AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರೇ, ಬೇಸಿಗೆಯಲ್ಲಿ ಈ ರೀತಿ ಬಟ್ಟೆ ಧರಿಸಿದ್ರೆ ಸ್ಲಿಮ್ ಆಗಿ ಕಾಣ್ತಿರಾ

ಮಹಿಳೆಯರು ತಮ್ಮ ಅಂದ ಚಂದ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ಸ್ವಲ್ಪ ದಪ್ಪವಾದರೂ ತೀರಾ ತಲೆಕೆಡಿಸಿಕೊಳ್ಳುತ್ತಾರೆ..ಕೆಲವೊಮ್ಮೆ ಆಯ್ಕೆ ಮಾಡಿಕೊಳ್ಳುವ ಉಡುಗೆಗಳು ಕೂಡ ದಪ್ಪ ಕಾಣುವಂತೆ ಮಾಡುತ್ತದೆ..ಹೀಗಾಗಿ ಬೇಸಿಗೆಯಲ್ಲಿ ತೆಳ್ಳಗೆ ಕಾಣಬೇಕೆಂದಿದ್ದರೆ ಬಟ್ಟೆಗಳ ಆಯ್ಕೆಯ ಮೇಲೆ ಗಮನ ಕೊಡುವುದು ಬಹಳ ಮುಖ್ಯ. ಈ ರೀತಿ ಉಡುಪುಗಳನ್ನು ಆಯ್ಕೆ ಮಾಡಿಕೊಂಡರೆ ಎಲ್ಲರೂ ನಿಮ್ಮತ್ತ ತಿರುಗಿ ನೋಡುತ್ತಾರೆ. ಬೇಸಿಗೆಯಲ್ಲಿ ಆಯ್ಕೆ ಮಾಡುವ ಬಟ್ಟೆಗಳ ಕುರಿತಾದ ಟಿಪ್ಸ್ ಇಲ್ಲಿದೆ.

ಮಹಿಳೆಯರೇ, ಬೇಸಿಗೆಯಲ್ಲಿ ಈ ರೀತಿ ಬಟ್ಟೆ ಧರಿಸಿದ್ರೆ ಸ್ಲಿಮ್ ಆಗಿ ಕಾಣ್ತಿರಾ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 19, 2025 | 12:10 PM

Share

ಸ್ಲಿಮ್‌ ಆಗಿ ಕಾಣಲು ಯಾರಿಗೆ ತಾನೆ ಇಷ್ಟ ಇಲ್ಲ. ಸಣ್ಣ ಇದ್ದರೆ ಯಾರೂ ನಮ್ಮನ್ನು ರೇಗಿಸುವುದಿಲ್ಲ, ಇಷ್ಟ ಆದ ಎಲ್ಲಾ ಬಟ್ಟೆಗಳನ್ನು ಧರಿಸಬಹುದು ಎನ್ನುವುದಿರುತ್ತದೆ. ಅದರಲ್ಲಿಯೂ ಈ ಪುರುಷರಿಗಿಂತ ಮಹಿಳೆಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಬಟ್ಟೆ ಖರೀದಿ ಮಾಡುವಾಗ ಕೂಡ ಈ ಬಟ್ಟೆಯಲ್ಲಿ ತೆಳ್ಳಗೆ ಕಾಣುತ್ತೇನಾ ಎಂದು ನೋಡುವುದೇ ಹೆಚ್ಚು. ದಪ್ಪಗಿರುವ ಹುಡುಗಿಯರು ಈ ರೀತಿ ಬಟ್ಟೆ ಧರಿಸಿದ್ರೆ ದಪ್ಪಗೆ ಕಾಣುವುದಿಲ್ಲ. ಹೀಗಾಗಿ ನೀವೇನಾದ್ರೂ ದಪ್ಪಗಿದ್ರೆ ಈ ರೀತಿ ಬಟ್ಟೆಯನ್ನು ಧರಿಸಿದ್ರೆ ಸ್ಲಿಮ್ ಆಗಿ ಕಾಣುವುದಂತೂ ಪಕ್ಕಾ. ಹೀಗಾಗಿ ಬಟ್ಟೆ ಖರೀದಿ ಮಾಡುವಾಗ ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಿ.

  • ತಿಳಿ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಳ್ಳಿ : ಎಲ್ಲರಿಗೂ ಕೂಡ ಸ್ಲಿಮ್ ಆಗಿ ಕಾಣಬೇಕೆನ್ನುವುದಿರುತ್ತದೆ. ಮಹಿಳೆಯರಿಗೆ ಬೇಸಿಗೆ ಋತುವಿನಲ್ಲಿ ತೆಳ್ಳಗೆ ಕಾಣಬೇಕು ಎನ್ನುವುದಿರುತ್ತದೆ. ಈ ತಿಳಿ ಬಣ್ಣದ ಬಟ್ಟೆಗಳು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಹೀಗಾಗಿ ತಿಳಿ ಬಣ್ಣಗಳು ಆರ್ದ್ರ ವಾತಾವರಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಡಾರ್ಕ್ ಬಣ್ಣದ ಬಟ್ಟೆಗಳಿಗಿಂತ ತಿಳಿ ಬಣ್ಣದ ಬಟ್ಟೆಗಳನ್ನೆ ಧರಿಸಿ ಯಂಗ್ ಆಗಿ ಕಾಣಿಸಿಕೊಳ್ಳಬಹುದು.
  • ವಿ ನೆಕ್ಲೈನ್ ಉಡುಗೆ ಧರಿಸಿ : ದಪ್ಪಗೆ ಇದ್ದು ದೇಹ ಸರಿಯಾದ ಶೇಪ್ ಹೊಂದಿಲ್ಲವಾದರೆ ವಿ ನೆಕ್ಲೈನ್ ಉಡುಗೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿ ಉಡುಗೆಗಳು ತಲೆ ಎತ್ತರವಾಗಿ ಕಾಣುವಂತೆ ಮಾಡಿ ದೇಹ ತೆಳ್ಳಗೆ ಸ್ಲಿಮ್ ಆಗಿ ಕಾಣುವಂತೆ ನಿಮ್ಮತ್ತ ನೋಟವನ್ನು ಬದಲಾಯಿಸುತ್ತದೆ.
  • ಜೀನ್ಸ್ ಧರಿಸುವಾಗ ಈ ವಿಷ್ಯ ತಿಳಿದಿರಲಿ : ಯಾವುದೇ ಋತುವಿರಲಿ, ಜೀನ್ಸ್ ಪ್ಯಾಂಟ್ ನೊಂದಿಗೆ ಯಾವುದಾದರೂ ಟಾಪ್ ಧರಿಸುವುದು ಮಾಮೂಲಿ. ಬೇಸಿಗೆಯಲ್ಲಿ ಸ್ಲಿಮ್ ಆಗಿ ಕಾಣಿಸಬೇಕೆಂದಿದ್ದರೆ ಕಪ್ಪು ಅಥವಾ ಗಾಢ ಬಣ್ಣದ, ದೊಡ್ಡ ಸೊಂಟದ ಸೈಜ್, ಸ್ಲಿಮ್ ಫಿಟ್ ಜೀನ್ಸ್ ಆಯ್ಕೆ ಮಾಡಿಕೊಳ್ಳುವುದನ್ನು ಮರೆಯದಿರಿ. ಈ ರೀತಿ ಜೀನ್ಸ್ ಪ್ಯಾಂಟ್ ಗಳ ಆಯ್ಕೆ ಮಾಡಿಕೊಂಡರೆ ನೀವು ಸ್ವಲ್ಪ ದಪ್ಪ ಇದ್ದರೂ ಕಾಲು ತೊಡೆ ಸ್ಲಿಮ್ ಆಗಿ ಕಾಣಿಸುತ್ತದೆ.
  • ಒಂದೇ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಳ್ಳಿ : ನೀವು ಎಷ್ಟೇ ಇದ್ದರೂ ನೀವು ಧರಿಸುವ ಬಟ್ಟೆಯೂ ಕೂಡ ನಿಮ್ಮನ್ನು ತೆಳ್ಳಗೆ ಅಥವಾ ದಪ್ಪಗೆ ಕಾಣುವಂತೆ ಮಾಡುತ್ತದೆ. ಒಂದು ವೇಳೆ ನೀವೇನಾದ್ರೂ ತೆಳ್ಳಗೆ ಕಾಣಿಸಿಕೊಳ್ಳಲು ಬಯಸಿದರೆ, ಮೇಲಿನಿಂದ ಕೆಳಕ್ಕೆ ಒಂದೇ ಬಣ್ಣ ಹೊಂದಿರುವ ಬಟ್ಟೆಯನ್ನೇ ಧರಿಸಿ. ಇದು ನೋಡುವವರ ಕಣ್ಣಿಗೆ ಲಂಬ ರೇಖೆಯನ್ನು ರಚಿಸುವ ಕಾರಣ ಎಷ್ಟೇ ದಪ್ಪ ಇದ್ದರೂ ಕೂಡ ಎತ್ತರವಾಗಿ ತೆಳ್ಳಗೆ ಕಾಣಿಸುವಂತೆ ಮಾಡುತ್ತದೆ.
  • ಎ-ಲೈನ್ ಉಡುಪುಗಳ ಆಯ್ಕೆಯಿರಲಿ : ಎ-ಲೈನ್ ಉಡುಪುಗಳು ದಪ್ಪಗೆ ಇರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಉದ್ದನೆಯ ಉಡುಪುಗಳು ಸೊಂಟವನ್ನು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಹೀಗಾಗಿ ದಪ್ಪ ಇರುವ ಹುಡುಗಿಯರು ಎ-ಲೈನ್ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?