AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duologue NXT with Kanika Tekriwal: ಕ್ಯಾನ್ಸರ್‌ ಗೆದ್ದು ಸಾಧನೆಯ ಶಿಖರವನ್ನೇರಿದ ಕನಿಕಾ ಟೆಕ್ರಿವಾಲ್‌ ಎಲ್ಲರಿಗೂ ಸ್ಪೂರ್ತಿ

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಸರಣಿಯ ಹೊಸ ಆವೃತ್ತಿಯಾಗಿರುವಂತಹ ಡ್ಯುಯೊಲಾಗ್ NXT ಎಂಬ ಹೊಸ ಕಾರ್ಯಕ್ರಮ ಈಗಾಗಲೇ ಚಾಲನೆ ಸಿಕ್ಕಿದೆ. ಇದೊಂದು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಬಗೆಗಿನ ಪಾಡ್‌ಕ್ಯಾಸ್ಟ್ ಕಾರ್ಯಕ್ರಮವಾಗಿದೆ. ಈ ಸಂಚಿಕೆಯಲ್ಲಿ ಕ್ಯಾನ್ಸರ್‌ ಗೆದ್ದು, ಜೆಟ್‌ಸೆಟ್‌ಗೋ ಎಂಬ ಸ್ಟಾರ್ಟ್‌ಅಪ್ ಕಂಪೆನಿ ಸ್ಥಾಪಿಸಿ ಸಾಧನೆಯ ಶಿಖರವನ್ನೇರಿದ ಕನಿಕಾ ಟೆಕ್ರಿವಾಲ್‌ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

Duologue NXT with Kanika Tekriwal: ಕ್ಯಾನ್ಸರ್‌ ಗೆದ್ದು ಸಾಧನೆಯ ಶಿಖರವನ್ನೇರಿದ ಕನಿಕಾ ಟೆಕ್ರಿವಾಲ್‌ ಎಲ್ಲರಿಗೂ ಸ್ಪೂರ್ತಿ
ಡ್ಯುಯೊಲಾಗ್ NXT
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 25, 2025 | 3:09 PM

Share

ಡ್ಯುಯೊಲಾಗ್ ವಿತ್ ಬರುಣ್ ದಾಸ್’ ನ ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿವೆ. ಇದೀಗ ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಸರಣಿಯ ಹೊಸ ಆವೃತ್ತಿಯಾಗಿರುವಂತಹ ಡ್ಯುಯೊಲಾಗ್ NXT (Duologue NXT)  ಎಂಬ ಹೊಸ ಕಾರ್ಯಕ್ರಮ ಆರಂಭವಾಗಿದ್ದು, ಇದೊಂದು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಪಾಡ್‌ಕ್ಯಾಸ್ಟ್ ಕಾರ್ಯಕ್ರಮವಾಗಿದೆ. ಈ ಸರಣಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ಗೆದ್ದು, ಜೆಟ್‌ಸೆಟ್‌ಗೋ ಎಂಬ ಸ್ಟಾರ್ಟ್‌ಅಪ್ ಕಂಪೆನಿ ಸ್ಥಾಪಿಸಿ ಸಾಧನೆಯ ಶಿಖರವನ್ನೇರಿದ ಕನಿಕಾ ಟೆಕ್ರಿವಾಲ್‌ ಕೂಡ ಭಾಗವಹಿಸಿದ್ದು, ಅವರು ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.  ಡ್ಯುಯೊಲಾಗ್ NXT ನ ಈ ಹೊಸ ಸಂಚಿಕೆ ಇಂದು ರಾತ್ರಿ ಪ್ರಸಾರವಾಗಲಿದೆ.

ಎತ್ತರಕ್ಕೆ ಹಾರುವುದು ಅವರ ಡಿಎನ್‌ಎಯಲ್ಲಿದೆ:

ಕನಿಕಾ ಟೆಕ್ರಿವಾಲ್ ಅವರ ಜೀವನದ ಸ್ಪೂರ್ತಿದಾಯಕ ಕಥೆಯ ಈ ಕಥಾ ಸಂಚಿಕೆಯು ಇಂದು ರಾತ್ರಿ 10:30 ಕ್ಕೆ ನ್ಯೂಸ್ 9 ನಲ್ಲಿ ಪ್ರಸಾರವಾಗಲಿದೆ. ಕಷ್ಟಗಳನ್ನು ನಾವೀನ್ಯತೆಗಳಾಗಿ ಪರಿವರ್ತಿಸುವುದರ ಬಗೆಗಿನ ಸಂಚಿಕೆ ಇದಾಗಿದೆ. ಹೌದು ಪೈಲಟ್ ಆಗುವ ಕನಸು ಕಂಡ ಹದಿಹರೆಯದ ಯುವತಿಯೋರ್ವಳು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ, ಆ ರೋಗವನ್ನು ಜಯಿಸಿ, ಬಳಿಕ ಖಾಸಗಿ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದಾಗ ಎಲ್ಲರ ಅಪಹಾಸ್ಯಕ್ಕೊಳಗಾಗಿ, ಇದ್ಯಾವುದಕ್ಕೂ ಜಗ್ಗದೆ ಸವಾಲುಗಳ ಸರಣಿಯನ್ನು ಜಯಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿರುವ ಕನಿಕಾ ಟೆಕ್ರಿವಾಲ್‌ ಅವರ ಜೀವನದ ಸ್ಪೂರ್ತಿದಾಯಕ ಕಥೆ ಇದಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಕ್ಯಾನ್ಸರ್‌ನೊಂದಿಗಿನ ಹೋರಾಟ, ಕಂಪನಿಗಳಿಂದ ನಿರಾಕರಣೆ, ತನ್ನದೇ ಆದ ಖಾಸಗಿ ವಿಮಾನಯಾನ ಕಂಪನಿಯನ್ನು ಪ್ರಾರಂಭಿಸುವ ಯೋಜನೆಗೆ ಹಲವು ಟೀಕೆ ಈ ಪ್ರತಿಯೊಂದು ಅಡೆತಡೆಗಳು, ನಿರಾಕರಣೆಗಳನ್ನು ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಂಡು ಜೆಟ್‌ಸೆಟ್‌ಗೋ ಎಂಬ ವಾಯುಯಾನ ಕಂಪೆನಿ ಪ್ರಾರಂಭಿಸಿ, ಇಂದು ಕನಿಕಾ ಸಾಧನೆಯ ಶಿಖರವನ್ನೇರಿದ್ದಾರೆ. ಕನಿಕಾ ತನ್ನದೇ ಆದ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ಪ್ರತಿಕೂಲತೆಯನ್ನು ಸಹ ಅವಕಾಶವನ್ನಾಗಿ ಪರಿವರ್ತಿಸಿಕೊಂಡು, ಅವಮಾನಗಳನ್ನೆಲ್ಲಾ ಎದುರಿಸಿ ಜೆಟ್‌ಸೆಟ್‌ಗೋ ಎಂಬ ವಾಯುಯಾನ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇಂದು, ಜೆಟ್‌ಸೆಟ್‌ಗೋ ದೇಶದ ಅತಿದೊಡ್ಡ ವಾಯುಯಾನ ಕಂಪನಿಗಳಲ್ಲಿ ಒಂದಾಗಿದ್ದು, ಇದು STOL (ಶಾರ್ಟ್ ಟೇಕ್‌ಆಫ್, ಲ್ಯಾಂಡಿಂಗ್), eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್, ಲ್ಯಾಂಡಿಂಗ್) ವಿಮಾನಗಳನ್ನು ಅಭಿವೃದ್ಧಿಪಡಿಸುವವರೆಗೆ, ಭಾರತವನ್ನು ವಿಮಾನ ತಯಾರಿಕೆಯ ಕೇಂದ್ರವನ್ನಾಗಿ ಮಾಡುವತ್ತ ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ: ಬಯಸಿದ ಗುರಿ ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ; ಜಾಗತಿಕ ತಾರೆ ರೋನಾ-ಲೀ ಶಿಮೊನ್

“ಸ್ಥಿತಿಸ್ಥಾಪಕತ್ವ ಮತ್ತು ಪರಿಶ್ರಮ ಯಾವಾಗಲೂ ಸಂದರ್ಭಗಳನ್ನು ಮೀರಿಸುತ್ತದೆ ಕ್ಯಾನ್ಸರ್‌ನಿಂದ, ಟೀಕಾಕಾರರಿಂದ, ಬದಲಾವಣೆಯನ್ನು ವಿರೋಧಿಸಿದ ಉದ್ಯಮದಿಂದ ನಾನು ಕೇಳಿದ ಸಂದೇಶ… ನಿನ್ನಿಂದ ಸಾಧ್ಯವಿಲ್ಲ ಎಂಬುದು. ಆದರೆ ಇದೇ ಮಾತುಗಳು ಜೀವನದಲ್ಲಿ ಸಾಧಿಸುವ ನನ್ನ ಹುಮ್ಮಸ್ಸನ್ನು ಹೆಚ್ಚಿಸಿತು” ಎಂದು ಕನಿಕಾ ತಮ್ಮ ಜೀವನಗಾಥೆಯನ್ನು ಬರುನ್ ದಾಸ್‌ ಜೊತೆ ಹಂಚಿಕೊಳ್ಳುತ್ತಾರೆ.

“ಉದ್ಯಮಿ ಉದ್ಯಮಿಯೇ. ನಾಯಕ ನಾಯಕನೇ. ನಾವು ‘ವರ್ಷದ ಮಹಿಳಾ ಉದ್ಯಮಿ’ ಯಂತಹ ಲೇಬಲ್‌ಗಳನ್ನು ಅಂಟಿಸುವುದನ್ನು ನಿಲ್ಲಿಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಎಲ್ಲರಿಗೂ ಸಮಾನ ಅವಕಾಶವನ್ನು ಸೃಷ್ಟಿಸುವ ಸಮಯ ಇದು.” ಎಂದು ಕನಿಕಾ ಹೇಳುತ್ತಾರೆ.

ಕನಿಕಾ ಟೆಕ್ರಿವಾಲ್ ಅವರೊಂದಿಗೆ ಡ್ಯುಯೊಲಾಗ್ NXT ಪಾಡ್‌ಕ್ಯಾಸ್ಟ್‌ನ ಪೂರ್ಣ ಸಂಚಿಕೆಯನ್ನು ಸೆಪ್ಟೆಂಬರ್ 24 ರಂದು ರಾತ್ರಿ 10:30 ಕ್ಕೆ ನ್ಯೂಸ್ 9 ನಲ್ಲಿ ವೀಕ್ಷಿಸಿ. ನೀವು ಈ ವೀಡಿಯೊವನ್ನು ಡ್ಯುಯೊಲೊಗ್ (@Duologuewithbarundas) ಯೂಟ್ಯೂಬ್ ಚಾನೆಲ್‌ನಲ್ಲಿಯೂ ವೀಕ್ಷಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Wed, 24 September 25