Personality
ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ವ್ಯಕ್ತಿತ್ವ, ಗುಣ ಸ್ವಭಾವ ಹಾಗೂ ಯೋಚಿಸುವ ರೀತಿಯಿಂದಲೇ ಗುರುತಿಸಿಕೊಳ್ಳುತ್ತಾನೆ. ಹೀಗಾಗಿ ಒಬ್ಬರನ್ನೊಬ್ಬರು ಹೋಲಿಕೆ ಮಾಡಿ ಈ ವ್ಯಕ್ತಿಯೂ ಹೀಗೆಯೇ ಎಂದು ನಿಖರವಾಗಿ ಹೇಳಲು ಅಸಾಧ್ಯ. ಹೀಗಾಗಿ ವ್ಯಕ್ತಿಯೂ ಹೇಗೆ ಎಲ್ಲರೊಂದಿಗೆ ವರ್ತಿಸುತ್ತಾನೆ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸಬಹುದು. ಅದಲ್ಲದೇ, ದೇಹದ ಪ್ರತಿಯೊಂದು ಅಂಗಗಳು ವ್ಯಕ್ತಿಯ ಗುಣಸ್ವಭಾವ ಬಹಿರಂಗ ಪಡಿಸುತ್ತದೆ. ಆದರೆ ವ್ಯಕ್ತಿಯೊಬ್ಬನ ಹುಟ್ಟಿದ ವಾರವೇ ಆತನು ಹೇಗೆ? ಆ ವ್ಯಕ್ತಿಯ ನಿಗೂಢ ಗುಣಸ್ವಭಾವವನ್ನು ತಿಳಿಸುತ್ತೆ.
- ಸೋಮವಾರ: ಯಾರು ಸೋಮವಾರದಂದು ಹುಟ್ಟಿರುತ್ತಾರೆಯೋ, ಆ ವ್ಯಕ್ತಿಗಳು ತಮ್ಮನ್ನು ತಾವೇ ಪ್ರಶಂಸಿಕೊಳ್ಳುತ್ತಾರೆ. ಉಳಿದವರನ್ನು ದ್ವೇಷಿಸುವ ಗುಣವನ್ನು ಹೊಂದಿರುತ್ತಾರೆ. ಬೇರೆಯವರ ಅಭಿಪ್ರಾಯಗಳಿಗೆ ಹೆಚ್ಚು ಮನ್ನಣೆ ನೀಡದೇ ತಾವು ಹೇಳುವುದು ಹಾಗೂ ಮಾಡುವುದೇ ಸರಿ ಎನ್ನುವಂತೆ ನಡೆದುಕೊಳ್ಳುತ್ತಾರೆ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ರಹಸ್ಯಮಯ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಯಶಸ್ಸಿಗಾಗಿ ಶ್ರಮಿಸುತ್ತಾರೆ, ಹಾಗೂ ಈ ವ್ಯಕ್ತಿಗಳಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ. ಆದರೆ ಕೆಲವರು ಅತ್ಯಂತ ಪ್ರೇಮಮಯಿ ಹಾಗೂ ಕರುಣಾಮಯಿಗಳಾಗಿರುತ್ತಾರೆ.
- ಮಂಗಳವಾರ: ಈ ದಿನ ಹುಟ್ಟಿದವರಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕಾತುರ ಹೆಚ್ಚಿರುತ್ತದೆ. ಕುತೂಹಲಕಾರಿ ವ್ಯಕ್ತಿಗಳಾಗಿದ್ದು, ಯಾವುದೇ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವ ಮೂಲಕ ಗಂಭೀರವಾಗಿ ಯೋಚಿಸುತ್ತಾರೆ. ತಮ್ಮ ಕೆಲಸ ಸಾಧಿಸಿಕೊಳ್ಳಲು ಸಮಯವನ್ನು ಪೂರ್ಣವಾಗಿ ವಿನಿಯೋಗಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಎಷ್ಟೇ ಒತ್ತಡವಿದ್ದರೂ ಎಲ್ಲಾ ಕೆಲಸ ಸುಲಭವಾಗಿ ಮಾಡಿ ಮುಗಿಸುವ ಸಾಮರ್ಥ್ಯ ಈ ವ್ಯಕ್ತಿಗಳಲ್ಲಿರುತ್ತದೆ.
- ಬುಧವಾರ: ಬುಧವಾರ ಹುಟ್ಟಿದವರಲ್ಲಿ ತಮ್ಮ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಾರೆ. ತಾವು ಕೆಲಸ ಮಾಡುವುದಕ್ಕಿಂತ ಇತರರನ್ನು ಕೆಲಸ ಮಾಡಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ. ಎಲ್ಲಾ ಕೆಲಸ ಮಾಡಿ ಮುಗಿಸಲು ಸ್ನೇಹಿತರ ಸಹಾಯ ಬಯಸುತ್ತಾರೆ. ಸ್ನೇಹಪರರು ಆಗಿದ್ದು ಎಲ್ಲ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ.
- ಗುರುವಾರ: ಈ ದಿನ ಹುಟ್ಟಿದ ಜನರು ಸಾಮಾನ್ಯವಾಗಿ ಇತರರಿಂದ ಪ್ರಶಂಸೆ ಪಡೆಯುವವರಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವದೊಂದಿಗೆ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ. ಆಶಾವಾದಿಗಳಾಗಿದ್ದು, ಒಬ್ಬರೇ ಕೆಲಸ ಮಾಡಲು ಬಯಸುತ್ತಾರೆ. ಈ ಜನರಲ್ಲಿ ನಾಯಕತ್ವ ಗುಣವು ಹೆಚ್ಚಿರುತ್ತದೆ. ತನ್ನ ಸುತ್ತಮುತ್ತಲಿನವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದರ ಜೊತೆಗೆ ಎಲ್ಲರನ್ನು ಗೌರವದಿಂದ ಕಾಣುತ್ತಾರೆ.
- ಶುಕ್ರವಾರ: ಈ ದಿನ ಹುಟ್ಟಿದವರು ಕ್ರಿಯಾತ್ಮಕರಾಗಿದ್ದು, ಬುದ್ಧಿವಂತ ಜನರೆಂದು ಗುರುತಿಸಿಕೊಳ್ಳುತ್ತಾರೆ. ಸ್ನೇಹ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಬೇಕಾದ ವ್ಯಕ್ತಿ ಎಂದರೂ ತಪ್ಪಿಲ್ಲ. ಜೀವನದ ಪ್ರಮುಖ ಘಟ್ಟಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸನ್ನಿವೇಶಕ್ಕೆ ಅನುಗುಣವಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಗುಣ ಇವರಿಗೆ ಜನ್ಮದತ್ತವಾಗಿ ಬಂದಿರುತ್ತದೆ.
- ಶನಿವಾರ: ಈ ದಿನ ಹುಟ್ಟಿದವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ಸಂದರ್ಭದಲ್ಲಿ ಈ ವ್ಯಕ್ತಿಗಳು ಚಿಕ್ಕಪುಟ್ಟ ಸೋಲುಗಳಿಗೂ ತೀರಾ ಹತಾಶೆ ವ್ಯಕ್ತಪಡಿಸುತ್ತಾರೆ. ಆದರೆ ಎಲ್ಲವನ್ನು ಸುಲಭವಾಗಿ ಜಯಿಸುವ ಗುಣ ಹೊಂದಿರುತ್ತಾರೆ. ಆದರೆ ಈ ವ್ಯಕ್ತಿಗಳು ಹೊಸ ವಿಚಾರಗಳಿಗೆ ಋಣಾತ್ಮಕ ಸಲಹೆಗಳನ್ನೇ ನೀಡುವ ಸಂಭವವೇ ಹೆಚ್ಚು. ಅದಲ್ಲದೇ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.
- ಭಾನುವಾರ: ಈ ದಿನ ಹುಟ್ಟಿದ ವ್ಯಕ್ತಿಗಳು ಅತಿ ಆಶಾವಾದಿಗಳಾಗಿದ್ದು, ಇವರ ಭಾವನೆಗಳು ತಟಸ್ಥವಾಗಿರುವುದಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಭಿನ್ನ ಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸದಾ ನಗುಮುಖ ಹೊಂದಿದ್ದು, ಎಲ್ಲರನ್ನು ನಗಿಸುವ ಸ್ವಭಾವ ಹೊಂದಿರುತ್ತಾರೆ. ಎಲ್ಲರೊಂದಿಗೆ ಬೆರೆಯುವುದಕ್ಕಿಂತ ಏಕಾಂತವಾಗಿರುವುದೆಂದರೆ ಈ ವ್ಯಕ್ತಿಗಳಿಗೆ ಇಷ್ಟ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಎಲ್ಲವನ್ನು ಮಾಡಿ ಮುಗಿಸುವ ಸಾಮರ್ಥ್ಯ ಹೊಂದಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ