AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duologue NXT: ಬಯಸಿದ ಗುರಿ ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ; ಜಾಗತಿಕ ತಾರೆ ರೋನಾ-ಲೀ ಶಿಮೊನ್

'ಡ್ಯುಯೊಲಾಗ್ ವಿತ್ ಬರುಣ್ ದಾಸ್' ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿದ್ದವು. ಇದೀಗ ಡ್ಯುಯೊಲಾಗ್ NXT ಎಂಬ ಹೊಸ ಆವೃತ್ತಿ ಆರಂಭವಾಗಿದ್ದು, ಇದರ ಮೊದಲ ಕಂತಿನಲ್ಲಿ ಭಾಗವಹಿಸಿದ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಸಾಧನೆಯ ಶಿಖರವನ್ನೇರುವಾಗ ಎದುರಾದ ಅಡೆತಡೆಗಳು, ತಮ್ಮ ಏಳುಬೀಳುಗಳ ಕಥೆಯ ಬಗ್ಗೆ ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

Duologue NXT: ಬಯಸಿದ ಗುರಿ ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ; ಜಾಗತಿಕ ತಾರೆ ರೋನಾ-ಲೀ ಶಿಮೊನ್
ಡ್ಯುಯೊಲಾಗ್ NXT
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 24, 2025 | 5:25 PM

Share

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಸರಣಿಯ ಹೊಸ ಆವೃತ್ತಿಯಾಗಿರುವಂತಹ ಡ್ಯುಯೊಲಾಗ್ NXT (Duologue NXT) ಎಂಬ ಹೊಸ ಕಾರ್ಯಕ್ರಮ ಈಗಾಗಲೇ ಚಾಲನೆ ಸಿಕ್ಕಿದೆ. ಇದೊಂದು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಬಗೆಗಿನ ಪಾಡ್‌ಕ್ಯಾಸ್ಟ್ ಕಾರ್ಯಕ್ರಮವಾಗಿದ್ದು, ಈ ಶೋನ ಮೊದಲ ಅತಿಥಿಯಾಗಿ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಭಾಗವಹಿಸಿದ್ದರು. ಜೊತೆಗೆ ಶಿಖರವನ್ನೇರುವಾಗ ಎದುರಾದ ಅಡೆತಡೆಗಳು, ತಮ್ಮ ಏಳುಬೀಳುಗಳ ಕಥೆ ಹಾಗೂ ಸಾಧಿಸಲು ನಾವು ಏನು ಮಾಡಬೇಕು ಎಂಬ ಒಂದಷ್ಟು ಟಿಪ್ಸ್‌ಗಳನ್ನು ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುಂದುವರಿಯಲು ಸಾಧ್ಯ:

ಡ್ಯುಯೊಲಾಗ್ NXT ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಖ್ಯಾತ ಅಂತರರಾಷ್ಟ್ರೀಯ ನಟಿ ರೋನಾ-ಲೀ ಶಿಮೊನ್ ಭಾಗವಹಿಸಿ ತಮ್ಮ ಜೀವನದಲ್ಲಿ ಎದುರಾದಂತಹ ಸವಾಲುಗಳು, ತಮ್ಮ ಗುರಿಗಳ ಸಾಧನೆಗಳ ಪ್ರಯತ್ನಗಳ ಸ್ಪೂರ್ತಿದಾಯಕ ಕಥೆಗಳ ಬಗ್ಗೆ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಬರುಣ್ ದಾಸ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದ ಶಿಮೊನ್‌, ನಮ್ಮ ಪ್ರಯಾಣದಲ್ಲಿ ಏರಿಳಿತಗಳೆನ್ನುವಂತಹದ್ದು ಇದ್ದೇ ಇರುತ್ತದೆ. ಹೀಗೆ ಏನೇ ಕಷ್ಟ ಎದುರಾದರೂ ಪರಿಶ್ರಮದಿಂದ ನಾವು ಗುರಿಯ ಕಡೆಗೆ ಮುನ್ನುಗ್ಗಬೇಕು ಎಂದು ಹೇಳಿದರು. ತಮ್ಮ ಸಾಧನೆಗಳ ಬಗ್ಗೆ ಮಾತನಾಡುತ್ತಾ ‘ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಐದನೇ ಸ್ಥಾನ ಪಡೆದರೂ, ಆ ಶೋ ನಡೆದ ಮರು ದಿನವೇ ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತು. ವೈಫಲ್ಯದ ಹಿಂದೆಯೂ ಅವಕಾಶಗಳು ಇದ್ದೇ ಇರುತ್ತವೆ. ನೀವು ಕಷ್ಟಪಟ್ಟು ಪ್ರಯತ್ನಿಸಿದರೆ, ಯಾವುದೇ ಪರಿಸ್ಥಿತಿಯಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ವಿಡಿಯೋ ಇಲ್ಲಿದೆ ನೋಡಿ:

ಜೀವನದಲ್ಲಿ ಸರಿಯಾದ ನಿರ್ಧಾರ ಎಂಬುದಿಲ್ಲ. ನೀವು ಯಾವುದಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ನಿರ್ಧಾರ ಮಾತ್ರ ಸರಿಯಾಗಿರಬೇಕು. ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ನಿಮ್ಮ ಗುರಿಯ ಮೇಲೆ ನಂಬಿಕೆ ಇಟ್ಟರೆ ಮತ್ತು ಸಾಧನೆಯ ಹಾದಿಯಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಿದರೆ ಮಾತ್ರ ನಿಮ್ಮ ಕನಸುಗಳು ನನಸಾಗುತ್ತವೆ ಎಂದು ಶಿಮೊನ್ ಕಾರ್ಯಕ್ರಮದಲ್ಲಿ ಹೇಳಿದರು.

ನೀವು ನಿಜವಾಗಿಯೂ ಬಯಸುವ ಗುರಿಯನ್ನು ಸಾಧಿಸಬೇಕೆಂದರೆ ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡಿ. ಅತಿ ಮುಖ್ಯವಾಗಿ ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು ಮತ್ತು ಇದು ನನ್ನಿಂದ ಸಾಧ್ಯವಿಲ್ಲ ಎಂಬ ಋಣಾತ್ಮಕ ಚಿಂತನೆಗಳಿಂದ ಸಾಧ್ಯವಾದಷ್ಟು ನೀವು ದೂರವಿರಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

Duologue NXT ನ ಈ ಕಾರ್ಯಕ್ರಮವು ಒಂದು ಸ್ಪೂರ್ತಿದಾಯಕ ಕಥೆಗಳ ಆವೃತ್ತಿಯಾಗಿದ್ದು, ಇದು ಸಾಧಕಿಯರನ್ನು ಗುರುತಿಸಿ ಗೌರವಿಸುವುದು ಮಾತ್ರವಲ್ಲದೆ, ಅನೇಕ ಮಹಿಳೆಯರಿಗೆ ಸ್ಪೂರ್ತಿ, ಪ್ರೇರಣೆಯಾಗಲಿದೆ. ಡ್ಯುಯೊಲಾಗ್ NXT ನ ಈ ಕಾರ್ಯಕ್ರಮವನ್ನು ನೀವು Duologue ಯುಟ್ಯೂಬ್ ಚಾನೆಲ್ (@Duologuewithbarundas) ಮತ್ತು News9 Plus ಅಪ್ಲಿಕೇಶನ್‌ನಲ್ಲಿಯೂ ಸ್ಟ್ರೀಮ್ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Wed, 24 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ