Personality Test: ನಿಮ್ಮ ಹಲ್ಲು ತ್ರಿಕೋನಾಕಾರದಲ್ಲಿದೆಯೇ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 15, 2025 | 3:56 PM

ವ್ಯಕ್ತಿಯ ವ್ಯಕ್ತಿತ್ವ ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಒಬ್ಬ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯ ಕಳೆದ ಮಾತ್ರಕ್ಕೆ ಆತ ಹೀಗೆ ಎನ್ನುವ ನಿರ್ಣಯಕ್ಕೆ ಬರುವುದು ಕಷ್ಟಕರ. ಆದರೆ ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿಯ ಕಣ್ಣು, ಮೂಗು, ಕಿವಿ, ಹಸ್ತ, ಬೆರಳಿನ ಆಕಾರದಿಂದಲೇ ಆ ವ್ಯಕ್ತಿ ಹೇಗೆಂದು ತಿಳಿದುಕೊಳ್ಳಬಹುದು. ಆದರೆ ಹಲ್ಲಿನ ಆಕಾರವು ವ್ಯಕ್ತಿಯ ನಿಗೂಢ ಗುಣಸ್ವಭಾವವನ್ನು ಬಿಚ್ಚಿಡುತ್ತೆ. ಹಾಗಾದ್ರೆ ನಿಮ್ಮ ಹಲ್ಲು ಯಾವ ಆಕಾರದಲ್ಲಿದೆ? ನಿಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

Personality Test: ನಿಮ್ಮ ಹಲ್ಲು ತ್ರಿಕೋನಾಕಾರದಲ್ಲಿದೆಯೇ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗೆ
ಸಾಂದರ್ಭಿಕ ಚಿತ್ರ
Follow us on

ವ್ಯಕ್ತಿಯೂ ನಕ್ಕಾಗ ಮುಖದಲ್ಲಿ ಕಾಣಿಸಿಕೊಳ್ಳುವುದೇ ಸುಂದರವಾದ ಬಿಳಪಾದ ಹಲ್ಲುಗಳು. ವ್ಯಕ್ತಿಯ ಸೌಂದರ್ಯವನ್ನು ದ್ವಿಗುಣಗೊಳಿಸುವುದೇ ಈ ಹಲ್ಲುಗಳು. ಆದರೆ ಹಲ್ಲು ಕಳೆಗುಂದಿದ್ದಲ್ಲಿ, ಹಲ್ಲಿನ ಆಕಾರವು ಸರಿಯಾಗಿಲ್ಲದಿದ್ದಲ್ಲಿ ಮುಖದ ಅಂದವೇ ಹಾಳಾಗುತ್ತದೆ. ಈ ಹಲ್ಲಿನ ಆಕಾರವು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆಯಂತೆ. ನಿಮ್ಮ ಹಲ್ಲು ಆಯಾತಾಕಾರ, ದುಂಡಾಕಾರ, ತ್ರಿಕೋನಕಾರವಾಗಿದೆಯೇ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಕಂಡುಕೊಳ್ಳಬಹುದು. ಹೌದು ನಿಮ್ಮ ಹಲ್ಲಿನ ಆಕಾರದಿಂದಲೇ ನಿಮ್ಮ ಗುಣಸ್ವಭಾವ ಹೇಗೆಂದು ತಿಳಿಯಿರಿ.

  • ಆಯತಾಕಾರದ ಹಲ್ಲು : ವ್ಯಕ್ತಿಯ ಹಲ್ಲು ಆಯತಾಕಾರದಲ್ಲಿದ್ದರೆ ಆ ವ್ಯಕ್ತಿಗಳು ಅತ್ಯಂತ ಸಹಕಾರ ಮತ್ತು ದಯೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಕಪಟವನ್ನು ಅರಿಯದ ಶುದ್ಧ ಮನಸ್ಸಿನವರು, ಹೀಗಾಗಿ ಎಲ್ಲರನ್ನು ಸೆಳೆಯುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳಾಗಿದ್ದು ಸಂಬಂಧವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಜಾಣರು. ತಮ್ಮ ಜೀವನದ ಕೆಲವು ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮೂಲಕ ಖುಷಿ ಕಾಣುತ್ತಾರೆ. ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರದ್ದು ಆಗಿರುತ್ತದೆ.
  • ಅಂಡಾಕಾರದ ಹಲ್ಲು : ಕೆಲವರು ಅಂಡಾಕಾರದ ಹಲ್ಲುಗಳನ್ನು ಹೊಂದಿದ್ದು, ಈ ವ್ಯಕ್ತಿಗಳು ಮುಕ್ತ ಮನಸ್ಸಿನವರಾಗಿರುತ್ತಾರೆ. ಯಾವುದೇ ಪರಿಸ್ಥಿತಿ ಗೆ ಹೊಂದಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಸಮತೋಲನ ಜೀವನ ನಡೆಸುವುದರೊಂದಿಗೆ ಉತ್ತಮ ಚಿಂತನೆಗೆ ಮಹತ್ವ ನೀಡುತ್ತಾರೆ. ಸ್ವತಂತ್ರವಾಗಿ ಯೋಚಿಸುವ ವ್ಯಕ್ತಿಗಳಾಗಿದ್ದು , ತಮ್ಮ ಆಲೋಚನೆಗಳನ್ನು ನೇರವಾಗಿ ಹೇಳುವ ಸ್ವಭಾವ ಇವರದ್ದು. ಎಲ್ಲರೊಂದಿಗೆ ಬೆರೆಯುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ.
  • ತ್ರಿಕೋನಾಕಾರದ ಹಲ್ಲು : ಹಲ್ಲಿನ ಆಕಾರವು ತ್ರಿಕೋನ ಆಕಾರದಲ್ಲಿದ್ದರೆ ಆ ವ್ಯಕ್ತಿಗಳು ಎಲ್ಲರನ್ನು ತನ್ನತ್ತ ಆಕರ್ಷಿಸುವ ಗುಣ ಹೊಂದಿರುತ್ತಾರೆ. ಕಲಾತ್ಮಕರು ಮತ್ತು ಸೃಜನಶೀಲ ರೀತಿಯಲ್ಲಿ ಕೆಲಸ ಮಾಡಲು ಇಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲರನ್ನು ಮೋಡಿ ಮಾಡುವ ಪ್ರವೃತ್ತಿಯನ್ನು ಹೊಂದಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಗುವಿನೊಂದಿಗೆ ಪರಿಹರಿಸಿಕೊಳ್ಳುತ್ತಾರೆ. ಇವರು ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದು ಸಮಾಜದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಾರೆ.
  • ಚೌಕಾಕಾರದ ಹಲ್ಲುಗಳು : ವ್ಯಕ್ತಿಯೂ ಚೌಕಾಕಾರದ ಹಲ್ಲುಗಳನ್ನು ಹೊಂದಿದ್ದರೆ ಅವರು ಹೃದಯದಿಂದ ತುಂಬಾನೇ ಒಳ್ಳೆಯವರು. ತಮ್ಮವರಿಂದ ಹೆಚ್ಚು ಪ್ರೀತಿಯನ್ನು ಬಯಸುತ್ತಾರೆ. ಹಾಗೂ ತಮ್ಮ ಪ್ರೀತಿ ಹಾಗೂ ಖುಷಿಯನ್ನು ಇತರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ. ಇವರ ಮನಸ್ಸನ್ನು ಯಾರೇ ನೋಯಿಸಿದರೂ ಅವರನ್ನು ದೂರ ಮಾಡಿಕೊಳ್ಳುವುದಿಲ್ಲ. ನೋಯಿಸಿದ್ದವರನ್ನು ಶುದ್ಧ ಮನಸ್ಸಿನಿಂದಲೇ ಪ್ರೀತಿಸುವ ಗುಣವನ್ನು ಹೊಂದಿರುತ್ತಾರೆ. ಸಂವಹನದಲ್ಲಿ ಇವರನ್ನು ಮೀರಿಸುವವರು ಯಾರು ಇಲ್ಲ, ಹೀಗಾಗಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ