AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುತ್ತದೆ

ಕೆಲವೊಬ್ಬರಿಗೆ ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ಇರುತ್ತದೆ. ಕೈ ಹಿಂದೆ ಕಟ್ಟಿ ನಿಲ್ಲುವ ಈ ಅಭ್ಯಾಸದಿಂದಲೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದಂತೆ. ನಿಮಗೂ ಕೈಯನ್ನು ಹಿಂದೆ ಕಟ್ಟಿ ನಿಲ್ಲುವ ಅಭ್ಯಾಸ ಇದ್ಯಾ? ಹಾಗಾದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವವರ ಗುಣ ಸ್ವಭಾವ, ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Personality Test: ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Getty Images
TV9 Web
| Edited By: |

Updated on: Sep 20, 2025 | 5:49 PM

Share

ಮೂಗಿನ ಆಕಾರ, ಪಾದದ ಆಕಾರ, ಕೂದಲಿನ ಆಕಾರ ಸೇರಿದಂತೆ ದೇಹಕಾರದ ಮೂಲಕ ನಮ್ಮ ವ್ಯಕ್ತಿತ್ವ (Secret Personality) ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ನಮ್ಮ ಮಾತು, ನಾವು ನಡೆಯುವ ಶೈಲಿ, ನಿಲ್ಲುವ ಭಂಗಿ, ಕೈ ಕಟ್ಟಿ ನಿಲ್ಲುವ ರೀತಿ ಇತ್ಯಾದಿ ದೇಹ ಭಾಷೆಯು ಸಹ ನಾವು ಆತ್ಮವಿಶ್ವಾಸಿಯೇ, ಜಾಗರೂಕ ವ್ಯಕ್ತಿಯೇ ಎಂಬಿತ್ಯಾದಿ ನಮ್ಮ ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ಬಹಿರಂಗಪಡಿಸುತ್ತದೆ. ಅದೇ ರೀತಿ ಕೈಯನ್ನು ಬೆನ್ನ ಹಿಂದೆ ಕಟ್ಟಿ ನಿಲ್ಲುವ ಅಭ್ಯಾಸವೂ ವ್ಯಕ್ತಿತ್ವದ ರಹಸ್ಯವನ್ನು ಬಹಿರಂಗಪಡಿಸುತ್ತಂತೆ.  ಕೈಯನ್ನು ಹಿಂದಕ್ಕೆ ಕಟ್ಟಿ ನಿಲ್ಲುವುದು ಇದು ಸಾಮಾನ್ಯ ಭಂಗಿಯಂತೆ ಕಾಣಿಸಬಹುದು, ಆದರೆ ಇದು ವಾಸ್ತವವಾಗಿ ನಿಮ್ಮ ವ್ಯಕ್ತಿತ್ವದ ಬಗೆಗಿನ ಅನೇಕ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಅದೇನೆಂಬುದನ್ನು ತಿಳಿಯಿರಿ

ಕೈಯನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ತಿಳಿಸುತ್ತೆ ವ್ಯಕ್ತಿತ್ವದ ರಹಸ್ಯ:

ಆತ್ಮವಿಶ್ವಾಸ:  ಒಬ್ಬ ವ್ಯಕ್ತಿಯು ತನ್ನ ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಿಂತಾಗ, ಅದು ಆತ ಆತ್ಮವಿಶ್ವಾಸ ಹೊಂದಿದ್ದಾನೆಂದು ಸೂಚಿಸುತ್ತದೆ. ಈ ಭಂಗಿಯು ವ್ಯಕ್ತಿಯು ಯಾವುದೇ ಪರಿಸ್ಥಿತಿಯಿಂದ ವಿಚಲಿತನಾಗಿರುವುದಿಲ್ಲ ಮತ್ತು ಆತನಿಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಚೆನ್ನಾಗಿ ತಿಳಿದಿದೆ ಎಂಬುದನ್ನು ತತಿಳಿಸುತ್ತದೆ. ಅಲ್ಲದೆ ಒತ್ತಡದಲ್ಲಿಯೂ ಸಹ ಬಲವಾದ ವ್ಯಕ್ತಿತ್ವವನ್ನು ಮುನ್ನಡೆಸುವ ಮತ್ತು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ.

ತಾಳ್ಮೆ ಮತ್ತು ಸಂಯಮ: ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸವು ವ್ಯಕ್ತಿಯ ತಾಳ್ಮೆ ಮತ್ತು ಸಂಯಮದಿಂದ ಇರುತ್ತಾನಂತೆ. ಆತ ಯಾವುದೇ ಪರಿಸ್ಥಿತಿಯನ್ನು ಆತುರವಿಲ್ಲದೆ ಸಂಯಮದಿಂದ ಎದುರಿಸುತ್ತಾನೆ. ಅಲ್ಲದೆ ಕೈಯನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ವ್ಯಕ್ತಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರಿತು ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.

ಇದನ್ನೂ ಓದಿ
Image
ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
Image
ನೀವು ಆಯ್ಕೆ ಮಾಡುವ ಕಿಟಕಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ
Image
ನೀವು ಯಾವ ವಿಚಾರಕ್ಕೆ ಭಯ ಪಡುವವರು ಎಂಬುದನ್ನು ಈ ಚಿತ್ರ ತಿಳಿಸುತ್ತೆ

ಕುತೂಹಲ ಮತ್ತು ಕಲಿಯುವ ಬಯಕೆ: ಇದು ಇಂತಹ ವ್ಯಕ್ತಿಗಳು ಸ್ವಭಾವತಃ ಗಮನಿಸುವವರು ಎಂಬುದನ್ನು ಸೂಚಿಸುತ್ತದೆ. ಮತ್ತು ಅಂತಹ ವ್ಯಕ್ತಿಗಳು ತಮ್ಮ ಸುತ್ತಲಿನ ಎಲ್ಲವನ್ನೂ ವಿವರವಾಗಿ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಬಯಸುತ್ತಾರೆ, ಹೊಸ ಸನ್ನಿವೇಶ, ಘಟನೆಗಳಿಂದ ಕಲಿಯುವ ಮೂಲಕ ಜ್ಞಾನವನ್ನು ಪಡೆಯಲು ಮತ್ತು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಉತ್ಸುಕರಾಗಿರುತ್ತಾರೆ ಎಂಬುದನ್ನು ಸಹ ಸೂಚಿಸುತ್ತದೆ.

ಇದನ್ನೂ ಓದಿ: ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಚಿತ್ರವೇ ತಿಳಿಸುತ್ತದೆ

ಸ್ವಯಂ ನಿಯಂತ್ರಣ: ಕೈಯನ್ನು ಹಿಂದೆ ಕಟ್ಟಿ ನಿಲ್ಲುವವರು ತಮ್ಮ ಭಾವನೆಗಳನ್ನು ಅಥವಾ ಆತಂಕವನ್ನು ಮರೆಮಾಡಲು ಬಯಸುವವರಾಗಿರುತ್ತಾರೆ. ಹೌದು ಇದು ನೀವು ನಿಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಬಯಸುವುದಿಲ್ಲ ಮತ್ತು ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಬಯಸುತ್ತೀರಿ ಎಂದು ಸೂಚಿಸುತ್ತದೆ. ಅಲ್ಲದೆ ಇದು  ನಿಮ್ಮ ಸ್ವಯಂ-ಶಿಸ್ತಿನ ಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಗಂಭೀರ ಮತ್ತು ಚಿಂತನಶೀಲ ನಿರ್ಧಾರ:  ನೀವು ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಿಲ್ಲುವವರಾಗಿದ್ದರೆ ಅದು ನೀವು ನೀವು ಗಂಭೀರ ಸ್ವಭಾವದವರು ಮತ್ತು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನೀವು ವಿಷಯಗಳನ್ನು ಆಳವಾಗಿ ಯೋಚಿಸುತ್ತೀರಿ ಮತ್ತು ಪ್ರತಿಯೊಂದು ನಿರ್ಧಾರವನ್ನು ತರ್ಕ ಮತ್ತು ವಿವೇಚನೆಯ ತೆಗೆದುಕೊಳ್ಳುತ್ತೀರಿ. ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ