ದೇಹದಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ತುಂಬಾ ಮುಖ್ಯ. ಇವುಗಳು ಆರೋಗ್ಯ ಸುಧಾರಿಸಲು ವ್ಯಾಯಾಮ ಅವಶ್ಯಕ. ದೈಹಿಕ ವ್ಯಾಯಾಮವು ವಿವಿಧ ರೂಪಗಳಲ್ಲಿ ಸಹಾಯ ಮಾಡುತ್ತವೆ. ಅವುಗಳಲ್ಲಿ ಒಂದು ಚರ್ಮದ ಆರೋಗ್ಯವೂ ಹೌದು. ಸ್ತ್ರೀ ರೋಗ ತಜ್ಞರಾದ ಡಾ. ಅಂಜಲಿ ಕುಮಾರ್ ಆರೋಗ್ಯಕರ ಚರ್ಮಕ್ಕಾಗಿ ದೈಹಿಕ ವ್ಯಾಯಾಮ ಉತ್ತಮ ಎಂದು ತಿಳಿಸಿದ್ದಾರೆ. ನಾವು ಆರೋಗ್ಯಕರ ಚರ್ಮಕ್ಕಾಗಿ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬೇಕು. ವ್ಯಾಯಾಮವು ಹೃದಯರಕ್ತನಾಳವನ್ನು ಸುಧಾರಿಸುತ್ತದೆ ಎಂದು ಡಾ.ಅಂಜಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವ್ಯಾಯಾಮವು ನೀವು ಫಿಟ್ ಆಗಿರುವುದರ ಜೊತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಧೂಳು, ಮಾಲಿನ್ಯದಿಂದ ಚರ್ಮದ ಅಲರ್ಜಿ ಸಮಸ್ಯೆ ಕಾಡಬಹುದು. ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ವ್ಯಾಯಾಮ ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡುವಾಗ ನಿಮ್ಮ ಹೃದಯ ಬಡಿತವು ಹೆಚ್ಚಾಗುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮ್ಮ ಚರ್ಮದ ಕೋಶಗಳನ್ನು ಸುಧಾರಿಸುತ್ತದೆ. ನಿಯಮಿತವಾದ ವ್ಯಾಯಾಮ ಚರ್ಮದ ನೈಸರ್ಗಿಕ ತೈಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದ ನಿಮ್ಮ ಮೈ ಬಣ್ಣವು ನಯವಾದ ಮತ್ತು ಮೃದುವಾಗಿರುತ್ತದೆ. ನೀವು ಹೊರಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದರೆ ಸನ್ಸ್ಕ್ರೀನ್ ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ನಿಯಮಿತವಾದ ವ್ಯಾಯಾಮ ಅಭ್ಯಾಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಫಿಟ್ ಆಗಿರಲು ಸಹಾಯ ಮಾಡುವುದರ ಜೊತೆಗೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ ನಿಯಮಿತವಾದ ವ್ಯಾಯಾಮ ಒಳ್ಳೆಯದು.
ಇದನ್ನೂ ಓದಿ:
Late Night Exercise: ರಾತ್ರಿ ಹೊತ್ತು ವ್ಯಾಯಾಮ ಮಾಡ್ತೀರಾ? ಈ ಕೆಲವು ವಿಷಯಗಳು ನೆನಪಿನಲ್ಲಿರಲಿ
Weight Loss: ಪ್ರತಿದಿನ ಮಾಡುವ ‘ರನ್ನಿಂಗ್ ಮತ್ತು ಜಂಪಿಂಗ್’ ವ್ಯಾಯಾಮ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯಕ