Chanakya Niti: ಯೌವನದಲ್ಲಿ ಮಾಡುವ ಈ ತಪ್ಪುಗಳಿಂದ ಇಡೀ ಜೀವನವೇ ನಾಶವಾಗಬಹುದು ಎನ್ನುತ್ತಾರೆ ಚಾಣಕ್ಯ
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ಮಾತ್ರವಲ್ಲದೆ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಅನೇಕ ಪಾಠಗಳನ್ನು ಸಹ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಯೌವನದಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡಿದರೆ ಜೀವನಪೂರ್ತಿ ದುಃಖದಿಂದ ಕೂಡಿರುತ್ತದೆ ಹಾಗಾಗಿ ಆ ತಪ್ಪುಗಳನ್ನು ಮಾಡದಿದ್ದರೆಯೇ ಒಳ್ಳೆಯದು ಎಂದಿದ್ದಾರೆ.

ನಮ್ಮ ಯಶಸ್ಸು, ಶ್ರೇಯಸ್ಸು ನಮ್ಮ ನಡೆಯ ಮೇಲೆ ಅವಲಂಬಿತವಾಗಿರುತ್ತದೆ. ಹೌದು ನಾವು ಕಷ್ಟಪಟ್ಟು ಶ್ರಮಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ, ಅದೇ ಯಶಸ್ಸಿಗಾಗಿ ಶ್ರಮಿಸುವ ಸಮಯದಲ್ಲಿ ಸೋಮಾರಿತನವನ್ನು ತೋರಿದರೆ, ಕೆಟ್ಟ ಚಟಗಳ ಕಡೆಗೆ ಒಲವು ತೋರೊದರೆ ಖಂಡಿತವಾಗಿಯೂ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಯೌವನದಲ್ಲಿ ಮಾಡುವಂತಹ ಈ ಒಂದಷ್ಟು ತಪ್ಪುಗಳಿಂದಲೂ (mistakes) ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಜೊತೆಗೆ ಈ ತಪ್ಪಿನ ಕಾರಣದಿಂದಾಗಿ ಜೀವನಪರ್ಯಂತ ದುಃಖವನ್ನು ಅನುಭವಿಸಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಯೌವನದಲ್ಲಿ ಮಾಡುವ ಈ ತಪ್ಪಿನಿಂದ ಜೀವನವೇ ಹಾಳಾಗುತ್ತದೆ:
ಕೆಟ್ಟವರ ಸಹವಾಸ: ಆಚಾರ್ಯ ಚಾಣಕ್ಯ ಹೇಳುವಂತೆ ಹಾಲಿಗೆ ಹುಳಿ ಬಿದ್ದರೆ, ಹಾಲು ಕೆಟ್ಟು ಹೋಗುವಂತೆ, ಕೆಟ್ಟವರ ಸಹವಾಸವು ಒಳ್ಳೆಯ ವ್ಯಕ್ತಿಯನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ, ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ.
ಸಮಯ ವ್ಯರ್ಥ: ಯೌವನದಲ್ಲಿ ಸಮಯವು ಅತ್ಯಂತ ಅಮೂಲ್ಯವಾದುದು. ಈ ಸಮಯವನ್ನು ಮೊಬೈಲ್ ಫೋನ್ ನೋಡುತ್ತಾ, ಮೋಜು ಮಸ್ತಿ ಮಾಡುತ್ತಾ ವ್ಯರ್ಥ ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ, ಈ ಒಂದು ತಪ್ಪಿನಿಂದ ಜೀವಪರ್ಯಂತ ದುಃಖ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯ.
ತಪ್ಪು ನಿರ್ಧಾರಗಳು: ಹೆಚ್ಚಿನವರು ಯೋಚಿಸದೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಸಂಗಾತಿಯನ್ನು ಆಯ್ಕೆ ಮಾಡುವುದೇ ಆಗಿರಲಿ ಅಥವಾ ಕೆಲಸದ ವಿಷಯವೇ ಆಗಿರಲಿ, ಈ ವಿಷಯಗಳಲ್ಲಿ ಯೋಚಿಸದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಂತರ ವಿಷಾದ ಪಡಬೇಕಾಗುತ್ತದೆ.
ಇದನ್ನೂ ಓದಿ: ಪುರುಷರು ಇಂತಹ ಮಹಿಳೆಯರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ
ಶಿಸ್ತು ಮತ್ತು ನಿಯಮಗಳನ್ನು ನಿರ್ಲಕ್ಷಿಸುವುದು: ಯೌವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಶಿಸ್ತು. ತಡವಾಗಿ ಏಳುವುದು, ಯೋಜನೆಗಳನ್ನು ರೂಪಿಸದಿರುವುದು, ಸೋಮಾರಿತನದಿಂದ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮುಂದೂಡುವುದು, ಇವೆಲ್ಲವೂ ನೀವು ಯಶಸ್ಸಿನತ್ತ ಸಾಗುವುದನ್ನು ತಡೆಯುತ್ತದೆ.
ಭವಿಷ್ಯಕ್ಕಾಗಿ ಯೋಜನೆ ಮಾಡದಿರುವುದು: ಅನೇಕರು ಭವಿಷ್ಯದ ಬಗ್ಗೆ ಯೋಚಿಸುವುದೇ ಇಲ್ಲ, ಬದಲಾಗಿ ಮೋಜು ಮಸ್ತಿ ಮಾಡುತ್ತಾ ದಿನ ಕಳೆಯುತ್ತಾರೆ. ಇದರಿಂದ ಭವಿಷ್ಯದಲ್ಲಿ ವಿಷಾದ ಅನುಭವಿಸಬೇಕಾಗುತ್ತದೆ. ಹಾಗಾಗಿ ಭವಿಷ್ಯದ ಬಗ್ಗೆ ಮೊದಲೇ ಒಂದಷ್ಟು ಯೋಜನೆಗಳನ್ನು ರೂಪಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




