
ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಸಾಮುದ್ರಿಕ ಶಾಸ್ತ್ರಗಳು ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸ್ವತಃ ನಾವೇ ಪರೀಕ್ಷಿಸಿಕೊಳ್ಳಬಹುದು. ಇಂತಹ ಪರ್ಸನಾಲಿಟಿ ಟೆಸ್ಟ್‌ಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೂ ಒಂದು. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವುದು ಮಾತ್ರವಲ್ಲದೆ ನಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನೂ ತಿಳಿಸುತ್ತದೆ. ಇಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಕಾಡು ಅಥವಾ ಮನುಷ್ಯನ ಮುಖ ಅವೆರಡರಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ಅಂತರ್ಮುಖಿಯೋ ಅಥವಾ ಬಹಿರ್ಮುಖಿಯೋ ಎಂಬುದನ್ನು ಪರೀಕ್ಷಿಸಿ.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡು ಹಾಗೂ ಮನುಷ್ಯನ ಮುಖ ಈ ಎರಡು ಅಂಶಗಳಿದ್ದು, ಅದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಅಂತರ್ಮುಖ ವ್ಯಕ್ತಿತ್ವದವರೇ ಅಥವಾ ಬಹಿರ್ಮುಖ ವ್ಯಕ್ತಿತ್ವವನ್ನು ಹೊಂದಿರುವವರೇ ಎಂಬುದನ್ನು ಪರೀಕ್ಷಿಸಿ.
ಮೊದಲು ಮನುಷ್ಯನ ಮುಖ ನೋಡಿದರೆ: ನಿಮಗೆ ಈ ಚಿತ್ರದಲ್ಲಿ ಮೊದಲು ಮನುಷ್ಯನ ಮುಖ ಕಾಣಿಸಿದರೆ ನೀವು ಬಹಿರ್ಮುಖ ಸ್ವಭಾವವನ್ನು ಹೊಂದಿರುವವರೆಂದು ಅರ್ಥ. ಸಾಮಾಜಿಕವಾಗಿ ಬೆರೆಯುವ ನೀವು ಸುತ್ತಮುತ್ತಲಿನ ಜನರೊಂದಿಗೆ ಕಾಲ ಕಳೆಯಲು ಆನಂದಿಸುತ್ತೀರಿ. ನೀವು ಮಾನವ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವವರೂ ಹೌದು. ನೀವು ಎಲ್ಲರೊಂದಿಗೆ ಅರ್ಥಪೂರ್ಣ ಸಂಭಾಷಣೆಯನ್ನು ಮಾಡುವುದು ಮಾತ್ರವಲ್ಲದೆ ಎಲ್ಲರನ್ನೂ ಗೌರವಿಸುತ್ತೀರಿ. ಈ ನಿಮ್ಮ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೆ ಇದು ಇದು ಬಲವಾದ, ಸ್ನೇಹಪರ ಬಂಧವನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಂಶವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ಮೊದಲು ಮರವನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ಮರವನ್ನು ನೋಡಿದರೆ ನೀವು ಅಂತರ್ಮುಖಿ ವ್ಯಕ್ತಿಗಳೆಂದು ಅರ್ಥ. ನೀವು ಸಾಮಾಜಿಕವಾಗಿ ಬೆರೆಯುವುದಕ್ಕಿಂತ ಹೆಚ್ಚಾಗಿ ನೀವು ಒಬ್ಬಂಟಿಯಾಗಿ ನಿಮ್ಮಷ್ಟಕ್ಕೆ ಇರಲು ಹೆಚ್ಚು ಇಷ್ಟಪಡುತ್ತೀರಿ. ನೀವು ಶಾಂತತೆ ಮತ್ತು ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ. ಅಲ್ಲದೆ ನಿಮ್ಮದು ಮಾತು ಕಮ್ಮಿಯಾದರೂ ಅರ್ಥಪೂರ್ಣವಾಗಿ ಮಾತುಗಳನ್ನಾಡುತ್ತೀರಿ. ಜೊತೆಗೆ ನೀವು ದೊಡ್ಡ ಗುಂಪುಗಳಿಗಿಂತ ನಿಮ್ಮವರೊಂದಿಗೆ ಮಾತ್ರ ಸಮಯ ಕಳೆಯಲು ಇಷ್ಟಪಡುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ