AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಹಾರುತ್ತಿರುವ ಕನಸು ಬಿದ್ದರೆ, ಅದು ಶುಭವೇ, ಅಶುಭವೇ?

ಮಾನವರು ಕಾಣುವ ವಿವಿಧ ರೀತಿಯ ಕನಸುಗಳು ಬೇರೆ ಬೇರೆ ಸಂಕೇತವನ್ನು ವಿವರಿಸುತ್ತದೆ. ಒಬ್ಬ ವ್ಯಕ್ತಿಯು ಯಾವುದೇ ಕನಸನ್ನು ಕಂಡರೂ, ಅದಕ್ಕೆ ಖಂಡಿತವಾಗಿಯೂ ಕೆಲವು ಅರ್ಥ ಮತ್ತು ಚಿಹ್ನೆ ಇರುತ್ತದೆ. ಕನಸಿನ ವ್ಯಾಖ್ಯಾನವು ಯಾವ ರೀತಿಯ ಕನಸುಗಳು ಶುಭ ಮತ್ತು ಯಾವ ರೀತಿಯ ಕನಸುಗಳು ಶುಭವಲ್ಲ ಎಂದು ಹೇಳುತ್ತದೆ. ನಿಮಗೂ ಈ ರೀತಿಯ ಕನಸು ಬಿದ್ದಿದ್ದಾರೆ. ಅದರ ಸಂಕೇತವೇನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ನಿಮಗೆ ಹಾರುತ್ತಿರುವ ಕನಸು ಬಿದ್ದರೆ, ಅದು ಶುಭವೇ, ಅಶುಭವೇ?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 19, 2025 | 3:49 PM

Share

ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಅಥವಾ ಘಟನೆಯನ್ನು ನೋಡಿದ ನಂತರ ರಾತ್ರಿ ಅದೇ ಕನಸು ಬೀಳುತ್ತದೆ. ಇನ್ನು ಕೆಲವರಿಗೆ ಕೆಳಗೆ ಬೀಳುವ ಕನಸು, ಇನ್ನು ಕೆಲವರಿಗೆ ಆಕಾಶದಲ್ಲಿ ಹಾರುವ ಕನಸು ಬೀಳುತ್ತದೆ. ನೀವು ಕನಸಿನಲ್ಲಿ ಹಾರುತ್ತಿರುವುದನ್ನು ನೋಡಿದರೆ ಅದರ ಅರ್ಥವೇನು ಎಂಬ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಕನಸು ಅದೃಷ್ಟವನ್ನು ಸೂಚಿಸುತ್ತದೆಯೇ ಅಥವಾ ದೊಡ್ಡ ತೊಂದರೆ ಬರುವ ಸಾಧ್ಯತೆ ಇದೆಯೇ? ಎಂಬು ಬಗ್ಗೆ ಇಲ್ಲಿದೆ ಮಾಹಿತಿ. ಒಬ್ಬ ವ್ಯಕ್ತಿಯು ನಿದ್ರಿಸಿದ ನಂತರ ಕೆಲವು ವಿಚಿತ್ರ ಕನಸುಗಳನ್ನು ನೋಡುವುದು ಆಗಾಗ್ಗೆ ಸಂಭವಿಸುತ್ತದೆ. ಇದು ಅವನನ್ನು ಸಂಪೂರ್ಣವಾಗಿ ಆಶ್ಚರ್ಯಗೊಳಿಸುತ್ತದೆ. ಅವನಿಗೆ ಅಂತಹ ಕನಸು ಏಕೆ ಬಂತೆಂದು ಅರ್ಥವಾಗುತ್ತಿಲ್ಲ ಆದರೆ ಅದರ ಅರ್ಥವೇನು ಎಂಬ ಬಗ್ಗೆ ಗೊಂದಲ ಇರುತ್ತದೆ. ಒಂದು ಕನಸಿನಲ್ಲಿ ನೀವು ಗಾಳಿಯಲ್ಲಿ ಹಾರುತ್ತಿರುವುದನ್ನು ನೋಡುವುದು, ಕನಸಿನ ಶಾಸ್ತ್ರದ ಪ್ರಕಾರ, ನೀವು ಕನಸಿನಲ್ಲಿ ಹಾರುತ್ತಿರುವುದನ್ನು ನೋಡುವುದು ಶುಭ ಕನಸು ಎಂದರ್ಥ.

ಅಂತಹ ಕನಸನ್ನು ನೋಡಿದ ನಂತರ ನೀವು ಭಯಪಡುವ ಅಗತ್ಯವಿಲ್ಲ. ಜನರು ತಮ್ಮ ಕನಸಿನಲ್ಲಿ ಗಾಳಿಯಲ್ಲಿ ಹಾರುತ್ತಿರುವುದನ್ನು ನೋಡಿದರೆ, ಅವರ ಬಾಕಿ ಇರುವ ಕೆಲವು ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದರ್ಥ.ಕನಸಿನಲ್ಲಿ ತಮ್ಮನ್ನು ತಾವು ಹಾರುತ್ತಿರುವುದನ್ನು ನೋಡುವವರು.ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಅವರು ತಮ್ಮ ಕೆಲಸ, ವ್ಯವಹಾರ, ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕನಸಿನಲ್ಲಿ ನೀವು ಹಾರುತ್ತಿರುವುದನ್ನು ನೋಡುವುದು ಎಂದರೆ ನೀವು ಜೀವನದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದೀರಿ ಎಂದರ್ಥ.

ಇದನ್ನೂ ಓದಿ: ನೀವು ಹುಟ್ಟಿದ ವಾರದಲ್ಲಿ ಅಡಗಿದೆ ನಿಮ್ಮ ನಿಗೂಢ ವ್ಯಕ್ತಿತ್ವ

ಒಬ್ಬ ವ್ಯಕ್ತಿಯು ಎತ್ತರದ ಸ್ಥಳದಿಂದ ಬೀಳುತ್ತಿರುವುದನ್ನು ಕನಸಿನಲ್ಲಿ ನೋಡಿದರೆ, ಆ ವ್ಯಕ್ತಿಗೆ ಆರೋಗ್ಯ ಸಂಬಂಧಿತ ಸಮಸ್ಯೆ ಇರುತ್ತದೆ ಎಂದರ್ಥ. ಅವನು ತನ್ನ ದೈಹಿಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ಆಹಾರಕ್ರಮದ ಬಗ್ಗೆ ನೀವು ಗಮನ ಹರಿಸಬೇಕು. ಕನಸಿನಲ್ಲಿ ಬರುವ ಕೆಲವೊಂದು ಘಟನೆಗಳು ನಮ್ಮ ಜೀವನಶಲ್ಲಿ ನಡೆಯಲಿದೆ. ಆದ್ದರಿಂದ ಎಚ್ಚರಿಕೆ ಕ್ರಮವನ್ನು ಇಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ