
ಪ್ರತಿಯೊಬ್ಬರಿಗೂ ಕೂಡ ಒಂದೊಂದು ಅಭ್ಯಾಸಗಳು (Habits) ಇದ್ದೇ ಇರುತ್ತವೆ. ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇದ್ರೆ, ಇನ್ನೂ ಕೆಲವರಿಗೆ ಪದೇ ಪದೇ ತಲೆಗೂದಲನ್ನು ಸರಿ ಮಾಡಿಕೊಳ್ಳುವ ಅಭ್ಯಾಸ ಇರುತ್ತದೆ. ಮತ್ತೂ ಕೆಲವರಿಗೆ ಜೇಬಿನಲ್ಲಿ ಕೈ ಇಟ್ಟುಕೊಳ್ಳುವಂತಹ, ಪದೇ ಪದೇ ಕನ್ನಡಿ ನೋಡುವಂತಹ ಅಭ್ಯಾಸ ಇರುತ್ತದೆ. ನಿಮ್ಮ ಈ ಅಭ್ಯಾಸಗಳ ಮೂಲಕವೂ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿಯಬಹುದಂತೆ. ಹೌದು ದೇಹಕಾರ, ಹಸ್ತರೇಖೆ, ದೇಹ ಭಾಷೆಯ ಮೂಲಕ ವ್ಯಕ್ತಿತ್ವವನ್ನು (Personality) ತಿಳಿಯುವಂತೆ, ಜೇಬಿನಲ್ಲಿ ಕೈಯಿಟ್ಟುಕೊಳ್ಳುವ ಅಭ್ಯಾಸದ ಮೂಲಕವೂ ನಿಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ತಿಳಿಯಬಹುದು. ಇದು ಕೇವಲ ಫ್ಯಾಷನ್ ಮಾತ್ರವಲ್ಲ, ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುವ ಸಾಧನವೂ ಹೌದು. ನಿಮಗೂ ಜೇಬಿನಲ್ಲಿ ಕೈ ಇಟ್ಟುಕೊಳ್ಳುವ ಅಭ್ಯಾಸ ಇದ್ರೆ, ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.
ಸುರಕ್ಷಿತ ಭಾವನೆ: ಗುಂಪಿನಲ್ಲಿರುವಾಗ ಅಥವಾ ಸಂಭಾಷಣೆಯ ಸಮಯದಲ್ಲಿ ಕೆಲವರು ತಮ್ಮ ಕೈಗಳನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಏಕೆಂದರೆ ಸಾಮಾಜಿಕ ಅನಾನುಕೂಲಗಳ ಸಂದರ್ಭದಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವ ಹಾಗೂ ತಮ್ಮನ್ನು ಶಾಂತಗೊಳಿಸುವ ಸಲುವಾಗಿ ಜೇಬಿನಲ್ಲಿ ಕೈ ಇಟ್ಟುಕೊಳ್ಳುತ್ತಾರೆ.
ಆತ್ಮವಿಶ್ವಾಸ: ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಎಲ್ಲಾ ಸಂದರ್ಭದಲ್ಲೂ ಅಭದ್ರತೆಯ ಭಾವನೆಯನ್ನು ಪ್ರದರ್ಶಿಸುವುದಿಲ್ಲ. ಕೆಲವರು ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಸಲುವಾಗಿಯೂ ಜೇಬಿನಲ್ಲಿ ಕೈ ಇಟ್ಟುಕೊಳ್ಳುತ್ತಾರೆ.
ರಹಸ್ಯ ಅಥವಾ ಮೀಸಲು ಸ್ವಭಾವ: ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಕೆಲವೊಮ್ಮೆ ನೀವು ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಸೂಚಿಸುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಮುಚ್ಚಿಡಲು ಮತ್ತು ಅಗತ್ಯವಿರುವುದನ್ನು ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ. ಈ ನೀವು ಅಭ್ಯಾಸವು ಮೀಸಲು ಸ್ವಭಾವದ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುತ್ತದೆ
ನಿರಾಳ ಭಾವ: ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದು ಇದು ಯಾವಾಗಲೂ ನಕಾರಾತ್ಮಕ ಸಂಕೇತವಲ್ಲ. ಇದು ನಿರಾಳ ಭಾವದ ಸಂಕೇತವೂ ಆಗಿದೆ. ಇಂತಹ ಜನರು ಯಾವುದೇ ಒತ್ತಡವಿಲ್ಲದೆ ಜೀವನವನ್ನು ಹಗುರವಾಗಿ, ನಿರಾಳವಾಗಿ ನಡೆಸಲು ಬಯಸುತ್ತಾರೆ ಎಂದರ್ಥ.
ಅನಾನುಕೂಲತೆಯ ಅನುಭವ: ಕೆಲವರು ತಮಗೆ ಅನಾನುಕೂಲತೆಯ ಅನುಭವವಾದಗಲೂ ತಮ್ಮ ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ