ಸಾಂದರ್ಭಿಕ ಚಿತ್ರ
ನಮ್ಮ ದೇಹದ ಪ್ರತಿಯೊಂದು ಭಾಗಗಳು ಬಹಳ ಮುಖ್ಯವಾಗಿದೆ. ಆದರೆ ಈ ದೇಹದ ಭಾಗಗಳಾದ ಕಣ್ಣು ಮೂಗು, ತುಟಿಯ ಆಕಾರದಿಂದ ವ್ಯಕ್ತಿ ಹೇಗೆ ಎಂದು ತಿಳಿಯಬಹುದು. ಆದರೆ ಹೆಬ್ಬೆರಳಿನ ಆಕಾರವು ಕೂಡ ವ್ಯಕ್ತಿ ಹೇಗೆಂದು ನಿರ್ಣಯಿಸಬಹುದಂತೆ. ಈ ಮೂಲಕ ವ್ಯಕ್ತಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸೇರಿದಂತೆ ರಹಸ್ಯಮಯ ಗುಣಗಳನ್ನು ಪತ್ತೆ ಹಚ್ಚಬಹುದು. ಹಾಗಾದ್ರೆ ನಿಮ್ಮ ಹೆಬ್ಬೆರಳು ಈ ಚಿತ್ರದಲ್ಲಿ ತೋರಿಸುವಂತೆ ಯಾವ ಆಕಾರವನ್ನು ಹೊಂದಿದೆ ಎಂದು ನೋಡಿ, ಆ ಮೂಲಕ ನಿಮ್ಮ ಗುಣಸ್ವಭಾವ ಕಂಡುಕೊಳ್ಳಿ.
- ಎ ರೀತಿಯ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು : ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆರಳಿನ ಮೇಲಿನ ಭಾಗ ಹಾಗೂ ಕೆಳಗಿನ ಭಾಗ ಎರಡೂ ಸಮನಾಗಿದ್ದರೆ ಆ ವ್ಯಕ್ತಿಗಳು ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಶಾಂತ ಸ್ವಭಾವದಿಂದಲೇ ಸಂಬಂಧವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಭಾವನೆಗಳ ಮೇಲೆ ಹಿಡಿತ ಸಾಧಿಸುವುದು ಚೆನ್ನಾಗಿ ಗೊತ್ತಿದೆ. ತಾಳ್ಮೆ ಸ್ವಭಾವ ಹೊಂದಿದ್ದು, ಗುರಿ ಸಾಧಿಸುವತ್ತ ಹೆಚ್ಚು ಕೇಂದ್ರೀಕರಿಸುತ್ತಾರೆ. ಬೇರೆಯವರು ಏನು ಹೇಳುತ್ತಾರೆ ಎನ್ನುವುದಕ್ಕೆ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚು ಸಮಯ ಕೊಡುತ್ತಾರೆ. ಈ ವ್ಯಕ್ತಿಗಳು ಯಾರ ಪ್ರೀತಿಗೂ ಅಷ್ಟು ಸುಲಭವಾಗಿ ಬೀಳುವುದಿಲ್ಲ.
- ಬಿ ರೀತಿಯ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು : ಹೆಬ್ಬೆರಳಿನ ಮೇಲಿನ ಭಾಗವನ್ನು ಕೆಳಗಿನ ಭಾಗಕ್ಕಿಂತ ಹೆಚ್ಚು ಇದ್ದರೆ, ಈ ವ್ಯಕ್ತಿಗಳು ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಸಂಗಾತಿಯ ಬಗ್ಗೆ ಅಪಾರ ನಂಬಿಕೆ, ಕಾಳಜಿ ತೋರುತ್ತಾರೆ. ತನ್ನವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳಿವರು.ಯಾವುದೇ ಯೋಜನೆಯಾಗಿರಲಿ ಅಥವಾ ವೈಯಕ್ತಿಕ ಗುರಿಯಾಗಿರಲಿ ಪೂರ್ಣಗೊಳ್ಳುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಈ ವ್ಯಕ್ತಿಗಳನ್ನು ಸೋಲಿಸುವವರು ಯಾರು ಇಲ್ಲ. ಕೆಲಸ ಕಾರ್ಯಗಳಿಂದಲೇ ಟೀಕೆಗೆ ಗುರಿಯಾಗುವುದೇ ಹೆಚ್ಚು ಎನ್ನಬಹುದು.
- ಸಿ ರೀತಿಯ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು : ಹೆಬ್ಬೆರಳಿನ ಮೇಲಿನ ಭಾಗಕ್ಕಿಂತ ಕೆಳಗಿನ ಭಾಗವು ಹೆಚ್ಚು ಇದ್ದರೆ ಆ ವ್ಯಕ್ತಿಗಳು ನಂಬಿಕೆಗೆ ಅರ್ಹರು. ವೈಯುಕ್ತಿಕ ಜೀವನ ಹಾಗೂ ಕೆಲಸ ಕಾರ್ಯಗಳಿಗೆ ಸಂಬಂಧ ಪಟ್ಟಂತೆ ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸುತ್ತಾರೆ. ಯಾವ ವಿಷಯದಲ್ಲಿ ಸುಲಭವಾಗಿ ರಾಜಿಯಾಗುವ ವ್ಯಕ್ತಿತ್ವ ಇವರದಲ್ಲ. ಸಂಗಾತಿಯ ಮೇಲೆ ಅತೀವ ಪ್ರೀತಿ, ಕಾಳಜಿ ತೋರುತ್ತಾರೆ. ಅವರ ಖುಷಿಗಾಗಿ ಏನನ್ನೂ ಮಾಡಲು ಸಿದ್ಧವಿರುತ್ತಾರೆ.
- ಡಿ ರೀತಿಯ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು : ಬಾಗಿದ ಹೆಬ್ಬೆರಳನ್ನು ಹೊಂದಿರುವ ವ್ಯಕ್ತಿಗಳು ತುಂಬಾ ಉದಾರ ಮನಸ್ಸಿನವರು. ಈ ವ್ಯಕ್ತಿಗಳು ಕಷ್ಟದಲ್ಲಿರುವ ಸಹಾಯ ಮಾಡುವಲ್ಲಿ ಸದಾ ಮುಂದು. ಹಣ ಮಾತ್ರವಲ್ಲದೇ, ಆಲೋಚನೆಗಳಲ್ಲಿಯೂ ಅತಿರಂಜಿತ ವ್ಯಕ್ತಿಯಾಗಿರುತ್ತಾರೆ. ಕೈಯಲ್ಲಿ ಹಣವಿದ್ದರೆ ಖರ್ಚು ಆಗುವವರೆಗೆ ಇವರಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಹೆಚ್ಚು ಖರ್ಚು ಮಾಡುವ ವ್ಯಕ್ತಿಗಳಾಗಿರುತ್ತಾರೆ. ಅದಲ್ಲದೇ, ಇತರರ ಸಮಯ ಹಾಗೂ ಸಂಪತ್ತಿಗೆ ಬೆಲೆ ಕೊಡುವುದೇ ಇಲ್ಲ.
- ಇ ರೀತಿಯ ಹೆಬ್ಬೆರಳು ಹೊಂದಿರುವ ವ್ಯಕ್ತಿಗಳು : ಹೆಬ್ಬೆರಳಿನ ಮಧ್ಯಭಾಗವು ಉಬ್ಬಿದು, ಕೆಳಗಿನ ಭಾಗವು ಒಳಗೆ ಇರುವಂತೆ ಇದ್ದರೆ ಈ ವ್ಯಕ್ತಿಗಳು ಇಚ್ಛಾಶಕ್ತಿ ಹಾಗೂ ದೃಢ ನಿರ್ಧಾರವನ್ನು ಹೊಂದಿರುತ್ತಾರೆ. ಇವರು ನಂಬಿಕೆಗೆ ಅರ್ಹರಾಗಿದ್ದು ನಾಯಕತ್ವ ಗುಣವು ಹೆಚ್ಚಿರುತ್ತದೆ. ಹೆಚ್ಚು ವಾದ ಮಾಡುವ ಪ್ರವೃತ್ತಿಯನ್ನು ಹೊಂದಿದ್ದು ಇದು ಘರ್ಷಣೆಗೆ ಕಾರಣವಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಪ್ರಾಯೋಗಿಕ ಹಾಗೂ ವಿಶ್ಲೇಷಣಾತ್ಮಕವಾಗಿ ಯೋಚಿಸುತ್ತಾರೆ. ಕಠಿಣ ಪರಿಶ್ರಮಿಗಳಾಗಿದ್ದು, ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ