Personality Test: ಮುಖದ ಆಕಾರ ಹೇಳುತ್ತೆ ನಿಮ್ಮ ನಿಜವಾದ ವ್ಯಕ್ತಿತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2024 | 5:36 PM

ಮನುಷ್ಯನ ಎಂದ ಮೇಲೆ ಒಬ್ಬರಿಗಿಂತ ಇನ್ನೊಬ್ಬರು ಭಿನ್ನವಾಗಿರುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯಲು ಆ ವ್ಯಕ್ತಿಯ ಜೊತೆಗೆ ಸ್ವಲ್ಪ ಬೆರೆಯಬೇಕಾಗುತ್ತದೆ. ಆದರೆ ನಿಮ್ಮ ಅಥವಾ ನಿಮ್ಮ ಸುತ್ತಮುತ್ತಲಿನ ಜನರ ವ್ಯಕ್ತಿತ್ವವು ಹೇಗೆ ಎಂದು ತಿಳಿಯಲು ಬಯಸಿದ್ದರೆ, ಅವರ ಮುಖವನ್ನು ಒಮ್ಮೆ ಗಮನಿಸಿ. ಹೌದು, ಪ್ರತಿಯೊಬ್ಬ ವ್ಯಕ್ತಿಯ ಮುಖದ ಆಕಾರವು ಬೇರೆ ಬೇರೆ ರೀತಿಯಾಗಿರುತ್ತದೆ. ಆಕಾರದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹಲವು ವಿಚಾರಗಳನ್ನು ಹೇಳುತ್ತೆ ಎನ್ನುವ ವಿಷಯ ನಿಮಗೆ ಗೊತ್ತಿದ್ಯಾ? ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಸಂಗತಿ ಇಲ್ಲಿದೆ.

Personality Test: ಮುಖದ ಆಕಾರ ಹೇಳುತ್ತೆ ನಿಮ್ಮ ನಿಜವಾದ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us on

ಈ ಪ್ರಪಂಚದಲ್ಲಿರುವ ವ್ಯಕ್ತಿಗಳು ನೋಡಲು ಒಂದೇ ರೀತಿ ಇರಲ್ಲ. ಅದೇ ತರಹ ವ್ಯಕ್ತಿತ್ವದಲ್ಲಿ ಭಿನ್ನತೆಯನ್ನು ಕಾಣಬಹುದು. ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆ ಮಾಡಿದರೆ ಅವರ ಗುಣ ಸ್ವಭಾವದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಗಮನಿಸಬಹುದು. ಆದರೆ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಹೇಗೆ ಎಂದು ನಿರ್ಣಯಿಸಲು ಅವರ ಜೊತೆಗೆ ಸಮಯ ಕಳೆಯಬೇಕಿಲ್ಲ. ಬದಲಾಗಿ ಆ ವ್ಯಕ್ತಿಯ ಮುಖದ ಆಕಾರವನ್ನು ನೋಡಿಯೇ ಅವರ ಗುಣಸ್ವಭಾವವನ್ನು ಅರಿತುಕೊಳ್ಳಬಹುದು. ಹಾಗಾದ್ರೆ ನಿಮ್ಮ ಮುಖವು ಯಾವ ಆಕಾರದಲ್ಲಿದೆ, ನಿಮ್ಮ ಗುಣಸ್ವಭಾವವೇನು? ಎಂದು ಇಲ್ಲಿ ತಿಳಿಯಿರಿ.

  • ಚೌಕಾಕಾರದ ಮುಖ: ಯಾರ ಮುಖ ಚೌಕಾಕಾರವಾಗಿ ಇರುತ್ತದೆಯೋ ಅವರು ಮೊಂಡುತನ, ಹೆಚ್ಚು ಸಕ್ರಿಯ, ವಿಶ್ಲೇಷಣಾತ್ಮಕ ಗುಣವನ್ನು ಹೊಂದಿರುತ್ತಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಯಿಂದ ತಪ್ಪಿಸಲು ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಕ್ರಿಯೇಟಿವಾಗಿ ಆಲೋಚಿಸುವ ಗುಣವನ್ನು ಹೊಂದಿದ್ದು, ಶಾಂತ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿಯೂ ಸನ್ನಿವೇಶ ನಿಭಾಯಿಸಿಕೊಂಡು ಹೋಗುತ್ತಾರೆ. ನಾಯಕತ್ವದ ಗುಣದೊಂದಿಗೆ ಇವರಲ್ಲಿ ಯೋಚನಾ ಸಾಮರ್ಥ್ಯವು ಅಧಿಕವಾಗಿದ್ದು, ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
  • ಮೊಟ್ಟೆಯಾಕಾರದ ಮುಖ : ವ್ಯಕ್ತಿಯ ಮುಖವು ಅಂಡಾಕಾರ ಅಥವಾ ಮೊಟ್ಟೆಯಕಾರದಲ್ಲಿದ್ದರೆ ಅಂತಹವರು ದಯಾಮಯಿಗಳಾಗಿರುತ್ತಾರೆ. ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರೊಂದಿಗೆ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಎಲ್ಲರನ್ನು ಸುಲಭವಾಗಿ ನಂಬುವ ವ್ಯಕ್ತಿತ್ವ ಇವರದ್ದಾಗಿದ್ದು, ಮೋಸ ಹೋಗುವುದೇ ಹೆಚ್ಚು. ಬುದ್ಧಿವಂತರು ಹಾಗೂ ಕಠಿಣ ಪರಿಶ್ರಮದ ವ್ಯಕ್ತಿಗಳಾಗಿದ್ದು ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಎರಡು ಬಾರಿ ಯೋಚಿಸುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ.
  • ವಜ್ರದ ಆಕಾರದ ಮುಖ : ಮುಖದ ಆಕಾರವು ವಜ್ರ ಆಕಾರವಾಗಿದ್ದರೆ ಆ ವ್ಯಕ್ತಿಗಳು ಯಾವುದೇ ಕೆಲಸವನ್ನು ಪ್ರಾರಂಭಿಸಿದಾಗ ಆ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಪ್ರತಿಯೊಂದು ವಿಷಯವನ್ನು ಕೂಲಂಕುಷ ಹಾಗೂ ಎಚ್ಚರಿಕೆಯಿಂದ ಪರಿಶೀಲಿಸುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ. ಆತ್ಮವಿಶ್ವಾಸ, ನಾಯಕತ್ವ ಗುಣಗಳು ಇವರಲ್ಲಿರುವ ಕಾರಣ ಎಷ್ಟೇ ಕಠಿಣ ಕೆಲಸವಾಗಿದ್ದರೂ ಮಾಡಿ ಮುಗಿಸುವ ಸಾಮರ್ಥ್ಯ ಇವರಿಗಿರುತ್ತದೆ.
  • ಕೋಲಾಕಾರದ ಮುಖ : ಉದ್ದನೆಯ ಅಥವಾ ಕೋಲಾಕಾರದ ಮುಖವನ್ನು ಹೊಂದಿರುವ ವ್ಯಕ್ತಿಗಳು ಮಹಾ ಬುದ್ಧಿವಂತರು. ಇತರರಿಗೆ ಹೋಲಿಸಿದರೆ ಇವರ ಬುದ್ಧಿವಂತಿಕೆಯ ಮಟ್ಟವು ಅಧಿಕವೆಂದೇ ಹೇಳಬಹುದು. ಈ ವ್ಯಕ್ತಿಗಳು ತಟಸ್ಥವಾಗಿದ್ದು, ಸ್ವಂತ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಇವರು ತಮ್ಮನ್ನು ಪ್ರಸ್ತುತಪಡಿಸುವ ರೀತಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
  •  ಹೃದಯಾಕಾರ ಮುಖ : ಈ ವ್ಯಕ್ತಿಗಳು ತುಂಬಾ ಸೃಜನಶೀಲತೆ ಹಾಗೂ ಭಾವನಾತ್ಮಕ ಬುದ್ಧಿವಂತಿಕೆಯಿಂದಲೇ ಗುರುತಿಸಿಕೊಳ್ಳುತ್ತಾರೆ. ಆದರೆ ಹಠಮಾರಿ ಹಾಗೂ ಆಕ್ರಮಣಕಾರಿ ವ್ಯಕ್ತಿತ್ವದಿಂದಲೇ ಎದುರಿಗಿರುವ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ತಲೆಬಾಗುವುದೇ ಇಲ್ಲ. ತಮ್ಮ ಆಲೋಚನೆಗಳಿಂದ ಎದುಗಿರುವ ವ್ಯಕ್ತಿಗಳನ್ನು ಮೆಚ್ಚಿಸುವ ಗುಣವನ್ನು ಹೊಂದಿರುತ್ತಾರೆ. ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಇವರಿಗೆ ಚೆನ್ನಾಗಿ ತಿಳಿದಿದೆ.
  • ದುಂಡಗಿನ ಮುಖ : ದುಂಡಾದ ಮುಖ ಉಳ್ಳವರು ದೊಡ್ಡ ಕನಸುಗಳುಳ್ಳ, ಮಹತ್ವಾಕಾಂಕ್ಷೆಯ ಹಾಗೂ ಪ್ರಾಯೋಗಿಕ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಅನ್ಯಾಯದ ವಿರುದ್ಧ ಮಾತನಾಡಲು ಹಿಂದೇಟು ಹಾಕುತ್ತಾರೆ. ಚುರುಕುತನದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ, ಒತ್ತಡವಿದ್ದರೂ ಎಲ್ಲಾ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗುವ ಗುಣವು ಇವರಲ್ಲಿರುತ್ತದೆ. ಆದರ್ಶ ಜೀವನವನ್ನು ನಡೆಸುತ್ತಾರೆ. ತಮ್ಮ ಮಾತು, ನಡವಳಿಕೆಯಿಂದಲೇ ಎಲ್ಲರನ್ನು ಆಕರ್ಷಿಸುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ