Beauty Tips: ಕುತ್ತಿಗೆ, ಮೊಣಕೈ ಮತ್ತು ಕಾಲುಗಳಲ್ಲಿ ಕಪ್ಪಾದ ಕಲೆಗಳಿವೆಯೇ? ಹೋಗಲಾಡಿಸಲು ಇಲ್ಲಿದೆ ಸರಳ ಸಲಹೆಗಳು

ನಿಮ್ಮ ಕುತ್ತಿಗೆ ಭಾಗದಲ್ಲಿ, ಮೊಣಕೈ ಮತ್ತು ಮೊಣಕಾಲುಗಳಲ್ಲಿ ಕಪ್ಪು ಕಲೆಗಳು ಕಂಡು ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಇಲ್ಲಿವೆ ಕೆಲವು ಮನೆಮದ್ದುಗಳು.

Beauty Tips: ಕುತ್ತಿಗೆ, ಮೊಣಕೈ ಮತ್ತು ಕಾಲುಗಳಲ್ಲಿ ಕಪ್ಪಾದ ಕಲೆಗಳಿವೆಯೇ? ಹೋಗಲಾಡಿಸಲು ಇಲ್ಲಿದೆ ಸರಳ ಸಲಹೆಗಳು
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 31, 2021 | 10:08 AM

ಸಾಮಾನ್ಯವಾಗಿ ಸೌಂದರ್ಯದ ಬಗ್ಗೆ ಎಲ್ಲರಿಗೂ ಹೆಚ್ಚಿನ ಕಾಳಜಿ ಇರುತ್ತದೆ. ನೋಡಲು ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇರುವುದು ಸಹಜ. ಹಾಗಿರುವಾಗ ಒಳ್ಳೆಯ ಡ್ರೆಸ್ ತೊಟ್ಟು ನೋಡಲು ಸುಂದರವಾಗಿ ಕಂಡರೆ ಸಾಲದು. ನಿಮ್ಮ ಚರ್ಮದ ಆರೈಕೆಯೂ ಹೆಚ್ಚು ಮುಖ್ಯ. ನಿಮ್ಮ ಕುತ್ತಿಗೆ ಭಾಗದಲ್ಲಿ, ಮೊಣಕೈ ಮತ್ತು ಮೊಣಕಾಲುಗಳಲ್ಲಿ ಕಪ್ಪು ಕಲೆಗಳು ಕಂಡು ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಕೆಲವು ಸರಳ ವಿಧಾನಗಳು ಈ ಕೆಳಗಿನಂತಿದೆ. ಸುಲಭದಲ್ಲಿ ಈ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸುವ ಕೆಲವು ಮದ್ದುಗಳ ಮೂಲಕ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಬಹುದಾಗಿದೆ. ಹಾಗಿರುವಾಗ ಬಳಸುವ ಪದಾರ್ಥಗಳಲ್ಲಿ ತಯಾರಾಗುವ ಔಷಧಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ. ಇವುಗಳನ್ನು ಅನುಸರಿಸುವ ಮೂಲಕ ಚರ್ಮದ ಆರೈಕೆ ಮಾಡಿಕೊಳ್ಳಿ.

ಈ ಕೆಲವು ಮನೆಮದ್ದುಗಳು ಕಪ್ಪು ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ ಅರ್ಧ ಚಮಚ ನಿಂಬೆ ರಸದಲ್ಲಿ ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳಿಗೆ ಅನ್ವಯಿಸಿ ಮತ್ತು ರಾತ್ರಿಯಿಡೀ ಹಾಗೆಯೇ ಬಿಡಿ. ಕೆಲವು ದಿನಗಳ ಕಾಲ ಇದನ್ನು ನಿರಂತರವಾಗಿ ಉಪಯೋಗಿಸಿ. ಇದರಿಂದ ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುವ ಕಪ್ಪು, ಕೆಸರು ಅಥವಾ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.

ಎರಡು ಚಮಚ ಜೇನುತುಪ್ಪದಲ್ಲಿ ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಸ್ನಾನ ಮಾಡುವ ಮೊದಲು ಕಪ್ಪಾದ ಜಾಗಕ್ಕೆ ಇದನ್ನು ಅನ್ವಯಿಸಿ. ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಬಿಡಿ. ಈ ನಂತರ ಸ್ನಾನ ಮಾಡಿ. ಚರ್ಮವು ಹೆಚ್ಚು ಮೃದುವಾಗುತ್ತದೆ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಒಂದು ಬಟ್ಟಲಿನಲ್ಲಿ ಹಸಿ ಆಲೂಗಡ್ಡೆಯನ್ನು ತುರಿದು ಅದಕ್ಕೆ ಮೊಸರು ಸೇರಿಸಿ ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳಿಗೆ ಕಚ್ಚಿ 10 ರಿಂದ 15 ನಿಮಿಷಗಳವರೆಗೆ ಹಾಗೆಯೇ ಒಣಗಲು ಬಿಡಿ. ಆ ಬಳಿಕ ಶುದ್ಧ ನೀರಿನಿಂದ ತೊಳೆಯಿರಿ. ಇದು ನಿಮ್ಮ ಕುತ್ತಿಗೆಗೆ ಅಂಟಿಕೊಂಡಿರುವ ಕೆಸರನ್ನು ಮತ್ತು ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ.

ಸೌತೆಕಾಯಿ ರಸವನ್ನು ಕಪ್ಪಾದ ಚರ್ಮಕ್ಕೆ ಹಚ್ಚಿ. ಜೊತೆಗೆ ಅಲೋವೆರಾ ಜೆಲ್ ಕೂಡ ಬಳಸಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಅಂಟಿರುವ ಕಪ್ಪು ಕಲೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಮೊಸರು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಮೊಸರಿನಲ್ಲಿ ಹನಿ ಬಿಳಿ ವಿನೇಗರ್ ಅನ್ನು ಮಿಶ್ರಣ ಮಾಡಿ ನಂತರ ಚರ್ಮಕ್ಕೆ ಅನ್ವಯಿಸಿ. ಇದು ನಿಮ್ಮ ಚರ್ಮಕ್ಕೆ ಅಂಟಿರುವ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ

Brown Rice: ಕುಚ್ಚಲಕ್ಕಿಯಲ್ಲಿ ಅಡಗಿದೆ ಸೌಂದರ್ಯ ಹೆಚ್ಚಿಸುವ ಗುಣಗಳು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್