ಆಧಾರದ ಮೇಲೆ ನೀವು ಭಾವನಾತ್ಮಕ ವ್ಯಕ್ತಿಯೇ ಅಥವಾ ತಾರ್ಕಿಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ಅರ್ಧ ತಿಂದ ಸೇಬು: ನೀವು ಮೊದಲು ಅರ್ಧ ತಿಂದ ಸೇಬನ್ನು ತಿಂದರೆ ನೀವು ಭಾವನಾತ್ಮಕ ವ್ಯಕ್ತಿ ಎಂದರ್ಥ. ನೀವು ಸಾಮಾಜಿಕವಾಗಿ ಎಲ್ಲರೊಂದಿಗೂ ಬೆರೆಯುತ್ತೀರಿ ಜೊತೆಗೆ ಸಹಾನುಭೂತಿಯನ್ನು ಹೊಂದಿರುವವರಾಗಿದ್ದೀರಿ. ನಿಮ್ಮವರಿಗೆ ಸಾಂತ್ವನ ಹೇಳುವುದರಲ್ಲಿಯೂ ನೀವು ಸದಾ ಮುಂದಿರುತ್ತೀರಿ. ಅಲ್ಲದೆ ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನೀವು ನಿಪುಣರು.
ಇದನ್ನೂ ಓದಿ: ನಿಮ್ಮಲ್ಲಿ ಯಾವ ರೀತಿಯ ಶಕ್ತಿ ಇದೆ ಎಂಬುದನ್ನು ಈ ಚಿತ್ರ ತಿಳಿಸುತ್ತಂತೆ
ಪುರುಷ ಮತ್ತು ಮಹಿಳೆಯ ಮುಖ: ನೀವು ಮೊದಲು ಪುರುಷ ಮತ್ತು ಮಹಿಳೆಯ ಮುಖವನ್ನು ನೋಡಿದರೆ, ನೀವು ತಾರ್ಕಿಕ ವ್ಯಕ್ತಿ ಎಂದರ್ಥ. ನೀವು ಭಾವನೆಗಳಿಗೆ ಬಲಿಯಾಗುವ ಬದಲು ತಾರ್ಕಿಕವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಜೊತೆಗೆ ಪ್ರಾಯೋಗಿಕವಾಗಿವಾಗಿ ಯೋಚಿಸುವ ನೀವು ಹೆಚ್ಚಿನ ಸಂದರ್ಭಗಳಲ್ಲಿ ಯೋಚಿಸಿ ಸರಿಯಾಸ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ