Personality Test: ನೀವು ಕುಳಿತುಕೊಳ್ಳುವ ಭಂಗಿಯಿಂದ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣ ತಿಳಿಯಿರಿ

| Updated By: ಶ್ರೀದೇವಿ ಕಳಸದ

Updated on: Jun 21, 2022 | 12:05 PM

Sitting Position : ಪಡೆದ ಸರ್ಟಿಫಿಕೇಟ್​ಗಳಷ್ಟೇ ಉದ್ಯೋಗ ದೊರಕಿಸಿಕೊಡಲಾರವು ಎಂಬುದು ಸದ್ಯದ ಸತ್ಯ. ವ್ಯಕ್ತಿಯಲ್ಲಿರುವ ಕೌಶಲ, ಸ್ವಭಾವ, ನಡೆವಳಿಕೆಯೇ ಈಗ ಹೆಚ್ಚು ಪ್ರಸ್ತುತ. ಹಾಗಾಗಿ ಇಂಥ ವ್ಯಕ್ತಿತ್ವ ಪರೀಕ್ಷೆಗಳಿಗೆ ಈಗ ಹೆಚ್ಚು ಮಾನ್ಯತೆ ಇದೆ.

Personality Test: ನೀವು ಕುಳಿತುಕೊಳ್ಳುವ ಭಂಗಿಯಿಂದ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣ ತಿಳಿಯಿರಿ
ಸೌಜನ್ಯ : ಅಂತರ್ಜಾಲ
Follow us on

Sitting Position : ಏನೆಲ್ಲ ಪದವಿಗಳನ್ನು ಗಳಿಸಿದ್ದರೂ ಇಂದಿನ ದಿನಮಾನಗಳಲ್ಲಿ ನಮ್ಮ ವ್ಯಕ್ತಿತ್ವ ಎನ್ನುವುದು ಬಹುಮುಖ್ಯ ಅಂಶವಾಗಿದೆ. ಯಾರು ಎಂಥ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಫೇಸ್ ರೀಡಿಂಗ್ ಅಥವಾ ಮೂಗು ನೋಡಿ ವ್ಯಕ್ತಿತ್ವ ಕಂಡುಹಿಡಿಯುವುದು, ಇಷ್ಟಪಡುವ ಬಣ್ಣಗಳಿಂದ ಸ್ವಭಾವ ಪತ್ತೆ ಹಚ್ಚುವುದು, ರಕ್ತದ ಗುಂಪಿನಿಂದ ವ್ಯಕ್ತಿಯ ಗುಣಲಕ್ಷಣ ಅರಿತುಕೊಳ್ಳುವುದು ಹೀಗೆ. ಪಡೆದ ಸರ್ಟಿಫಿಕೇಟ್​ಗಳಷ್ಟೇ ಉದ್ಯೋಗ ದೊರಕಿಸಿಕೊಡಲಾರವು ಎಂಬುದು ಸದ್ಯದ ಸತ್ಯ. ವ್ಯಕ್ತಿಯಲ್ಲಿರುವ ಕೌಶಲ, ಸ್ವಭಾವ, ನಡೆವಳಿಕೆಯೇ ಈಗ ಹೆಚ್ಚು ಪ್ರಸ್ತುತ. ಹಾಗಾಗಿ ಇಂಥ ವ್ಯಕ್ತಿತ್ವ ಪರೀಕ್ಷೆಗಳಿಗೆ ಜನ ಆಕರ್ಷಿತರಾಗುತ್ತಿದ್ದಾರೆ. ಉದ್ಯೋಗ ಸ್ಥಳದಲ್ಲಿ ಸಂದರ್ಶಕರು ಅಭ್ಯರ್ಥಿಯ ವ್ಯಕ್ತಿತ್ವ ಅರಿತುಕೊಳ್ಳುವಲ್ಲಿ ಇಂಥ ಕ್ರಮಗಳು ಸುಲಭಸಾಧ್ಯವೂ ಆಗುತ್ತಿದೆ. ಇತ್ತೀಚೆಗೆ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಕುಳಿತುಕೊಳ್ಳುವ ಭಂಗಿಯಿಂದ ವ್ಯಕ್ತಿಯ ಆಂತರ್ಯವನ್ನು ಅರಿಯಬಹುದಾಗಿದೆ ಎಂಬ ಶೋಧನೆ ಬೆಳಕಿಗೆ ಬಂದಿದೆ.

1. ನೇರವಾಗಿ ಮೊಣಕಾಲನ್ನಿರಿಸುವುದು (Knees Straight)
ಸಂದರ್ಶನಗಳಲ್ಲಿ ಮೊಣಕಾಲುಗಳನ್ನು ಲಂಬಕೋನಾಕೃತಿಯಲ್ಲಿ ನೇರ ಇರಿಸಿ ಕೂರುವ ವ್ಯಕ್ತಿಗೆ ತನ್ನಲ್ಲಿರುವ ಕೌಶಲ ಮತ್ತು ಕೆಲಸ ಮಾಡುವ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿದೆ ಎಂದರ್ಥ. ಜೊತೆಗೆ ಆರೋಗ್ಯಕರ ಮತ್ತು ಸಕಾರಾತ್ಮಕ ದೃಷ್ಟಿಕೋನವೂ ಇವರಲ್ಲಿ ಇರುವುದರಿಂದ ಅಭದ್ರತೆ ಇವರನ್ನು ಹೆಚ್ಚಾಗಿ ಕಾಡಲಾರದು ಎಂದು ಗ್ರಹಿಸಲಾಗುತ್ತದೆ. ಇಂಥವರು ಬುದ್ಧಿವಂತರು, ತರ್ಕಬದ್ಧವಾಗಿ ಯೋಚಿಸುವವರು, ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ದೈನಂದಿನ ಜೀವನದಲ್ಲಿ ಸಮಯಪ್ರಜ್ಞೆ ಉಳ್ಳವರಾಗಿರುತ್ತಾರೆ. ಯಾವುದೇ ಸ್ಥಳಕ್ಕೆ, ಸಭೆಗೆ ಅಥವಾ ಸಂದರ್ಶನಕ್ಕೆ ತಡವಾಗಿ ಸೂಕ್ತ ಸಮಯದಲ್ಲಿ ಹಾಜರಿರುತ್ತಾರೆ. ಮನೆ, ಕಚೇರಿ ಸ್ಥಳವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುತ್ತಾರೆ. ಸಾಕಷ್ಟು ಪ್ರಾಮಾಣಿಕರಾದ ಇವರು ನೇರವಾಗಿ ಮಾತನಾಡುವ ಸ್ವಭಾವದವರು. ಭಾವನೆಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಇವರು ಯಾವುದೇ ರೀತಿಯ ಸಂಘರ್ಷಕ್ಕೆ ಇಳಿಯರು ಅಥವಾ ಪ್ರತಿಕೂಲ ಸನ್ನಿವೇಶಗಳಲ್ಲಿ ತಾವೇ ಶಾಂತವಾಗಿ ಉಳಿಯುತ್ತಾರೆ.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

2. ಮೊಣಕಾಲುಗಳನ್ನು ಅಗಲಿಸಿ ಕೂರುವುದು (Knees Apart)
ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುವವರು ಸ್ವಯಂ-ಕೇಂದ್ರಿತ ಮನೋಭಾವವನ್ನು ಹೊಂದಿರುತ್ತಾರೆ. ಅಹಂಕಾರಿಯೂ, ಪೂರ್ವಗ್ರಹಿಯೂ, ಇನ್ನೊಬ್ಬರ ಬಗ್ಗೆ ತಕ್ಷಣವೇ ಅಭಿಪ್ರಾಯಕ್ಕೆ ಬರುವವರೂ ಆಗಿರುತ್ತಾರೆ. ಹೆಚ್ಚು ಆತಂಕ, ಭಯ ಮತ್ತು ಚಿಂತೆ ಇವರನ್ನು ಕಾಡುತ್ತಿರುತ್ತದೆ. ಅಸ್ತವ್ಯಸ್ತ ಮನಸ್ಸು, ದಿನಚರಿ ಇವರದ್ದಾಗಿರುತ್ತದೆ. ಏಕಾಗ್ರತೆಯ ಕೊರತೆ ಇರುವುದರಿಂದ ಸರಿಯಾದ ಸಮಯದಲ್ಲಿ ಕೆಲಸವನ್ನು ಮುಗಿಸಲು ಇವರಿಗೆ ಆಗದು. ಆದರೆ ಹೊಸ ವಿಷಯ, ಅನ್ವೇಷಣೆಗಳಲ್ಲಿ ಇವರು ತೀವ್ರ ಆಸಕ್ತಿಯನ್ನು ಹೊಂದಿರುತ್ತಾರೆ.  ವಾಚಾಳಿಯಾಗಿರುವ ಇವರು ಯೋಚಿಸದೆ ಮಾತನಾಡುವುದು ಹೆಚ್ಚು. ಸುಲಭಕ್ಕೆ ಬೇಸರ, ನಿರಾಸೆಗೊಳ್ಳುವ ಇವರಿಗೆ ಸಂಬಂಧ ನಿಭಾವಣೆಯಲ್ಲಿಯೂ ಸಮಸ್ಯೆಯಾಗುತ್ತದೆ. ಸಂಘಟಿತ ವಲಯಗಳಲ್ಲಿ ಕೆಲಸ ಮಾಡಲು ಬೇಕಾದ ಶಿಸ್ತು ರೂಢಿಸಿಕೊಳ್ಳುವು ಇವರಿಗೆ ಕಷ್ಟ.

3. ಕಾಲಿನ ಮಲೆ ಕಾಲು ಹಾಕಿ ಕೂಡುವುದು (Crossed Legs)

ತೆರೆದ ಕಣ್ಣುಗಳಿಂದಲೇ ಕನಸು ಕಾಣುವ ಇವರು ಯಾವಾಗಲೂ ಔಟ್​ ಆಫ್​ ಬಾಕ್ಸ್ ಎಂದರೆ ಸೃಜನಾತ್ಮಕ ಆಲೋಚನೆಗಳಿಂದ ಪುಟಿಯುತ್ತಿರುತ್ತಾರೆ. ಕಾಲ್ಪನಿಕ ಚಿಂತನೆಗಳನ್ನು ಹೊಂದಿರುವ ಇವರು ಮಹಾಕನಸುಗಾರರು. ನೆರೆದ ಗುಂಪಿನಲ್ಲಿಯೂ ತಮ್ಮ ಆಲೋಚನೆಯಲ್ಲಿಯೇ ವಿಹರಿಸುವ ಶಕ್ತಿಯುಳ್ಳವರು. ಇತರರಿಗಿಂತ ವ್ಯಕ್ತಿತ್ವದಲ್ಲಿ ಘನತೆಯುಳ್ಳವರು. ಯಾರ ಮೇಲೂ ಅವಲಂಬಿಸದೆ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುವ ಬಗೆ ಚೆನ್ನಾಗಿ ಗೊತ್ತು. ಹೀಗೆ ಕುಳಿತುಕೊಳ್ಳುವ ಭಂಗಿಯಿಂದ ಅವರಲ್ಲಿರುವ ಭಯ ಮತ್ತು ಅಭದ್ರತೆಯನ್ನು ಮರೆಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆಯಾದರೂ ಅವರ ಪಾದ ಜೊತೆಗಿರುವ ವ್ಯಕ್ತಿಯತ್ತ ತೋರುವಂತಿದ್ದರೆ, ಅವರೊಂದಿಗೆ ನಡೆಯುತ್ತಿರುವ ಸಂಭಾಷಣೆ ಆತ್ಮವಿಶ್ವಾಸ ಮತ್ತು ಆನಂದದಿಂದ ಕೂಡಿದೆ ಎಂದರ್ಥ. ಆದರೆ ಮೈಮುದುಡಿಕೊಂಡು ಕಾಲುಬಿಗಿ ಮಾಡಿಕೊಂಡು ಕುಳಿತಿದ್ದರೆ ಮನಸ್ಸು ಚಡಪಡಿಸುತ್ತಿದೆ ಅಥವಾ ಮನಸ್ಸು ಬೇರೆಡೆ ಇದೆ ಎಂಬುದನ್ನು ಸೂಚಿಸುತ್ತದೆ. ಇನ್ನು ಕಾಲುಗಳು ಬಾಗಿಲಿನೆಡೆ ತೋರಿಸುತ್ತಿದ್ದರೆ ಸಂಭಾಷಣೆಯಲ್ಲಿ ನಿರಾಸಕ್ತಿ ಮೂಡಿದೆ ಅಥವಾ ಎದುರಿನ ವ್ಯಕ್ತಿಯ ಆಲೋಚನೆಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ : Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?

4. ಹಿಮ್ಮಡಿಗಳನ್ನು ಅಡ್ಡವಾಗಿಡುವುದು (Ankle Crossed)

ಹೀಗೆ ಕುಳಿತುಕೊಳ್ಳುವುದು ಬ್ರಿಟಿಷ್ ರಾಜಮನೆತನದಲ್ಲಿ ಸಾಮಾನ್ಯವಾಗಿದ್ದ ಸಂಗತಿ. ಇಂಥವರು ರಾಜರಾಣಿಯಂಥ ಜೀವನಶೈಲಿಯನ್ನು ಹೊಂದಿದ್ದಾರೆ ಎಂದರ್ಥ. ಸ್ವಚ್ಛ ಮನಸಿನವರಾದ ಇವರು ಅತ್ಯಂತ ವಿಧೇಯ, ನಮ್ರ ಸ್ವಭಾವದವರು. ಯಾವುದೇ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳರು. ಭಯ ಇವರಲ್ಲಿ ಅಪರೂಪ. ಇತರರಲ್ಲಿ ಆತ್ಮವಿಶ್ವಾಸ ತುಂಬುವ ಗುಣ ಇವರದು. ಮಾಡುವ ಕೆಲಸದಲ್ಲಿ ಸ್ವಂತ ಆಲೋಚನೆ ಇದ್ದು ತಮ್ಮದೇ ಕ್ರಮದಲ್ಲಿ ಮಾಡಿ ಮುಗಿಸುತ್ತಾರೆ. ಗುರಿಗಳನ್ನು ಸಾಧಿಸಲು ಕಠಿಣಶ್ರಮದಿಂದ ಕೆಲಸ ನಿರ್ವಹಿಸುತ್ತಾರೆ. ಶ್ರಮಜೀವಿಗಳಾದ ಇವರು ದೃಢನಂಬಿಕೆಯುಳ್ಳವರು. ಉತ್ತಮ ಕೇಳುಗರು ಮತ್ತು ಪ್ರತಿಯೊಬ್ಬರ ರಹಸ್ಯವನ್ನೂ ಕಾಪಾಡುವವರು. ತಮ್ಮ ಮುಂದಿನ ಯೋಜನೆಗಳ ವಿಷಯವಾಗಿ ಯಾರ ಬಳಿಯೂ ಹಂಚಿಕೊಳ್ಳರು. ಖಾಸಗೀತನವನ್ನು ಕಾಪಾಡಿಕೊಳ್ಳುವವರು. ಅಶಾಂತಿ ಅಥವಾ ಅಭದ್ರತೆಯನ್ನು ಮರೆಮಾಚುವ ಕೌಶಲವೂ ಇವರಿಗೆ ಗೊತ್ತು.

ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

5: ಮೊಣಕಾಲಿನ ಮೇಲೆ ಪಾದವನ್ನಿಡುವುದು (Leg Lock)
ಹೀಗೆ ಕುಳಿತುಕೊಳ್ಳುವವರು ಆತ್ಮವಿಶ್ವಾಸ ಮತ್ತು ಅಧಿಕಾರಯುತವಾದ ನಡೆ ಹೊಂದಿರುವವರು. ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಹಾಗೆಂದು ಇದಕ್ಕೆ ಲಿಂಗಬೇಧವಿಲ್ಲ. ಇತರರಿಗೆ ಹೋಲಿಸಿದರೆ, ಹೆಚ್ಚು ಪ್ರಬಲ, ಶಾಂತ, ಆತ್ಮವಿಶ್ವಾಸ ಮತ್ತು ತಾರುಣ್ಯವನ್ನು ಹೊಂದಿರುವವರು ಎಂದರ್ಥ. ಅವರ ಬಗ್ಗೆ ಅವರಿಗೆ ತೃಪ್ತಿ ಸುರಕ್ಷತಾ ಭಾವವಿದೆ ಎಂಬುದನ್ನೂ ಈ ಭಂಗಿ ಸೂಚಿಸುತ್ತದೆ. ಏನಾದರೂ ಕೊರತೆ ಅನುಭವಿಸುತ್ತಿದ್ದರೂ ಶಕ್ತಿಮೀರಿ ಅದನ್ನು ನೀಗಿಸಿಕೊಳ್ಳಲು ಪ್ರಯತ್ನಿಸುವ ಮನೋಭಾವ ಅವರಲ್ಲಿರುತ್ತದೆ. ಗುರಿಸಾಧನೆಯಲ್ಲಿ ಅತೀ ಚುರುಕಿ ನಡೆ. ಶಿಕ್ಷಣ, ವೃತ್ತಿ ಮೊದಲ ಆದ್ಯತೆ. ಎಲ್ಲರೂ ಅನುಭವಿಸುವ ಜೀವನದ ಆನಂದದ ವಿಷಯಗಳು ಇವರಲ್ಲಿ ಕಡಿಮೆಯೇ. ಏಕೆಂದರೆ ಯಾವಾಗಲೂ ವೃತ್ತಿಜೀವನದಕ್ಕಾಗಿ ಹೆಚ್ಚು ಶ್ರಮಿಸುವುದೇ ಇವರ ಆದ್ಯತೆ. ಎಲ್ಲವನ್ನೂ ದೈವಿಕದೃಷ್ಟಿಕೋನದಿಂದ ನೋಡುತ್ತಾರೆ. ಇವರ ಡ್ರೆಸ್ಸಿಂಗ್ ಸೆನ್ಸ್​ ಚೆನ್ನಾಗಿರುತ್ತದೆ. ಸ್ಪರ್ಧಾ ಮತ್ತು ವಾದಪ್ರಿಯರು ಇವರು ಆದುದರಿಂದ ತಮ್ಮದೇ ಆದ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವ ಮತ್ತು ಇಷ್ಟವಾಗದ ಅಭಿಪ್ರಾಯಗಳನ್ನು ತಿರಸ್ಕರಿಸುವ ನೇರವಂತಿಕೆ ಇವರದಾಗಿರುತ್ತದೆ.

 

Published On - 11:59 am, Tue, 21 June 22