Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?

Face Reading : ಫೇಸ್​ ರೀಡಿಂಗ್ ತಜ್ಞ ಜೀನ್ ಹ್ಯಾನರ್, ‘ಫೇಸ್ ರೀಡಿಂಗ್ ಮೂಲಕ ವ್ಯಕ್ತಿಯ ಗುಣಲಕ್ಷಣಗಳನ್ನು ಪತ್ತೆಹಚ್ಚಬಹುದು. ಏಕೆಂದರೆ ಮುಖವೇ ತೆರೆದ ಪುಸ್ತಕವಿದ್ದಂತೆ. ನೀವು ಏನು ಯೋಚಿಸುತ್ತೀರಿ? ಸ್ವಭಾವ, ಪ್ರಣಯಾಸಕ್ತಿ, ಅಭಿರುಚಿ, ಸಂಬಂಧಗಳ ನಿಭಾವಣೆ, ಕೌಶಲಗಳನ್ನು ಸ್ವತಃ ಅರ್ಥ ಮಾಡಿಕೊಳ್ಳಬಹುದು.’

Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 15, 2022 | 7:40 PM

Nose Shape Personality Test: ನಮ್ಮ ಮೂಗಿನ ಆಕಾರ ಮತ್ತು ನಮ್ಮ ಆನುವಂಶಿಕ ಇತಿಹಾಸಕ್ಕೂ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳಿಂದ ದೃಢಪಟ್ಟಿದೆ. ವಿಭಿನ್ನ ಜನಾಂಗಗಳ ಮೂಗಿನ ಆಕಾರಗಳನ್ನು ಅರ್ಥೈಸಿಕೊಳ್ಳಲು ತ್ರಿಡಿ ಸ್ಕಾನ್ ಮೂಲಕ ಸಂಶೋಧನೆ, ಅಧ್ಯಯನವನ್ನೂ ನಮ್ಮ ವಿಜ್ಞಾನಿಗಳು ಮಾಡುತ್ತಲೇ ಬಂದಿದ್ದಾರೆ. ಮೂಗಿನ ಹೊಳ್ಳೆಗಳ ಅಗಲ, ಅಂತರ, ಎತ್ತರ, ತುದಿ, ಉದ್ದ, ತುದಿಯ ಚಾಚುವಿಕೆಗೆ ಅನುಗುಣವಾಗಿ ವ್ಯಕ್ತಿಯ ಗುಣಸ್ವಭಾವ, ದೈಹಿಕ ಆರೋಗ್ಯ, ವಯಸ್ಸು ನಿರ್ಧರಿಸುವುದರ ಬಗ್ಗೆ ಪಟ್ಟಿಯನ್ನೇ ಮಾಡಿದ್ದಾರೆ. ಜೊತೆಗೆ ಮನಃಶಾಸ್ತ್ರೀಯ ಒಳನೋಟಗಳನ್ನೂಒದಗಿಸಿದ್ದಾರೆ. ಫೇಸ್​ ರೀಡರ್​ಗಳು ಈ ಅಧ್ಯಯನಗಳ ಮೊರೆ ಹೋಗುವುದು ಸರ್ವೇಸಾಮಾನ್ಯ. ನಿಮ್ಮ ಮೂಗನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಇಲ್ಲಿರುವ ಗುಣಲಕ್ಷಣಗಳು ಹೊಂದುವಂತಿವೆಯೇ ಪರೀಕ್ಷಿಸಿಕೊಳ್ಳಿ. ಹಾಗೆಯೇ ಖ್ಯಾತನಾಮರ ಮೂಗುಗಳನ್ನೊಮ್ಮೆ ಕಣ್ಮುಂದೆ ತಂದುಕೊಂಡು ಅವರ ಗುಣಸ್ವಭಾಗಳ ಬಗ್ಗೆ ಆಲೋಚಿಸಿ. ಆಗ ಇಲ್ಲಿರುವ ಸಂಗತಿಗಳ ನಿಖರತೆಯ ಬಗ್ಗೆ ನಿಮಗೇ ಒಂದು ಅಂದಾಜು ಒದಗುತ್ತದೆ.

ಫೇಸ್​ ರೀಡಿಂಗ್​ ಗೆ ಸಂಬಂಧಿಸಿದ ಸಂಶೋಧನೆಗೆ ಸುಮಾರು 3,000 ವರ್ಷಗಳಷ್ಟು ಇತಿಹಾಸವಿದೆ. ಫೇಸ್​ ರೀಡಿಂಗ್ ತಜ್ಞ, ಲೇಖಕ ಜೀನ್ ಹ್ಯಾನರ್, ‘ಫೇಸ್ ರೀಡಿಂಗ್ ಮೂಲಕ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಪತ್ತೆಹಚ್ಚಬಹುದಾಗಿದೆ. ಏಕೆಂದರೆ ನಿಮ್ಮ ಮುಖವೇ ತೆರೆದ ಪುಸ್ತಕವಿದ್ದಂತೆ. ಒಬ್ಬ ವ್ಯಕ್ತಿಯಾಗಿ ನೀವು ಏನು ಯೋಚಿಸುತ್ತೀರಿ? ನಿಮ್ಮ ಸ್ವಭಾವ ಏನು? ನಿಮ್ಮ ಪ್ರಣಯ, ಅಭಿರುಚಿ, ಸಂಬಂಧಗಳ ನಿಭಾವಣೆ, ಕೌಶಲಗಳನ್ನು ಅರ್ಥ ಮಾಡಿಕೊಳ್ಳಲು ಇದು ಖಂಡಿತ ಸಹಕಾರಿಯಾಗುತ್ತದೆ’ ಎನ್ನುತ್ತಾರೆ.

ಮೂಗಿನ ಆಕಾರಕ್ಕೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

1. ರೋಮನ್ ಮೂಗು (Aquiline)

ನೀವು ರೋಮನ್ ಮೂಗು ಹೊಂದಿದ್ದರೆ, ನಿಮ್ಮದು ಗಟ್ಟಿವ್ಯಕ್ತಿತ್ವ. ಮಹತ್ವಾಕಾಂಕ್ಷಿಗಳಾದ ನೀವು ಸವಾಲುಗಳನ್ನು ಎದುರಿಸುವುದರಲ್ಲಿ ಸಂತೋಷಪಡುತ್ತೀರಿ. ಉತ್ತಮ ನಾಯಕರಾಗುವ ಲಕ್ಷಣಗಳಿವೆ. ನೀವು ಬಯಸಿದ ಗುರಿ ಸಾಧಿಸುವಲ್ಲಿ ಬಹಳೇ ಯೋಚಿಸುತ್ತೀರಿ. ನಿಮ್ಮ ಕಾರ್ಯಸಾಧನೆಯಾಗುವುದು ನೀವು ಮಧ್ಯವಯಸ್ಸನ್ನು ತಲುಪಿದಾಗ. ಆತುರದಿಂದ ನಿರ್ಧಾರ ಕೈಗೊಳ್ಳುವ ಮನೋಭಾವದವರು ನೀವಲ್ಲವಾದ್ದರಿಂದ ನಿಮ್ಮ ಸಾಧನೆಯ ಸಮೃದ್ಧ ಫಲವನ್ನು ನಿಧಾನವಾಗಿ ಸವಿಯಬಲ್ಲಿರಿ. ಎಂಥ ಕಠಿಣ ಪರಿಸ್ಥಿತಿಗಳಲ್ಲಿಯೂ ನೀವು ಸಮಾಧಾನದಿಂದ ಇರುತ್ತೀರಿ. ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿ ತಾರ್ಕಿಕವಾಗಿ ಯೋಚಿಸಿದ ನಂತರವಷ್ಟೇ ಮುಂದಿನ ಹೆಜ್ಜೆ ಇಡುತ್ತೀರಿ. ನಿಮ್ಮ ಸ್ವಂತ ಆಲೋಚನೆಯಂತೆ ನಿಮ್ಮ ಜೀವನವನ್ನು ವಿನ್ಯಾಸಗೊಳಿಸಿಕೊಳ್ಳುತ್ತೀರಿ. ನಿಮ್ಮ ಮಾತುಗಳಿಗೆ ಜನರು ಪ್ರಭಾವಿತರಾಗುತ್ತಾರೆ. ನಿಮ್ಮದೇ ಆದ ಅಭಿಪ್ರಾಯ ಹೊಂದಿರುವ ನೀವು ಇತರರ ಮಾತಿಗೆ ತಲೆದೂಗುವುದಿಲ್ಲ. ಇತರರು ನಿಮ್ಮ ಬಗ್ಗೆ ಯಾವ ಅಭಿಪ್ರಾಯವಿಟ್ಟುಕೊಂಡಿದ್ದಾರೆ ಎನ್ನುವ ಬಗ್ಗೆ ನಿಮಗೆ ಆಸಕ್ತಿ ಇಲ್ಲ. ನಿಮ್ಮ ಗುರಿಸಾಧನೆಯಲ್ಲಿ ಹರ್ಷಚಿತ್ತರಾಗಿ ಸಾಗುತ್ತೀರಿ.

2. ನುಬಿಯನ್ ಮೂಗು (Nubian Nose)

ಅಗಲವಾದ ಮೂಗಿನಾಕಾರವುಳ್ಳವರು ನೀವಾಗಿದ್ದರೆ ಗುಂಪಿನಲ್ಲಿ ಎದ್ದು ಕಾಣುವಂತಹ ವ್ಯಕ್ತಿತ್ವ ನಿಮ್ಮದು.  ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈ ರೀತಿಯ ಮೂಗಿಗೆ ಅತ್ಯುತ್ತಮ ಉದಾಹರಣೆ. ನೀವು ತುಂಬಾ ಮುಕ್ತ ಮನಸ್ಸಿನವರು, ಕುತೂಹಲಿಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಅಂದುಕೊಂಡದ್ದನ್ನು ಸಾಧಿಸಲು ಸದಾ ಸೃಜನಶೀಲ ಮಾರ್ಗವನ್ನು ಹುಡುಕುವಲ್ಲಿ ನಿರತರಾಗಿರುತ್ತೀರಿ. ಆಕರ್ಷಕ ವ್ಯಕ್ತಿತ್ವ ಮತ್ತು ವರ್ಚಸ್ಸಿನಿಂದ ಕೂಡಿದ ನೀವು ನಿಮ್ಮ ಅಭಿಪ್ರಾಯಗಳನ್ನು ಭಾವನಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುತ್ತೀರಿ. ಬಹುಮುಖಿಯಾಗಿ ಯೋಚಿಸುವ ನೀವು ಜೀವನಾನುಭವಗಳ ಮೂಲಕ ಜ್ಞಾನಮಾರ್ಗದಲ್ಲಿ ಚಲಿಸುತ್ತೀರಿ. ನಿಮ್ಮಲ್ಲಿರುವ ಸಂವಹನ ಕಲೆಯಿಂದ ಇತರರು ಬಲುಬೇಗ ನಿಮ್ಮ ಪ್ರಭಾವಕ್ಕೆ ಒಳಗಾಗುತ್ತಾರೆ. ಸೂಕ್ಷ್ಮಗ್ರಾಹಿಗಳಾದ ಮತ್ತು ಸದಾ ಜ್ಞಾನಕ್ಕಾಗಿ ಹಂಬಲಿಸುವ ನಿಮ್ಮನ್ನು ಯಾರೂ ಇಷ್ಟಪಡುತ್ತಾರೆ. ಹಾಗಾಗಿ ಸದಾ ಸಮಾಜಮುಖಿಯಾಗಿ ಚಲಿಸುತ್ತಿರುತ್ತೀರಿ.

ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

3. ನೇರ ಮೂಗು (Straight Nose – Greek) 

ನೀವು ನೇರವಾದ ಮೂಗು ಹೊಂದಿದ್ದರೆ ಉನ್ನತ ಚಿಂತನೆಗಳನ್ನು ಹೊಂದಿದ ಆಕರ್ಷಕ ವ್ಯಕ್ತಿತ್ವವುಳ್ಳವರು. ಸ್ಪಷ್ಟ ಚಿಂತನೆ, ಸಹನೆ, ತಾಳ್ಮೆ, ಸಹಾನುಭೂತಿ, ಸರಳ ಮತ್ತು ವಿಶ್ವಾಸಾರ್ಹ ಗುಣಸ್ವಭಾವಗಳಿಂದ ಜನರ ಮನಸ್ಸಿನಲ್ಲಿ ಉಳಿಯುತ್ತೀರಿ. ದೃಢನಿಶ್ಚಯಿಗಳಾದ ನೀವು ಬದುಕಿಗೆ ಅನುಭವದ ಮೂಲಕ ವಿವೇಚನೆಯಿಂದ ತೆರೆದುಕೊಳ್ಳುತ್ತೀರಿ. ನಿಷ್ಠಾವಂತರಾದ ನೀವು ಸದಾ ನಿಮ್ಮ ಪ್ರೀತಿಪಾತ್ರರ ಸಾನಿಧ್ಯದಲ್ಲಿದ್ದು ನಿಮ್ಮಲ್ಲಿರುವುದನ್ನೆಲ್ಲ ಅವರಿಗೆ ಧಾರೆ ಎರೆಯಲು ಬಯಸುತ್ತೀರಿ. ನಿಮ್ಮ ಇನ್ನೊಂದು ವಿಶೇಷ ಗುಣವೆಂದರೆ ಬದುಕಿನ ರಹಸ್ಯಗಳನ್ನು ಕಾಪಿಟ್ಟುಕೊಳ್ಳುವಂಥ ಬದ್ಧತೆ ನಿಮ್ಮಲ್ಲಿದೆ. ಹಾಗಾಗಿ ಯಾರೂ ತಮ್ಮ ರಹಸ್ಯಗಳನ್ನು ನಿಮ್ಮ ಬಳಿ ಹಂಚಿಕೊಳ್ಳಬಹುದು. ನಿಮ್ಮ ನಂಬಿದವರಿಗೆ ಎಂದೂ ನಂಬಿಕೆ ದ್ರೋಹ ಮಾಡಲಾರಿರಿ.

ನಿಮ್ಮ ಆಹ್ಲಾದಕರ ನೋಟದಿಂದಾಗಿಯೇ ಜನ ನಿಮ್ಮೆಡೆಗೆ ಆಕರ್ಷಿತರಾಗುತ್ತಾರೆ. ಸಭ್ಯ, ಸ್ನೇಹಪರರಾಗಿರುವ ನೀವು ಜನರನ್ನು ನಂಬುವಲ್ಲಿ ನಿಧಾನಿಸುತ್ತೀರಿ ಅಥವಾ ನಿಮ್ಮ ಖಾಸಗಿ ವಿಷಯಗಳನ್ನು ನಿಧಾನವಾಗಿಯೆ ಹಂಚಿಕೊಳ್ಳುತ್ತೀರಿ. ನೀವು ಸೌಂದರ್ಯ ಮತ್ತು ಕಲೆಯ ವಿಷಯದಲ್ಲಿ ಆಸಕ್ತಿ, ಪರಿಣಿತರಾಗಿರುವ ಸಾಧ್ಯತೆಯಿದೆ. ಹಾಗಾಗಿ ಈ ಮೂಗಿನ ಆಕಾರ ಹೊಂದಿರುವ ಪುರುಷರು, ಮಹಿಳೆಯರು ಮಾಧ್ಯಮ, ಆಪ್ತಕಾರ್ಯದರ್ಶಿ, ಮಾಡೆಲಿಂಗ್ ಅಥವಾ ಕಲಾತ್ಮಕ ವೃತ್ತಿಜೀವನದಂತಹ ಉದ್ಯೋಗಗಳಲ್ಲಿ ಹೆಚ್ಚು ತೊಡಗಿಕೊಂಡಿರುತ್ತಾರೆ.

Face Reading Nose and Personality test

ನಿಮ್ಮ ಮೂಗು ಯಾವುದೆಂದು ಗುರುತಿಸಿಕೊಳ್ಳಿ

4. ವಕ್ರ ಮೂಗು (Crooked Nose) 

ನೀವು ವಕ್ರ ಮೂಗು ಹೊಂದಿದ್ದರೆ, ವಕ್ರ ಪದಕ್ಕೆ ಸಂಪೂರ್ಣವಾಗಿ ವಿರುದ್ಧ ವ್ಯಕ್ತಿತ್ವ! ನೀವು ಅತ್ಯಂತ ಸರಳ ಮತ್ತು ನೇರ ವ್ಯಕ್ತಿ. ನೀವು ಸ್ಥಿರ ಮನಸ್ಥಿತಿ ಮತ್ತು ಔದಾರ್ಯವುಳ್ಳವರು. ನಿಮ್ಮಲ್ಲಿ ಸಮಾಧಾನದಿಂದ ಆಲಿಸುವ, ವೀಕ್ಷಿಸುವ ಗುಣವಿದೆ. ಯಾವುದೇ ವ್ಯಕ್ತಿ, ಗುಂಪಿನ ಬಗ್ಗೆ ತೀರ್ಪು ಕೊಡುವ ಬದಲು ಅವರನ್ನು ಅರ್ಥ ಮಾಡಿಕೊಳ್ಳುವತ್ತ ಗಮನ ಕೊಡುತ್ತೀರಿ. ನಿಮ್ಮ ಸದ್ಗುಣಗಳು, ಜೀವನದ ಉತ್ತಮ ಮೌಲ್ಯಗಳು ಬಲವಾಗಿ ನಿಮ್ಮಲ್ಲಿ ಬೇರೂರಿರುವುದರಿಂದ ನೀವೊಬ್ಬ ಉತ್ತಮ ಒಡನಾಡಿ, ಸ್ನೇಹಿತರು ಮತ್ತು ಪೋಷಕರಾಗಿರುತ್ತೀರಿ. ಶಾಂತವಾಗಿ ಆಲೋಚಿಸಿ ನಿರ್ಧಾರಕ್ಕೆ ಬರುವ ನೀವು ಸಾರ್ವಜನಿಕ ವಲಯಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹಠಮಾರಿಯಂತೆ ಕಾಣಿಸಬಹುದು.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

5. ಪುಟ್ಟ ದಪ್ಪ ಮೂಗು (Fleshy Nose) 

ನೀವು ವೇಗವಾಗಿ ಆಲೋಚಿಸಬಲ್ಲಿರಿ. ಬುದ್ಧಿವಂತ, ಸಂವೇದನಾಶೀಲ ವ್ಯಕ್ತಿತ್ವ ಹೊಂದಿದ್ದೀರಿ ಮತ್ತು ಪ್ರಜ್ಞಾವಂತರಾಗಿದ್ದೀರಿ. ದಯೆ, ಉದಾರಗುಣವನ್ನು ಹೊಂದಿದ ನೀವು ಭಾವನಾಜೀವಿಗಳು. ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರು ಮಾತ್ರ ನಿಮ್ಮ ಈ ಸ್ವಭಾವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಊಹಾಪೋಹದಂಥ ಸುದ್ದಿಗಳಿಂದ ನೀವು ದೂರವಿರುತ್ತೀರಿ ಆದಾಗ್ಯೂ ನಿಮ್ಮಲ್ಲಿ ಕುತೂಹಲ ಇದ್ದೇ ಇರುತ್ತದೆ. ಆ ಪ್ರಕಾರ ಶರವೇಗದಲ್ಲಿ ಆಲೋಚಿಸುವ ಸಾಮರ್ಥ್ಯವೂ ನಿಮ್ಮಲ್ಲಿರುತ್ತದೆ. ಹಾಗಾಗಿ ಶೀಘ್ರಗತಿಯಲ್ಲಿ ಕೆಲಸಗಳನ್ನು ನಿರ್ವಹಿಸುತ್ತೀರಿ. ಇದರಿಂದಾಗಿ ನೀವು ಇತರರಿಗೆ ಆಕ್ರಮಣಕಾರಿ ಎಂದೂ ಅನ್ನಿಸಬಹುದು. ನೀವು ಸಕಾರಾತ್ಮಕ ಅಂಶಗಳತ್ತ ಹೆಚ್ಚು ಗಮನ ಹರಿಸುವುದರಿಂದ ಯಾವುದೇ ಕ್ಷುಲ್ಲಕ ವಿಷಯಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಲಾರಿರಿ. ಕಡಿಮೆ ಸಮಯದಲ್ಲಿ ಹೆಚ್ಚು ಚಲಿಸುವುದರೆಡೆ ನಿಮ್ಮ ಒಲವಿರುತ್ತದೆ. ಸಾರ್ವಜನಿಕವಾಗಿ ನೀವು ಕಟುವ್ಯಕ್ತಿತ್ವ ಹೊಂದಿದವರು ಎಂದೆನ್ನಿಸಿದರೂ ನಿಮ್ಮಲ್ಲಿ ಕಾಳಜಿ, ನಿಷ್ಠೆ ಅಪಾರವಾಗಿದೆ. ಸಿಹಿಯಾದ ಸುಳ್ಳನ್ನು ಹೇಳದ ನೀವು ಸದಾ ಸತ್ಯವನ್ನೇ ನುಡಿಯುತ್ತೀರಿ.

6. ಬಟನ್ ಮೂಗು (Butten Nose)

ನೀವು ಬಟನ್ ಮೂಗು ಹೊಂದಿದ್ದರೆ ಇಡೀ ಜಗತ್ತಿನಲ್ಲಿಯೇ ಮನಮೋಹಕವಾದ ಮೂಗಿನಾಕಾರ ನಿಮ್ಮದು. ನಿಮ್ಮ ಇಡೀ ವ್ಯಕ್ತಿತ್ವವೇ ಮುದ್ದಾದದ್ದು. ನಿಮ್ಮಲ್ಲಿ ಬಲವಾದ ಇಚ್ಛಾಶಕ್ತಿ ಇದೆ. ದೃಢನಿಶ್ಚಯದಿಂದ ಕೂಡಿದ ಸ್ವಭಾವ ನಿಮ್ಮದು. ಸಹಜತತ್ವವನ್ನು ನಂಬುವ ನೀವು ಬದುಕಿನ ಬಗ್ಗೆ ಹೆಚ್ಚು ಆಶಾವಾದಿಯಾಗಿರುತ್ತೀರಿ. ಎಂದೂ ನೀವು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಕೊಂಡಿರುತ್ತೀರಿ ಆದ್ದರಿಂದ ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವ ಕಲೆ ನಿಮಗೆ ಸಿದ್ಧಿಸಿರುತ್ತದೆ. ಹಾಗಾಗಿ ನೀವು ರೂಪಿಸುವ ಯೋಜನೆಗಳಲ್ಲಿ ನಿಖರತೆ ಇರುತ್ತದೆ. ಅದು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಹಿಡಿದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಸಮರ್ಥರು. ನೀವು ಪ್ರತಿಯೊಬ್ಬರನ್ನು ಆಪ್ತವಾಗಿ ಒಳಗೊಳ್ಳುತ್ತೀರಿ. ಅವರ ಆಂತರ್ಯವನ್ನು ಗ್ರಹಿಸುತ್ತೀರಿ. ಅವರ ಒಡನಾಟದಿಂದ ನಿಮಗೆ ಬೇಕಾಗಿರುವುದನ್ನೂ ಪಡೆಯುತ್ತೀರಿ ಏಕೆಂದರೆ ನಿಮ್ಮ ನಿಷ್ಠೆ ಮತ್ತು ಸ್ನೇಹಪರಭಾವವೇ ಇದಕ್ಕೆ ಕಾರಣ. ನಿಮ್ಮ ಪ್ರೀತಿಪಾತ್ರರಿಗೆ ಸಹಾಯ ಮಾಡುವಲ್ಲಿ ನೀವು ಶಕ್ತಿಮೀರಿ ಪ್ರಯತ್ನಿಸುತ್ತೀರಿ. ಹಾಗಾಗಿ ಅವರ ನೋವನ್ನೂ ನೀವು ಒಳಗೆಳೆದುಕೊಂಡು ಅವರಿಗೆ ಒಳಿತು ಬಯಸುವ ಮನೋಭಾವವನ್ನು ಹೊಂದಿರುತ್ತೀರಿ.

ಇದನ್ನೂ ಓದಿ : Personality Development: ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

7. ಗಿಡುಗ ಮೂಗು (Hawk Nose)

ಈ ಆಕಾರದ ಮೂಗು ಹೊಂದಿದ್ದರೆ ನೀವು ಮಹತ್ವಾಕಾಂಕ್ಷೆ, ಸ್ವಾತಂತ್ರ್ಯ ಬಯಸುವ ವ್ಯಕ್ತಿ. ನಾಯಕತ್ವ ಪ್ರಜ್ಞೆ ನಿಮ್ಮಲ್ಲಿ ಅಪಾರವಾಗಿದೆ. ತೀಕ್ಷ್ಣಮತಿಗಳಾದ ನೀವು ಜ್ಞಾನದ ಹಿಂಬಾಲಕರು. ಅವಕಾಶಗಳನ್ನು ಗುರುತಿಸುವಲ್ಲಿ ನಿಮ್ಮದು ಹದ್ದಿನ ಕಣ್ಣು. ನೀವು ಆಧ್ಯಾತ್ಮಿಕ ವಿಷಯಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತೀರಿ. ಯಶಸ್ಸಿನ ಮಾರ್ಗದಲ್ಲಿ ಚಲಿಸಲು ನೀವು ನಿಮ್ಮ ಸ್ವಂತ ಮಾರ್ಗವನ್ನೇ ಅನುಸರಿಸಿ ಯಶಸ್ಸು ಪಡೆಯುತ್ತೀರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ ಕೆಲವೊಮ್ಮೆ ಇತರರಿಗೆ ಹಠಮಾರಿತನ ಅನ್ನಿಸಬಹುದು. ವೃತ್ತಿಜೀವನದಲ್ಲಿ ಸಾಕಷ್ಟು ಏಳ್ಗೆ ಇದೆ. ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವ ನೀವು ವೃತ್ತಿಜೀವನದಲ್ಲಿ ಬಲು ಎತ್ತರಕ್ಕೇರುತ್ತೀರಿ. ಯಾವುದೇ ಅಪಾಯಗಳಿಗೆ ತೆರೆದುಕೊಳ್ಳಲು ನೀವು ಹೆದರುವುದಿಲ್ಲ. ನಿರ್ಭಯದಿಂದ ನಿಮ್ಮ ಅಭಿಪ್ರಾಯವನ್ನು ಹೇಳುತ್ತೀರಿ, ಸಮರ್ಥಿಸಿಕೊಳ್ಳುತ್ತೀರಿ. ನಿಮ್ಮ ಆತ್ಮವಿಶ್ವಾಸದಿಂದಲೇ ನೀವು ಎಲ್ಲರ ನಡುವೆ ಎದ್ದುಕಾಣುತ್ತೀರಿ. ಶೈಕ್ಷಣಿಕವಾಗಿ ಮತ್ತು ವ್ಯಾಪಾರೋದ್ಯಮಗಳಲ್ಲಿ ಅತಿವೇಗದಲ್ಲಿ ಯಶಸ್ಸು ಸಾಧಿಸುತ್ತೀರಿ.

8. ಚಿಕ್ಕ ಮೂಗು (Snub Nose)

ಚಿಕ್ಕಮೂಗಿದ್ದು ಮೂಗಿನ ಹೊಳ್ಳೆಗಳು ಮೇಲ್ಮುಖವಾಗಿ ತೋರುತ್ತಿದ್ದರೆ ನೀವು ಸಾಮಾಜಿಕವಾಗಿ ಹೆಚ್ಚು ತೊಡಗಿಕೊಳ್ಳುವ ವ್ಯಕ್ತಿತ್ವದವರು ಎಂಬರ್ಥ. ನೀವಿರುವ ಗುಂಪಿನಲ್ಲಿ ನೀವು ಚೆನ್ನಾಗಿ ಹೊಂದಿಕೊಂಡು ಆಯಾ ಗುಂಪಿನ ನಿಯಮಾವಳಿಗಳನ್ನು ಪಾಲಿಸಿಕೊಂಡು ಹೋಗುತ್ತೀರಿ. ಇಂಥ ಮೂಗುಳ್ಳ ನೀವು ಮುದ್ಧಾಗಿ ಕಾಣುತ್ತೀರಿ. ಸದಾ ಖುಷಿ, ಪ್ರೀತಿ ನಿಮ್ಮ ಮುಖದಲ್ಲಿ ತುಳುಕುತ್ತಿರುತ್ತದೆ. ಸೃಜನಶೀಲತೆಯಿಂದ ನಿಮ್ಮ ಗುರಿಗಳನ್ನು ತಲುಪಲು ಪ್ರಯತ್ನಿಸುತ್ತೀರಿ. ನಿರಾತಂಕ ಮನಸ್ಥಿತಿಯವರಾದ ನೀವು ಕೆಲವೊಮ್ಮೆ ಪ್ರಬುದ್ಧತೆ ವಿಷಯವಾಗಿ ತೊಂದರೆ ಅನುಭವಿಸಬಹುದು. ಇದರರ್ಥ ನೀವು ಆಂತರಿಕವಾಗಿ ಮಗುವಿನಂಥ ಸ್ವಭಾವದವರು. ಕೆಲವೊಮ್ಮೆ ಅಸಹನೆಯನ್ನು, ಹತಾಶೆಯನ್ನು ಸುಲಭವಾಗಿ ವ್ಯಕ್ತಪಡಿಸಿಬಿಡುತ್ತೀರಿ. ಆಗ ಅಪರೂಪಕ್ಕೆ ಕೋಪ ಸ್ಫೋಟಗೊಳ್ಳಬಹುದು.

9. ದೊಡ್ಡ ಮೂಗು (Big Nose) 

ನೀವು ದೊಡ್ಡ ಮೂಗು ಮತ್ತು ದೊಡ್ಡ ಹೊಳ್ಳೆಗಳನ್ನು ಹೊಂದಿದ್ದರೆ ನೀವು ಸ್ವಂತಿಕೆಗೆ ಹೆಚ್ಚು ಪ್ರಾಮುಖ್ಯ ಕೊಟ್ಟುಕೊಳ್ಳುತ್ತೀರಿ. ಬೇರೆಯವರ ಇಚ್ಛೆಯಂತೆ ಕೆಲಸ ಮಾಡುವುದೆಂದರೆ ನಿಮಗಾಗದು. ಇತರರ ಆದೇಶಗಳನ್ನು ನೀವು ಪಾಲಿಸಲಾರಿರಿ. ಶಕ್ತಿ, ನಾಯಕತ್ವ, ಅಹಂಕಾರ ಮತ್ತು ಸ್ವಾತಂತ್ರ್ಯವನ್ನು ನೀವು ಪ್ರತಿನಿಧಿಸುತ್ತೀರಿ ಎನ್ನುವುದು ಹಲವಾರು ಅಧ್ಯಯನಗಳಿಂದ ದೃಢಪಟ್ಟಿದೆ. ನೀವು ಸಣ್ಣತನಗಳ ಬಗ್ಗೆ ಯೋಚಿಸಲಾರಿರಿ. ನಿಮ್ಮ ಆತ್ಮಗೌರವನ್ನು ಸಮ್ಮಾನಿಸುವ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಕೊಳ್ಳುತ್ತೀರಿ. ಇತರರನ್ನು ಅವಲಂಬಿಸದ ನೀವು, ನಿಮ್ಮ ಹಾದಿಯನ್ನು ನೀವೇ ರೂಪಿಸಿಕೊಳ್ಳುತ್ತೀರಿ. ನೀವು ಸದಾ ಪರಿಪೂರ್ಣತೆಯೆಡೆ ತುಡಿಯುತ್ತಿರುತ್ತೀರಿ. ನೀವು ಕೆಲಸದಲ್ಲಿ ಚಿಕ್ಕಚಿಕ್ಕ ವಿಷಯಗಳಿಗೂ ಪ್ರಾಮುಖ್ಯ ಕೊಡುತ್ತೀರಾದ್ದರಿಂದ ಹೆಚ್ಚಿನ ಸಮಯ ವ್ಯಯಿಸುತ್ತೀರಿ. ತತ್ಪರಿಣಾಮ ಅದು ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ನಿಮ್ಮ ಸುತ್ತಮುತ್ತಲಿರುವ ಜನರ ಬಗ್ಗೆ ನಿಮಗೆ ಅನುಕಂಪ ಹೆಚ್ಚು. ವಾಸ್ತವದಲ್ಲಿ ಅವರು ನಿಮ್ಮ ಸಮರ್ಥ ಆಲೋಚನೆಗಳ ಪ್ರಭಾವಗಳಿಗೆ ಒಳಗಾಗುತ್ತಾ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಿರುತ್ತಾರೆ. ನಿಮ್ಮ ಆದಾಯಮೂಲವೂ ಸ್ಥಿರವಾಗಿದೆ. ಹಣ ನಿರ್ವಹಣೆ ನಿಮಗೆ ಚೆನ್ನಾಗಿ ಗೊತ್ತು.

Published On - 7:30 pm, Wed, 15 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ