
ಸಾಮಾನ್ಯವಾಗಿ ಜನರು ಅವರ ಭವಿಷ್ಯ ಹೇಗಿದೆ, ತಮ್ಮ ಗುಣ ಸ್ವಭಾವ ಎಂತಹದ್ದು ಇವೆಲ್ಲವನ್ನು ತಿಳಿದುಕೊಳ್ಳಲು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೊರೆ ಹೋಗ್ತಾರೆ. ಇದು ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಮೂಲಕವೂ ನಮ್ಮ ವ್ಯಕ್ತಿತ್ವ (Personality) ಹೇಗಿದೆ ಎಂಬುದನ್ನು ನಾವೇ ತಿಳಿದುಕೊಳ್ಳಬಹುದು. ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ಆಗಿರ್ಬೋದು, ಸಾಮುದ್ರಿಕ ಶಾಸ್ತ್ರದಲ್ಲಿ ಕೈ, ಪಾದ, ಮೂಗಿನ ಆಕಾರ ಸೇರಿದಂತೆ ದೇಹಕಾರದ ಮೂಲಕವೂ ನಾವು ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ನೀವು ಕೂಡ ಇವುಗಳ ಮುಖಾಂತರ ನಿಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದು ನಿಮ್ಮ ತುಟಿಯ (Lips Shape) ಆಕಾರ ಹೇಗಿದೆ ಎಂಬುದರ ಮೇಲೆ ನೀವು ಎಂತಹ ವ್ಯಕ್ತಿ ಎಂಬುದನ್ನು ಪರೀಕ್ಷಿಸಿ.
ಮೇಲಿನ ತುಟಿ ತೆಳ್ಳಗಾಗಿದ್ದರೆ: ನಿಮ್ಮ ಮೇಲಿನ ತುಟಿ, ಕೆಳ ತುಟಿಗಿಂತ ತುಂಬಾ ತೆಳ್ಳಗಿದ್ದರೆ, ನೀವು ಮಾತನಾಡಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವ ವ್ಯಕ್ತಿ ಎಂದರ್ಥ. ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವಾಗ ನೀವು ತುಂಬಾನೇ ಆತ್ಮವಿಶ್ವಾಸದಿಂದ ಇರುತ್ತೀರಿ. ನಿಮ್ಮ ಮಾತುಗಳನ್ನು ಇತರರನ್ನು ಆಕರ್ಷಿಸುತ್ತವೆ. ಹೀಗಾಗಿ ನಿಮ್ಮ ಮಾತುಗಳನ್ನು ಜನ ಕೇಳುತ್ತಾರೆ. ನಿಮ್ಮ ಈ ಅಭಿವ್ಯಕ್ತಿ ಸಾಮಾರ್ಥ್ಯವು ನಿಮ್ಮನ್ನು ಉತ್ತಮ ಮಾತುಗಾರರನ್ನಾಗಿ ಮಾಡುತ್ತದೆ.
ಅಂಡಾಕಾರದ ತುಟಿ: ನಿಮ್ಮ ತುಟಿಗಳು ಮೃದುವಾಗಿ ದುಂಡಾಗಿದ್ದರೆ, ನೀವು ಬಲವಾದ ಸಾಮಾಜಿಕ ಅಂತಃಪ್ರಜ್ಞೆಯನ್ನು ಹೊಂದಿರುವವರೆಂದು ಅರ್ಥ. ನೀವು ಸಹಾನುಭೂತಿ ಮತ್ತು ಒಳನೋಟದ ಸಮತೋಲಿತ ಮಿಶ್ರಣವನ್ನು ಹೊಂದಿದ್ದು, ಎಂತಹ ಸಂದರ್ಭದಲ್ಲಿ ಧ್ವನಿ ಎತ್ತಬೇಕು, ಯಾವ ಸಂದರ್ಭದಲ್ಲಿ ಮೌನವಾಗಿರಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಅಲ್ಲದೆ ನೀವು ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು, ನಿಮ್ಮ ಸ್ನೇಹಿತರು ನಿಮ್ಮನ್ನು ಹೆಚ್ಚಾಗಿ ನಂಬುತ್ತಾರೆ.
ಸಣ್ಣ ತುಟಿಗಳು: ನಿಮ್ಮ ತುಟಿ ತುಂಬಾನೇ ತುಳುವಾಗಿ ಸಣ್ಣದಾಗಿದ್ದರೆ, ನೀವು ಮಾತನಾಡುವುದಕ್ಕಿಂತ ಹೆಚ್ಚು ಕೇಳುವವರಾಗಿದ್ದೀರಿ. ಒಂದು ಲೆಕ್ಕದಲ್ಲಿ ನೀವು ಉತ್ತಮ ಕೇಳುಗರು ಅಂತಅನೇ ಹೇಳಬಹುದು. ನೀವು ಮಿತವಾಗಿ ಮಾತನಾಡಿದರೂ ಆ ಮಾತಿನಲ್ಲಿ ಒಂದು ತೂಕ ಇರುತ್ತದೆ. ನೀವು ಯಾವಾಗಲೂ ಹರಟೆಗಿಂತ ಪರಿಪೂರ್ಣ ಸಂಭಾಷಣೆಗಳಿಗೆ ಆದ್ಯತೆ ನೀಡುತ್ತೀರಿ.
ಕೆಳ ತುಟಿ ಸಣ್ಣದಾಗಿದ್ದರೆ: ನಿಮ್ಮ ಕೆಳ ತುಟಿ ಮೇಲಿನ ತುಟಿಗಿಂತ ತೆಳ್ಳಗಾಗಿದ್ದರೆ, ನೀವು ಚುರುಕು ಬುದ್ಧಿಯ ವ್ಯಕ್ತಿಯೆಂದು ಅರ್ಥ. ನಿಮಗೆ ಆಸಕ್ತಿಯನ್ನು ಹುಟ್ಟುಹಾಕುವ ವಿಷಯಗಳ ಕಡೆಗೆ ಸಂಭಾಷಣೆಯನ್ನು ಹೇಗೆ ನಿರ್ದೇಶಿಸಬೇಕೆಂದು ನಿಮಗೆ ನಿಖರವಾಗಿ ತಿಳಿದಿದೆ. ಇದರಿಂದ ಕೆಲವರು ಕೆಲವೊಮ್ಮೆ ನಿಮ್ಮನ್ನು ಸ್ವಾರ್ಥಿಯೆಂದು ಬಿಂಬಿಸುವ ಸಾಧ್ಯತೆ ಇರುತ್ತದೆ.
ಕೆಳಮುಖ ತುಟಿ: ಕೆಳಮುಖ ಆಕಾರದ ರೀತಿ ನಿಮ್ಮ ತುಟಿಗಳಿದ್ದರೆ ನೀವು ಬುದ್ಧಿವಂತ ಮತ್ತು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯೆಂದು ಅರ್ಥ. ಈ ಆಕಾರದ ತುಟಿಗಳನ್ನು ಹೊಂದಿರುವ ಜನರು ಆವೇಗದಿಂದ ವರ್ತಿಸುವ ಬದಲು ತಮ್ಮ ಅನುಭವದ ಮೇಲೆ ಅವಲಂಬಿತರಾಗುತ್ತಾರೆ. ಒತ್ತಡದ ಸಂದರ್ಭಗಳಲ್ಲೂ ಇವರು ತುಂಬಾನೇ ಶಾಂತವಾಗಿ ವರ್ತಿಸುತ್ತಾರೆ. ಇವರ ಈ ಗುಣ ಇವರನ್ನು ಉತ್ತಮ ಸಲಹೆಗಾರರನ್ನಾಗಿ ಮಾಡುತ್ತದೆ.
ತೆಳುವಾದ ತುಟಿಗಳು: ನಿಮ್ಮ ತುಟಿ ತೀರಾ ತೆಳುವಾಗಿದ್ದರೆ ನೀವು ವಿವರಗಳಿಗೆ ಗಮನವನ್ನು ನೀಡುವ ವ್ಯಕ್ತಿಯೆಂದು ಅರ್ಥ. ಅಲ್ಲದೆ ನೀವು ಪರಿಪೂರ್ಣತಾವಾದಿಗಳು ಕೂಡ ಹೌದು. ಏಕೆಂದರೆ ನೀವು ಜೀವನದ ಸಣ್ಣ ಅಂಶಗಳ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತೀರಿ. ಈ ಶಾಂತ ಆತ್ಮವಿಶ್ವಾಸವು ನಿಮಗೆ ಏನು ಬೇಕು ಮತ್ತು ಅದನ್ನು ಸಾಧಿಸಲು ಸ್ಥಿರವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮುಖ, ಕ್ಯಾಂಡಲ್: ಈ ಚಿತ್ರದ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು
ಪೂರ್ಣ ತುಟಿ: ಈ ಆಕಾರದ ತುಟಿಯನ್ನು ಹೊಂದಿರುವ ಜನರು ಸ್ನೇಹಪರ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ನಗುವಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ಈ ಸ್ವಭಾದ ಕಾರಣದಿಂದಾಗಿ ಇವರಿಗೆ ಸ್ನೇಹಿತರು ಕೂಡ ಹೆಚ್ಚು.
ಅಪರಿಪೂರ್ಣ ತುಟಿ: ಈ ಆಕಾರದ ತುಟಿ ಸೃಜನಶೀಲತೆ ಮತ್ತು ಸ್ವಂತಿಕೆಯ ಸಂಕೇತವಾಗಿದೆ. ಈ ಆಕಾರದ ತುಟಿಗಳನ್ನು ಹೊಂದಿರುವ ಜನರು ಸಾಮಾನ್ಯರಿಗಿಂತ ವಿಭಿನ್ನವಾಗಿ ಯೋಚಿಸುತ್ತಾರೆ.
ದೊಡ್ಡ ತುಟಿ: ನಿಮ್ಮ ತುಟಿ ತುಂಬಾ ದೊಡ್ಡದಾಗಿದ್ದರೆ ನೀವು ಸ್ವಯಂಪ್ರೇರಿತ ಹಾಗೂ ಬೇಗನೇ ಎಲ್ಲಾ ಕೆಲಸಗಳನ್ನು ಪ್ರಾರಂಭಿಸುವ ವ್ಯಕ್ತಿಯೆಂದು ಅರ್ಥ. ಅಲ್ಲದೆ ನೀವು ಕ್ರಿಯಾತ್ಮಕ ಶಕ್ತಿ ಮತ್ತು ನಿರಂತರವಾಗಿ ಆಲೋಚಿಸುವ ವ್ಯಕ್ತಿಯೂ ಹೌದು. ಜೊತೆಗೆ ಯಾವುದೇ ಫಿಲ್ಟರ್ ಇಲ್ಲದೆ ನೇರವಾಗಿ ಮಾತನಾಡುವ ನಿಮ್ಮ ಸ್ವಭಾವ ಎಲ್ಲರನ್ನೂ ಆಕರ್ಷಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ