Personality Test :ನೀವು ಬಳಸುವ ಎಮೋಜಿಗಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 4:52 PM

ದಿನನಿತ್ಯ ಬಳಸುವ ಎಮೋಜಿಗಳು ನಮ್ಮ ಜೀವನದ ಭಾಗವೇ ಆಗಿದೆ. ಹೆಚ್ಚಿನವರು ಸಂದೇಶಗಳನ್ನು ಕಳಿಸುವಾಗ ಎಮೋಜಿಗಳನ್ನೆ ಹೆಚ್ಚು ಬಳಸುತ್ತಾರೆ. ಇದು ಸಂದೇಶ ಮತ್ತು ಭಾವನೆಗಳನ್ನು ತೋರ್ಪಡಿಸಲು ಸಹಾಯಕವಾಗಿದೆ. ಆದರೆ ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಬಳಸುವ ಈ ಕೆಲವು ಎಮೋಜಿಗಳು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹಾಗಾದ್ರೆ ನೀವು ಯಾವ ರೀತಿಯ ಎಮೋಜಿಗಳನ್ನು ಬಳಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೇಗೆ ಎಂದು ತಿಳಿದುಕೊಳ್ಳಬಹುದು.

Personality Test :ನೀವು ಬಳಸುವ ಎಮೋಜಿಗಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಗಿದೆ. ಏನಾದ್ರು ಹೇಳಬೇಕೆಂದರೆ ಅಕ್ಷರದಲ್ಲಿ ಹೇಳುವಷ್ಟು ಸಮಯ ಯಾರಿಗೂ ಇಲ್ಲ. ಈ ಹಿಂದೆ ಏನಾದರೂ ಹೇಳಬೇಕಾಗಿದ್ದರೆ ಅದನ್ನು ಸಂಪೂರ್ಣ ಒಂದು ವಾಕ್ಯದಲ್ಲಿ ಬರೆಯಬೇಕಾಗಿತ್ತು. ಆದರೆ ಈ ಎಮೋಜಿಗಳು ಬಂದ ಬಳಿಕವಂತೂ ಭಾವನೆಗಳನ್ನು ವ್ಯಕ್ತಪಡಿಸಲು ಅವುಗಳನ್ನು ಬಳಸುವುದೇ ಹೆಚ್ಚು. ಹೆಚ್ಚಿನ ಜನರು ಚಾಟ್ ಮಾಡುವಾಗ ಸಂದೇಶದ ಬದಲಿಗೆ ಎಮೋಜಿಗಳನ್ನು ಬಳಸುತ್ತಾರೆ. ಕೆಲ ಎಮೋಜಿಗಳು ನಾವು ಹೇಗೆ ಎನ್ನುವುದನ್ನು ರಿವೀಲ್ ಮಾಡುತ್ತದೆಯಂತೆ.

  • ನಗುವ ಎಮೋಜಿ : ಈ ಎಮೋಜಿ ಬಳಸುವ ವ್ಯಕ್ತಿಗಳು ನಿರಂತರವಾಗಿ ಸಂತೋಷವನ್ನು ಅನುಭವಿಸುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳ ವಿನಂತಿ, ಆಲೋಚನೆ, ನಗುವನ್ನು ಸುತ್ತಮುತ್ತಲಿನ ವ್ಯಕ್ತಿಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಸದಾ ನಗುವ ಸ್ವಭಾವವನ್ನು ಹೊಂದಿರುವ ಕಾರಣ ಇವರ ಸ್ನೇಹಿತರು ಹಾಗೂ ಆಪ್ತರು ಇವರು ಏನೇ ಹೇಳಿದ್ರೂ ಸಹಜವಾಗಿ ಸ್ವೀಕರಿಸಿ ಬಿಡುತ್ತಾರೆ
  • ಮಡಿಚಿದ ಕೈಗಳ ಎಮೋಜಿ : ಈ ರೀತಿಯ ಎಮೋಜಿಗಳನ್ನು ಹೆಚ್ಚು ಬಳಸುವ ವ್ಯಕ್ತಿಗಳು ಕೃತಜ್ಞತ ಭಾವ ಹೊಂದಿರುತ್ತಾರೆ. ಈ ವ್ಯಕ್ತಿಗಳು ಎಲ್ಲಾ ವಿಷಯಕ್ಕೂ ಬದ್ಧರಾಗಿರುತ್ತಾರೆ. ಈ ವ್ಯಕ್ತಿಗಳು ಎಲ್ಲರ ವಿನಂತಿಗಳು ಅಥವಾ ಪ್ರಶ್ನೆಗಳನ್ನು ಸಹಜವಾಗಿ ಸ್ವೀಕರಿಸುವ ಗುಣವನ್ನು ಹೊಂದಿರುತ್ತಾರೆ.
  • ಅಳುವ ಎಮೋಜಿ : ಸಂವಹನ ವೇಳೆ ಈ ಅಳುವ ಎಮೋಜಿ ಬಳಸುತ್ತಿದ್ದರೆ ಅಂತಹ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇತರರ ಕಷ್ಟಗಳಿಗೆ ಮಿಡಿಯುವ ವ್ಯಕ್ತಿಗಳಾಗಿದ್ದು, ಇವರಿಗೆ ಭಾವನೆಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುವುದಿಲ್ಲ. ಈ ವ್ಯಕ್ತಿಗಳು ಈ ಎಮೋಜಿ ಬಳಸುವ ಮೂಲಕ ತಮ್ಮ ತಡೆದಿಟ್ಟುಕೊಂಡ ಎಲ್ಲಾ ಭಾವನೆಯನ್ನು ಹೊರಹಾಕುತ್ತಾರೆ.
  • ಥಂಬ್ಸ್-ಅಪ್ ಎಮೋಜಿ : ಈ ಎಮೋಜಿಗಳನ್ನು ಬಳಸುವ ವ್ಯಕ್ತಿಗಳು ಬೇರೆಯವರ ಆಲೋಚನೆಗೆ ಬೆಲೆ ಕೊಡುತ್ತಾರೆ. ಇತರರನ್ನು ಹೊಂದಿಕೊಳ್ಳುವ ಮತ್ತು ಬೆಂಬಲಿಸುವ ಸಾಮರ್ಥ್ಯದಿಂದಾಗಿ ಸುತ್ತಮುತ್ತಲಿನ ಜನರ ನಡುವೆ ಆಕರ್ಷಕ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ತಮ್ಮ ಉತ್ಸಾಹದ ಮೂಲಕವೇ ಬೇರೆ ವ್ಯಕ್ತಿಗಳನ್ನು ಸಲೀಸಾಗಿ ಆಕರ್ಷಿಸುತ್ತಾರೆ.
  • ಹೃದಯದ ಎಮೋಜಿ : ಈ ಎಮೋಜಿಗಳನ್ನು ಬಳಸುವ ವ್ಯಕ್ತಿಗಳು ಕಾಳಜಿಯುಳ್ಳ ವ್ಯಕ್ತಿಯಾಗಿರುತ್ತಾರೆ. ಬೇರೆಯವರ ಸುಖ ದುಃಖಕ್ಕೆ ಮಿಡಿಯುವ ಕಾರಣ, ಆಪ್ತರಿಗೆ ಕಷ್ಟ ಎಂದು ಬಂದಾಗ ನೆನಪಾಗುವುದೇ ಈ ವ್ಯಕ್ತಿಗಳು ಎನ್ನಬಹುದು. ಈ ಜನರು ಸ್ವಾಭಾವಿಕವಾಗಿ ಸಹಾನುಭೂತಿಯುಳ್ಳವರು. ಹೀಗಾಗಿ ಇವರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರೇ ಹೆಚ್ಚಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ